ತಾಯಿಯ ಲಿವ್ ಇನ್ ಪಾರ್ಟ್ನರ್ ನಿಂದ 7 ವರ್ಷದ ಬಾಲಕನ ಹತ್ಯೆ!

ಕಳೆದ ರಾತ್ರಿ ಮಹಿಳೆ ಮನೆಯಲ್ಲಿ ಇಲ್ಲದ ವೇಳೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ವಿನೀತ್ ಚೌಧರಿ, ಮಕ್ಕಳನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಒಂದು ಹಂತದಲ್ಲಿ ಮನು ಎಂಬ ಬಾಲಕನನ್ನು ಗೋಡೆಗೆ ಅಪ್ಪಳಿಸಿದ್ದಾನೆ.
murder (file pic)
ಹತ್ಯೆ (ಸಾಂಕೇತಿಕ ಚಿತ್ರ)online desk

ಗುರುಗ್ರಾಮ: ಮಹಿಳೆಯೊಬ್ಬರ ಮಗನನ್ನು ಆಕೆಯ ಲಿವ್-ಇನ್ ಪಾರ್ಟ್ನರ್ ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ವರದಿಯಾಗಿದೆ.

ಹತ್ಯೆಗೀಡಾದ ಬಾಲಕನ ಹಿರಿಯ ಸಹೋದರ 9 ವರ್ಷದ ಬಾಲಕನನ್ನೂ ಆರೋಪಿ ಥಳಿಸಿದ್ದು, ಸಂತ್ರಸ್ತ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆ ಗುರುಗ್ರಾಮದ ರಾಜೇಂದ್ರ ಪಾರ್ಕ್ ಪ್ರದೇಶದಲ್ಲಿ ಬಾಲಕರ ತಾಯಿ ಇಲ್ಲದೇ ಇರುವಾಗ ನಡೆದಿದೆ.

ಪ್ರೀತಿ ಎಂಬ ಮಹಿಳೆ ಆತನ ಪತಿ ನಿಧನರಾದ ಬಳಿಕ ತನ್ನ ಇಬ್ಬರು ಮಕ್ಕಳಾದ ಮನು (7) ಹಾಗೂ ಪ್ರೀತ್ (8) ವಿನೀತ್ ಒಟ್ಟಿಗೆ ಚೌಧರಿ ಎಂಬಾತನ ಜೊತೆ ಜೀವಿಸುತ್ತಿದ್ದರು. ಕಳೆದ ರಾತ್ರಿ ಪ್ರೀತಿ ಮನೆಯಲ್ಲಿ ಇಲ್ಲದ ವೇಳೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ವಿನೀತ್ ಚೌಧರಿ, ಮಕ್ಕಳನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಒಂದು ಹಂತದಲ್ಲಿ ಮನು ಎಂಬ ಬಾಲಕನನ್ನು ಗೋಡೆಗೆ ಅಪ್ಪಳಿಸಿದ್ದಾನೆ. ಪರಿಣಾಮ ಆತ ಮೃತಪಟ್ಟಿದ್ದರೆ, ಪ್ರೀತ್ ಎಂಬ ಬಾಲಕನನ್ನು ನೆಲಕ್ಕೆ ಅಪ್ಪಳಿಸಿದ್ದಾನೆ. ಆತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

murder (file pic)
ತಮಿಳುನಾಡು BSP ರಾಜ್ಯಾಧ್ಯಕ್ಷನ ಹತ್ಯೆ: ಮೃತದೇಹವನ್ನು ಬಿಎಸ್ ಪಿ ಕಚೇರಿಯಲ್ಲಿ ಸಮಾಧಿ ಮಾಡುವಂತಿಲ್ಲ- ಕೋರ್ಟ್

ಮಹಿಳೆಗೆ ನೆರೆಯವರಿಂದ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಆಕೆ ಮನೆಗೆ ಧಾವಿಸಿದ್ದು, ತನ್ನ ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮನು ಆಸ್ಪತ್ರೆಗೆ ತೆರಳುವ ವೇಳೆಗೆ ಮೃತಪಟ್ಟಿದ್ದರೆ, ಪ್ರೀತ್ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

ತಮ್ಮ ಮಗ ಮತ್ತು ಪ್ರೀತಿಯ ಪತಿ ವಿಜಯ್ ಕುಮಾರ್ ಕಳೆದ ವರ್ಷ ಸಾವನ್ನಪ್ಪಿದ್ದಾರೆ ಎಂದು ಬಾಲಕರ ಅಜ್ಜ ಪೊಲೀಸರಿಗೆ ತಿಳಿಸಿದ್ದಾರೆ. ಮಗನ ಮರಣದ ನಂತರ, ಪ್ರೀತಿ ಮತ್ತು ಅವಳ ಮಕ್ಕಳು ವಿನೀತ್ ಜೊತೆ ವಾಸಿಸಲು ಪ್ರಾರಂಭಿಸಿದರು. ಹುಡುಗರ ಅಜ್ಜನ ಪ್ರಕಾರ, ವಿನೀತ್ ಅವರ ತಾಯಿಯ ಅನುಪಸ್ಥಿತಿಯಲ್ಲಿ ಅವರನ್ನು ಹೊಡೆಯುತ್ತಿದ್ದರು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿನೀತ್ ಎಂಬಾತನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com