ನಾನು ಅಸ್ಸಾಂ ಜನರೊಂದಿಗಿದ್ದೇನೆ; ಸಂಸತ್ತಿನಲ್ಲಿ ನಾನು ನಿಮ್ಮ ಯೋಧ: ರಾಹುಲ್ ಗಾಂಧಿ

ರಾಜ್ಯದಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿಯ ಕುರಿತಂತೆ ಬಿಜೆಪಿಯನ್ನು ರಾಹುಲ್ ಗಾಂಧಿ ಗುರಿಯಾಗಿಸಿಕೊಂಡರು. ಈ ವಿಪತ್ತು ಬಿಜೆಪಿಯ ಘೋರ ಮತ್ತು ಗಂಭೀರ ದುರಾಡಳಿತವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿPTI
Updated on

ಸಿಲ್ಚಾರ್(ಅಸ್ಸಾಂ): ಅಸ್ಸಾಂನಲ್ಲಿ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸಂಸದ ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರವಾಹದಿಂದ ಆಗಿರುವ ಹಾನಿ ಹೃದಯ ವಿದ್ರಾವಕವಾಗಿದ್ದು ರಾಜ್ಯಕ್ಕೆ ಕೇಂದ್ರ ಸರ್ಕಾರ ಕೂಡಲೇ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರವಾಹದಲ್ಲಿ ಜೀವ ಮತ್ತು ಅಪಾರ ಆಸ್ತಿ ನಷ್ಟವಾಗಿದೆ. ಮೃತರ ಕುಟುಂಬಗಳಿಗೆ ಅವರು ತಮ್ಮ ಆತ್ಮೀಯರನ್ನು ಕಳೆದುಕೊಂಡಿರುವುದಕ್ಕೆ ಸಂತಾಪವನ್ನೂ ವ್ಯಕ್ತಪಡಿಸಿದ್ದಾರೆ. ಅಸ್ಸಾಂನಲ್ಲಿ ಪ್ರವಾಹದಿಂದ ಉಂಟಾದ ಹಾನಿ ಹೃದಯ ವಿದ್ರಾವಕವಾಗಿದೆ. 8 ವರ್ಷದ ಅವಿನಾಶ್ ಅವರಂತಹ ಮುಗ್ಧ ಮಕ್ಕಳು ನಮ್ಮಿಂದ ದೂರವಾಗಿದ್ದಾರೆ. ರಾಜ್ಯದಾದ್ಯಂತ ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ರಾಜ್ಯದಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿಯ ಕುರಿತಂತೆ ಬಿಜೆಪಿಯನ್ನು ರಾಹುಲ್ ಗಾಂಧಿ ಗುರಿಯಾಗಿಸಿಕೊಂಡರು. ಈ ವಿಪತ್ತು ಬಿಜೆಪಿಯ ಘೋರ ಮತ್ತು ಗಂಭೀರ ದುರಾಡಳಿತವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಪ್ರವಾಹದಿಂದಾಗಿ ಅಸ್ಸಾಂನಲ್ಲಿ 60ಕ್ಕೂ ಹೆಚ್ಚು ಸಾವುಗಳು, 53,000 ಕ್ಕೂ ಹೆಚ್ಚು ಸ್ಥಳಾಂತರ, 24 ಲಕ್ಷ ಜನರು ಬಾಧಿತರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ಈ ಸಂಖ್ಯೆಗಳು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಮಗ್ರ ಮತ್ತು ಗಂಭೀರ ದುರಾಡಳಿತವನ್ನು ಪ್ರತಿಬಿಂಬಿಸುತ್ತವೆ ಎಂದು ಪೋಸ್ಟ್ ಹೇಳಿದೆ. ಪ್ರವಾಹ ಮುಕ್ತ ಅಸ್ಸಾಂನ ಭರವಸೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. 'ಅಸ್ಸಾಂಗೆ ಸಮಗ್ರ ಮತ್ತು ಸೂಕ್ಷ್ಮ ವಿಧಾನದ ಅಗತ್ಯವಿದೆ. ಅಲ್ಲದೆ, ಅಲ್ಪಾವಧಿಯಲ್ಲಿ ಸೂಕ್ತ ಪರಿಹಾರ, ಪುನರ್ವಸತಿ ಮತ್ತು ಪರಿಹಾರವನ್ನು ಒದಗಿಸಲು ಮತ್ತು ದೀರ್ಘಾವಧಿಯಲ್ಲಿ ಪ್ರವಾಹವನ್ನು ನಿಯಂತ್ರಿಸಲು ಎಲ್ಲಾ ಈಶಾನ್ಯ ಜಲ ನಿರ್ವಹಣಾ ಪ್ರಾಧಿಕಾರದ ಅವಶ್ಯಕತೆಯಿದೆ ಎಂದರು.

ರಾಹುಲ್ ಗಾಂಧಿ
Assam Floods: ಪ್ರವಾಹಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮುಳುಗಡೆ, 132 ವನ್ಯಮೃಗ ಸಾವು!

ಪ್ರವಾಹದಿಂದಾಗಿ ಅಸ್ಸಾಂನಲ್ಲಿ 60ಕ್ಕೂ ಹೆಚ್ಚು ಸಾವುಗಳು, 53,000 ಕ್ಕೂ ಹೆಚ್ಚು ಸ್ಥಳಾಂತರ, 24 ಲಕ್ಷ ಜನರು ಬಾಧಿತರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ಈ ಸಂಖ್ಯೆಗಳು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಮಗ್ರ ಮತ್ತು ಗಂಭೀರ ದುರಾಡಳಿತವನ್ನು ಪ್ರತಿಬಿಂಬಿಸುತ್ತವೆ ಎಂದು ಪೋಸ್ಟ್ ಹೇಳಿದೆ. ಪ್ರವಾಹ ಮುಕ್ತ ಅಸ್ಸಾಂನ ಭರವಸೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. 'ಅಸ್ಸಾಂಗೆ ಸಮಗ್ರ ಮತ್ತು ಸೂಕ್ಷ್ಮ ವಿಧಾನದ ಅಗತ್ಯವಿದೆ. ಅಲ್ಲದೆ, ಅಲ್ಪಾವಧಿಯಲ್ಲಿ ಸೂಕ್ತ ಪರಿಹಾರ, ಪುನರ್ವಸತಿ ಮತ್ತು ಪರಿಹಾರವನ್ನು ಒದಗಿಸಲು ಮತ್ತು ದೀರ್ಘಾವಧಿಯಲ್ಲಿ ಪ್ರವಾಹವನ್ನು ನಿಯಂತ್ರಿಸಲು ಎಲ್ಲಾ ಈಶಾನ್ಯ ಜಲ ನಿರ್ವಹಣಾ ಪ್ರಾಧಿಕಾರದ ಅವಶ್ಯಕತೆಯಿದೆ ಎಂದರು.

ಎಪಿಸಿಸಿಯ ಅಧಿಕೃತ ಪತ್ರದ ಪ್ರಕಾರ, ಅಸ್ಸಾಂನ ಪ್ರವಾಹ ಸಮಸ್ಯೆಗೆ ಪರಿಹಾರವು ಬೆಟ್ಟಗಳಲ್ಲಿದೆ. ಬೆಟ್ಟಗಳಲ್ಲಿ ದೊಡ್ಡ ಪ್ರಮಾಣದ ಅರಣ್ಯನಾಶದಿಂದಾಗಿ ಅಸ್ಸಾಂನ ನದಿಗಳಲ್ಲಿ ಅಪಾರ ಪ್ರಮಾಣದ ಹೂಳು ಸಂಗ್ರಹವಾಗಿದೆ. ಇದರಿಂದಾಗಿ ನದಿ ಪಾತ್ರದ ನೀರಿನ ಮಟ್ಟ ಹೆಚ್ಚಿದ್ದು, ಅಸ್ಸಾಂನ ನದಿಗಳ ನೀರು ಸಾಗಿಸುವ ಸಾಮರ್ಥ್ಯ ಕ್ರಮೇಣ ಕಡಿಮೆಯಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com