ರಷ್ಯಾ, ಚೀನಾ ಸಂಬಂಧ ವೃದ್ಧಿ ನಡುವೆ ಮಹತ್ವದ ಭೇಟಿಗೆ ಮೋದಿ-ಫುಟಿನ್ ಸಜ್ಜು!

ಉಭಯ ನಾಯಕರು 2019ರಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ಮತ್ತು 2022ರಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗಿದ್ದರು.
ಪ್ರಧಾನಿ ಮೋದಿ- ಫುಟಿನ್
ಪ್ರಧಾನಿ ಮೋದಿ- ಫುಟಿನ್
Updated on

ನವದೆಹಲಿ: ರಷ್ಯಾ, ಚೀನಾ ನಡುವೆ ಸಂಬಂಧ ವೃದ್ಧಿಯಾಗುತ್ತಿರುವಂತೆಯೇ ಮೋದಿ ಫುಟಿನ್ ಮಹತ್ವದ ಭೇಟಿಗೆ ಸಜ್ಜಾಗಿದ್ದಾರೆ. ಮಾಸ್ಕೋದಲ್ಲಿ ಜುಲೈ 9 ರಂದು ನಡೆಯಲಿರುವ 22 ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಸ್ಪರ ಭೇಟಿಯಾಗಲಿದ್ದಾರೆ. ಫೆಬ್ರವರಿ 24, 2022 ರಂದು ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಘ ಪ್ರಾರಂಭವಾದ ಬಳಿಕ ಐದು ವರ್ಷಗಳಲ್ಲಿ ಮಾಸ್ಕೋಗೆ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ.

ಉಭಯ ನಾಯಕರು 2019ರಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ಮತ್ತು 2022ರಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗಿದ್ದರು. ವಿಮಾನ ನಿಲ್ದಾಣದಲ್ಲಿ ಇಂದು ಸಂಜೆ ರಷ್ಯಾ ಉಪ ಪ್ರಧಾನಿ ಡೆನಿಸ್ ಮಾಂಟುರೂವ್ ಅವರ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು. ರಾತ್ರಿ ಅಧ್ಯಕ್ಷ ಪುಟಿನ್ ಅವರು ಭೋಜನಕೂಟ ಆಯೋಜಿಸಿದ್ದಾರೆ.

ಪ್ರಧಾನಿ ಮೋದಿ- ಫುಟಿನ್
ಪಶ್ಚಿಮದ ದೇಶಗಳು ಅಸೂಯೆಯಿಂದ ನೋಡುತ್ತಿವೆ: ಪ್ರಧಾನಿ ಮೋದಿ ರಷ್ಯಾ ಭೇಟಿ ಬಗ್ಗೆ ಅಧ್ಯಕ್ಷರ ಕಚೇರಿ ಹೇಳಿಕೆ

ರಷ್ಯಾಕ್ಕೆ ತೆರಳುವ ಮುನ್ನ ಮಾತನಾಡಿದ ಪ್ರಧಾನಿ ಮೋದಿ, 'ನನ್ನ ಸ್ನೇಹಿತ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಮತ್ತು ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ದೃಷ್ಟಿಕೋನ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ. ಶಾಂತಿಯುತ ಮತ್ತು ಸ್ಥಿರವಾದ ಪ್ರದೇಶದಲ್ಲಿ ಬೆಂಬಲತ್ಮಾಕ ಪಾತ್ರ ವಹಿಸಲು ಬಯಸುತ್ತೇವೆ. ಈ ಭೇಟಿಯು ರಷ್ಯಾದಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿ ಮಾಡಲು ನನಗೆ ಅವಕಾಶ ಒದಗಿಸುತ್ತದೆ ಎಂದು ಹೇಳಿದರು.

ಭಾರತವು ರಷ್ಯಾದೊಂದಿಗೆ ಹೊಂದಿರುವ ಸಂಪ್ರದಾಯ ಮತ್ತು ಐತಿಹಾಸಿಕ ಸಂಬಂಧಗಳ ಹೊರತಾಗಿಯೂ, ರಷ್ಯಾ ಮತ್ತು ಚೀನಾ ನಡುವೆ ಬಾಂಧವ್ಯ ಹೆಚ್ಚಾಗುತ್ತಿರುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಕಝಾಕಿಸ್ತಾನದ ಅಸ್ತಾನಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ವೈಯಕ್ತಿಕವಾಗಿ ಭಾಗವಹಿಸಿರಲಿಲ್ಲ. ಅಧ್ಯಕ್ಷ ಪುಟಿನ್ ಚೀನಾದೊಂದಿಗಿನ ಸಂಬಂಧವನ್ನು 'ಇತಿಹಾಸದಲ್ಲಿ ಅತ್ಯುತ್ತಮ' ಎಂದು ಬಣ್ಣಿಸಿದರು. ರಷ್ಯಾ ಮತ್ತು ಚೀನಾ ನಡುವೆ ಸಂಬಂಧ ಹೆಚ್ಚಾಗುತ್ತಿರುವಂತೆಯೇ ಭಾರತವು ತನ್ನ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ಬಲಪಡಿಸಲು ಪ್ರಯತ್ನವನ್ನು ಮಾಡುತ್ತಿದೆ. ರಷ್ಯಾಗೆ ತೆರಳುವ ಮುನ್ನ ಪ್ರಧಾನಿ ಮೋದಿ ಅದನ್ನೇ ಪುನರುಚ್ಚರಿಸಿದ್ದಾರೆ.

ಪ್ರಧಾನಿ ಮೋದಿ- ಫುಟಿನ್
ಪುಟಿನ್ ಜೊತೆ ಮಾತುಕತೆ ಬಳಿಕ ಝೆಲೆನ್ಸ್ಕಿಗೆ ಕರೆ; ರಷ್ಯಾ-ಯುಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಭಾರತ ಬೆಂಬಲ!

ಇಂಧನ, ಭದ್ರತೆ, ವ್ಯಾಪಾರ, ಹೂಡಿಕೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜನರಿಂದ ಜನರ ವಿನಿಮಯದ ಕ್ಷೇತ್ರಗಳನ್ನು ಒಳಗೊಂಡಂತೆ ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯು ಕಳೆದ ಹತ್ತು ವರ್ಷಗಳಲ್ಲಿ ಮುಂದುವರೆದಿದೆ ಎಂದು ಮೋದಿ ಸೋಮವಾರ ಹೇಳಿದರು. ತಮಿಳುನಾಡಿನಲ್ಲಿ ಪರಮಾಣು ವಿದ್ಯುತ್ ಸ್ಥಾವರಕ್ಕಾಗಿ ರಷ್ಯಾದೊಂದಿಗೆ ಭಾರತವು ದೀರ್ಘಾವಧಿಯ ಯುರೇನಿಯಂ ಪೂರೈಕೆ ಒಪ್ಪಂದವನ್ನು ಭದ್ರಪಡಿಸಿಕೊಳ್ಳುವ ಸಾಧ್ಯತೆಯಿದೆ.

ಈ ಮಧ್ಯೆ ಭಾರತ ಮಿಲಿಟರಿ ಯಂತ್ರಗಳನ್ನು ಖರೀದಿಸಲು ಇತರ ಮಾರುಕಟ್ಟೆಗಳನ್ನು ನೋಡುತ್ತಿದ್ದರೂ ಸಹ, ಭಾರತದ ರಕ್ಷಣಾ ಆಮದುಗಳಲ್ಲಿ ಸುಮಾರು ಮೂರನೇ ಒಂದು ಭಾಗವು ಮಾಸ್ಕೋದಿಂದ ಬರುತ್ತಿದೆ. ಇದು ಕೆಲವು ವರ್ಷಗಳ ಹಿಂದೆ ಇದ್ದ ಮೂರನೇ ಎರಡರಷ್ಟು ಕಡಿಮೆಯಾಗಿದೆ. ಇದಕ್ಕೆ ಉಕ್ರೇನ್‌ನೊಂದಿಗಿನ ಸಂಘರ್ಷದ ನಂತರ ಬಿಡಿಭಾಗಗಳನ್ನು ಪೂರೈಸಲು ರಷ್ಯಾ ಅಸಮರ್ಥತೆಯೇ ಕಾರಣವಾಗಿದೆ. ಆದಾಗ್ಯೂ, ಭಾರತ ರಷ್ಯಾದಿಂದ ತನ್ನ ಆಮದುಗಳನ್ನು ಹೆಚ್ಚಿಸಿದ್ದರಿಂದ ದ್ವಿಪಕ್ಷೀಯ ಇಂಧನ ವ್ಯಾಪಾರವು ಸುಧಾರಿಸಿದೆ. ಭಾರತಕ್ಕೆ ರಷ್ಯಾದ ರಫ್ತು ಮೌಲ್ಯ 60 ಬಿಲಿಯನ್ ಡಾಲರ್ ನಷ್ಟದ್ದಾಗಿ. ಭಾರತದ ರಫ್ತುಮೌಲ್ಯ 4 ಬಿಲಿಯನ್ ಡಾಲರ್ ಆಗಿದೆ."ವ್ಯಾಪಾರ ಅಸಮತೋಲನ ಆದ್ಯತೆಯ ವಿಷಯವಾಗಿದ್ದು, ಈ ಬಗ್ಗೆ ರಷ್ಯದೊಂದಿಗೆ ಚರ್ಚಿಸಲಾಗುವುದು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಶುಕ್ರವಾರ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com