ಜುಲೈ 23ಕ್ಕೆ ಕೇಂದ್ರ ಬಜೆಟ್ ಮಂಡನೆ: ನಿರುದ್ಯೋಗ, ಹಣದುಬ್ಬರ, ತೆರಿಗೆ ಸುಧಾರಣೆಗೆ ಮೋದಿ 3.0 ಸರ್ಕಾರ ಆದ್ಯತೆ?

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಳಗೊಂಡ ಸಾಮಾಜಿಕ ವಲಯದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗವಾಗುವ ನಿರೀಕ್ಷೆ ಇದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವು ಜುಲೈ 23 ರಂದು ಸಂಸತ್ತಿನಲ್ಲಿ 2024-25 ರ ಬಜೆಟ್ ನ್ನು ಮಂಡಿಸಲಿದೆ. ಈ ಬಾರಿಯ ಬಜೆಟ್ ಮಂಡನೆಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜನರ ತೀರ್ಪನ್ನು ಗಮನಿಸಿ ಅದಕ್ಕೆ ವಿಶೇಷ ಒತ್ತು ಕೊಡುವ ಸಾಧ್ಯತೆಯಿದೆ.

ಮೋದಿ 3.0 ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಚುನಾವಣೆಯಲ್ಲಿ ದೇಶದ ಜನರು ನಿರುದ್ಯೋಗ, ಹೆಚ್ಚಿದ ಹಣದುಬ್ಬರ ಮತ್ತು ಪ್ರತಿಕೂಲವಾದ ತೆರಿಗೆ ನೀತಿಗಳಂತಹ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಈ ಆರ್ಥಿಕ ಸಮಸ್ಯೆಗಳು ಜನರನ್ನು ನೋಯಿಸುತ್ತಿವೆ, ಅವುಗಳನ್ನು ಬಗೆಹರಿಸಲು ಬಜೆಟ್ ಸೂಕ್ತ ವೇದಿಕೆಯಾಗಿದೆ.

2024-25ರ ಪೂರ್ಣ ಬಜೆಟ್‌ ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಬದಲಾವಣೆಗಳಿಗೆ ಸರ್ಕಾರ ಆದ್ಯತೆ ನೀಡಿದರೆ, ವೇತನ ಪಡೆಯುವ ನಾಗರಿಕರಿಗೆ ಸಹಾಯವಾಗುತ್ತದೆ. ಹಲವು ಸರಕುಗಳು ಮತ್ತು ಸೇವೆಗಳು ಸಮಾಜದ ಬೆಳೆಯುತ್ತಿರುವ ವಿಭಾಗಕ್ಕೆ ಕೈಗೆಟುಕುವಂತಿಲ್ಲ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಹೆಚ್ಚಿನ ದರ ತರ್ಕಬದ್ಧಗೊಳಿಸುವುದು ಜಿಎಸ್‌ಟಿ ಕೌನ್ಸಿಲ್ ಮೂಲಕ ನಿರ್ಣಯವಾಗುತ್ತದೆ. ಸರ್ಕಾರವು ಈ ಬಗ್ಗೆ ಬಜೆಟ್‌ನಲ್ಲಿ ಹೇಳಿಕೆಯನ್ನು ನೀಡಬಹುದು.

ಸಾಂದರ್ಭಿಕ ಚಿತ್ರ
ಕೇಂದ್ರ ಬಜೆಟ್ 2024-25: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮತ್ತೆ ಮನವಿ!

ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ತನ್ನ ಪಾತ್ರವನ್ನು ಸೀಮಿತಗೊಳಿಸಿದೆ, ತೃತೀಯ ಆರೋಗ್ಯ ಮತ್ತು ಉನ್ನತ ಶಿಕ್ಷಣವನ್ನು ಜನಸಾಮಾನ್ಯರಿಗೆ ತಲುಪದಂತೆ ಮಾಡಿದೆ. ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಲು ಸರ್ಕಾರ ನೋಡಿದರೆ, ಆರ್ಥಿಕತೆಯ ಹಲವಾರು ವಲಯಗಳಿಗೆ ಸಹಾಯ ಮಾಡುತ್ತದೆ.

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಳಗೊಂಡ ಸಾಮಾಜಿಕ ವಲಯದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗವಾಗುವ ನಿರೀಕ್ಷೆ ಇದೆ. ಗ್ರಾಮೀಣ ಭಾಗಕ್ಕೆ ಆದ್ಯತೆ ಮತ್ತು ಸಮಾಜದ ದುರ್ಬಲ ವರ್ಗಗಳನ್ನು ಸಬಲಗೊಳಿಸುವುದರ ಕಡೆಗೆ ಬಜೆಟ್‌ನಲ್ಲಿ ಹೆಚ್ಚು ಗಮನ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com