
ನವದೆಹಲಿ: ಇತ್ತೀಚಿಗಷ್ಟೇ ಮತ್ತೆ ಜಾರ್ಖಂಡ್ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಹೇಮಂತ್ ಸೊರೆನ್ ಅವರು ಶನಿವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾದರು.
ಹೇಮಂತ್ ಸೊರೆನ್ ಅವರು ಇಂದು ತಮ್ಮ ಪತ್ನಿ ಕಲ್ಪನಾ ಸೊರೆನ್ ಅವರೊಂದಿಗೆ ದೆಹಲಿಯ 10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು.
ಇದು ಸೌಜನ್ಯದ ಭೇಟಿ ಎಂದು ಹೇಳಿದ ಸೊರೆನ್, ಲೋಕಸಭೆ ಚುನಾವಣೆಯ ನಂತರ ಮತ್ತು ಅವರು ಜೈಲಿನಿಂದ ಹೊರಬಂದ ನಂತರ ಗಾಂಧಿ ಅವರನ್ನು ಭೇಟಿಯಾಗದ ಕಾರಣ ಇಂದು ಭೇಟಿಯಾಗಲು ಬಂದಿದ್ದೇನೆ ಎಂದರು.
ಜಾರ್ಖಂಡ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಲಾಗಿದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸೊರೆನ್, "ಜಾರ್ಖಂಡ್ ವಿಧಾನಸಭಾ ಚುನಾವಣೆಯ ಕುರಿತು ಚರ್ಚೆಗಳು ಮುಂದುವರಿಯಲಿವೆ... ಆದರೆ ಸೋನಿಯಾ ಗಾಂಧಿ ಅವರ ಜತೆ ಚುನಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ" ಎಂದು ಎಂದು ಹೇಳಿದರು.
"ಭಾರತೀಯರು ಬಹಳ ಸಂವೇದನಾಶೀಲರು ಮತ್ತು ಸಹಿಷ್ಣುಗಳು. ಅವರು ಬಹಳಷ್ಟು ಸಹಿಸಿಕೊಳ್ಳುತ್ತಾರೆ ಮತ್ತು ನಂತರ ಮತದಾನದ ಮೂಲಕ ತಮ್ಮ ಉತ್ತರ ನೀಡುತ್ತಾರೆ" ಎಂದು ಸೋನಿಯಾ ಗಾಂಧಿ ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು.
Advertisement