X ನಲ್ಲಿ ಮೋದಿ ಹೊಸ ಮೈಲಿಗಲ್ಲು, 100 ಮಿಲಿಯನ್ ದಾಟಿದ ಫಾಲೋವರ್‌ಗಳ ಸಂಖ್ಯೆ!
ನವದೆಹಲಿ: ವಿಶ್ವದ ಜನಪ್ರಿಯ ನಾಯಕರುಗಳಲ್ಲಿ ಒಬ್ಬರಾದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್(ಟ್ವಿಟರ್)ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಅವರ ಫಾಲೋವರ್‌ಗಳ ಸಂಖ್ಯೆ 100 ಮಿಲಿಯನ್ ಗಡಿ ದಾಟಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'X' ನಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ವಿಶ್ವ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ.
ಎಕ್ಸ್ನಲ್ಲಿ ಭಾರತೀಯ ರಾಜಕಾರಣಿಗಳಿಗೆ ಹೋಲಿಸಿದರೆ ಮೋದಿ ಅವರ ಫಾಲೋವರ್ಸ್ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ರಾಹುಲ್ ಗಾಂಧಿ ಅವರಿಗೆ 26.4 ಮಿಲಿಯನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 27.5 ಮಿಲಿಯನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರಿಗೆ 19.9 ಮಿಲಿಯನ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 7.4 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಇನ್ನು ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್ 6.3 ಮಿಲಿಯನ್, ತೇಜಸ್ವಿ ಯಾದವ್ಗೆ 5.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಎಕ್ಸ್ ಹ್ಯಾಂಡಲ್ನಲ್ಲಿ ಪ್ರಧಾನಿ ಮೋದಿಯವರ ಅಧಿಕೃತ ಖಾತೆಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 30 ಮಿಲಿಯನ್ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಸದ್ಯ 38.1 ಫಾಲೋವರ್ಸ್ ಹೊಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ದುಬೈನ ಶೇಖ್ ಮೊಹಮ್ಮದ್ (11.2 ಮಿಲಿಯನ್) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್) ಅವರಂತಹ ಇತರ ವಿಶ್ವ ನಾಯಕರಿಗಿಂತ ಮೋದಿ ಬಹಳ ಮುಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ