ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಹಡಗು; ಎಂಟು ಭಾರತೀಯರು ಸೇರಿ 9 ಜನರ ರಕ್ಷಣೆ

ಹಡಗಿನಲ್ಲಿ 13 ಭಾರತೀಯರು ಸೇರಿದಂತೆ ಒಟ್ಟು 16 ಸಿಬ್ಬಂದಿ ಇದ್ದರು. ಉಳಿದ ಸಿಬ್ಬಂದಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
The vessel capsized off the coast of Oman -- 25 nautical miles southeast of Ras Madrakah in the Wilayat of Duqm on Monday.
ನೌಕೆಯು ಸೋಮವಾರದಂದು ಒಮಾನ್‌ನ ಕರಾವಳಿಯಲ್ಲಿ, ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲಿ ದೂರದಲ್ಲಿ ಡುಕ್ಮ್‌ನ ವಿಲಾಯತ್‌ನಲ್ಲಿ ಮುಳುಗಿತು.Photo | Special arrangement
Updated on

ನವದೆಹಲಿ: ಒಮಾನ್‌ ಕರಾವಳಿಯಲ್ಲಿ ಭಾನುವಾರ ಮುಳುಗಿದ ಎಂಟಿ ಫಾಲ್ಕನ್‌ ಪ್ರೆಸ್ಟೀಜ್‌ ತೈಲ ಪೂರೈಕೆ ಹಡಗಿನಿಂದ ಒಂಬತ್ತು ಸಿಬ್ಬಂದಿ - ಎಂಟು ಭಾರತೀಯರು ಮತ್ತು ಒಬ್ಬರು ಶ್ರೀಲಂಕಾದವರನ್ನು ರಕ್ಷಿಸಲಾಗಿದೆ.

ಹಡಗಿನಲ್ಲಿ 13 ಭಾರತೀಯರು ಸೇರಿದಂತೆ ಒಟ್ಟು 16 ಸಿಬ್ಬಂದಿ ಇದ್ದರು. ಉಳಿದ ಸಿಬ್ಬಂದಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ರಕ್ಷಿಸಲಾದ 9 ಸಿಬ್ಬಂದಿ ಮಸ್ಕತ್‌ನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡುಕ್ಮ್‌ನ ವಿಲಾಯತ್‌ನಲ್ಲಿ ಸೋಮವಾರ ಈ ಹಡಗು ಮಗುಚಿ ಬಿದ್ದಿದ್ದು, ಇದು ಕೊಮೊರೊಸ್‌ ದೇಶದ ಧ್ವಜ ಹೊಂದಿದೆ ಎಂದು ಒಮಾನ್ ಕಡಲ ಪ್ರಾಧಿಕಾರ ತಿಳಿಸಿದೆ.

The vessel capsized off the coast of Oman -- 25 nautical miles southeast of Ras Madrakah in the Wilayat of Duqm on Monday.
ಒಮನ್ ಕರಾವಳಿಯಲ್ಲಿ ಮಗುಚಿ ಬಿದ್ದ ತೈಲ ಟ್ಯಾಂಕರ್: 13 ಭಾರತೀಯರು ಸೇರಿ 16 ಮಂದಿ ನಾಪತ್ತೆ; ರಕ್ಷಣೆಗೆ ಭಾರತದ ಯುದ್ಧನೌಕೆ INS Teg ದೌಡು!

ದುಬೈನ ಹಮ್ರಿಯಾ ಬಂದರಿನಿಂದ ಹೊರಟಿದ್ದ ಹಡಗು ಯೆಮೆನ್ ಬಂದರು ನಗರಿ ಏಡೆನ್‌ಗೆ ಹೋಗುತ್ತಿತ್ತು ಎಂದು ಶಿಪ್ಪಿಂಗ್ ವೆಬ್‌ಸೈಟ್ (marinetraffic.com)ನಲ್ಲಿ ಉಲ್ಲೇಖಿಸಲಾಗಿದೆ. ಡುಕ್ಮ್ ಬಂದರು ಒಮಾನ್‌ನ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com