
ಹರಿದ್ವಾರ: ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಜಬ್ರೆಡಾ ಗ್ರಾಮದಲ್ಲಿ, ಮಹಿಳೆಯೊಬ್ಬಳು ತನ್ನ 8 ವರ್ಷದ ಮಗನ ಮೇಲೆ ಕುಳಿತು, ನಿರ್ದಯವಾಗಿ ಥಳಿಸಿ, ಕಚ್ಚಿದ ಆಘಾತಕಾರಿ ಘಟನೆ ನಡೆದಿದೆ.
ಆಕೆ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಈ ದುಷ್ಕೃತ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಆತಂಕಕಾರಿ ವೀಡಿಯೊ ತುಣುಕಿನಲ್ಲಿ ಮಹಿಳೆ ತನ್ನ ಮಗನ ಮೇಲೆ ಕುಳಿತು, ಪದೇ ಪದೇ ಆತನ ಬಾಯಿಗೆ, ಕೆನ್ನೆಗೆ ಹೊಡೆಯುವುದು, ಕಚ್ಚುವುದು ಮತ್ತು ಉಸಿರುಗಟ್ಟಿಸುವುದನ್ನು ತೋರಿಸುತ್ತದೆ. ಈ ಸಮಯದಲ್ಲಿ ಆಕೆ ಕೋಪದಿಂದ ತನ್ನ ಮಗನ ತಲೆಯನ್ನು ನೆಲಕ್ಕೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಮಹಿಳೆಯ ಈ ಕೃತ್ಯ ವೈರಲ್ ಆದ ಹಿನ್ನಲೆಯಲ್ಲಿ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತು ತನಿಖೆ ಮುಂದುವರೆದಿರುವುದರಿಂದ ಮಹಿಳೆ ಈಗ ಪೊಲೀಸ್ ವಶದಲ್ಲಿದ್ದಾಳೆ ಎಂದು ತಿಳಿದು ಬಂದಿದೆ.
Advertisement