
ಕೋಝಿಕೋಡ್: ಕೇರಳದ ಕರಾವಳಿಯಲ್ಲಿ ದೋಣಿಗಳ ತಾಂತ್ರಿಕ ದೋಷದಿಂದ ಸಮುದ್ರದ ಮಧ್ಯದಲ್ಲಿ ಸಿಲುಕಿದ್ದ 43 ಮೀನುಗಾರರನ್ನು ಸೋಮವಾರ ರಕ್ಷಿಸಲಾಗಿದೆ. ಇಲ್ಲಿನ ಕೊಯಿಲಾಂಡಿ ಮತ್ತು ಬೇಪೋರ್ ಬಂದರುಗಳಿಂದ ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಿದ್ದ ಎರಡು ದೋಣಿಗಳು ಇಂಜಿನ್‌ಗಳು ಕೆಲಸ ಮಾಡದೇ ಸಮುದ್ರದಲ್ಲಿ ಮಧ್ಯದಲ್ಲಿ ಸಿಲುಕಿದ್ದವು.
ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಬೇಪೋರ್ ಮೀನುಗಾರಿಕೆ ಸಹಾಯಕ ನಿರ್ದೇಶಕರ ನಿರ್ದೇಶನದಂತೆ ಕೋಝಿಕ್ಕೋಡ್‌ನಲ್ಲಿ ಮೀನುಗಾರಿಕೆ ಸಾಗರ ಜಾರಿ ಇಲಾಖೆ ಶೀಘ್ರದಲ್ಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಸಮುದ್ರದಿಂದ ರಕ್ಷಿಸಲ್ಪಟ್ಟ ನಂತರ, ಮೀನುಗಾರರನ್ನು ಸುರಕ್ಷಿತವಾಗಿ ಆಯಾ ಬಂದರುಗಳಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.
Advertisement