ಆರ್ಥಿಕ ಸಮೀಕ್ಷೆ ಕೇಳಲಷ್ಟೇ ಚೆಂದ; ಅನಿಶ್ಚಿತ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕತೆ: ಕಾಂಗ್ರೆಸ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ಅಂಕಿ ಅಂಶಗಳೊಂದಿಗೆ ಆರ್ಥಿಕ ಸಮೀಕ್ಷೆ 2023-24 ಮಂಡಿಸಿದರು. ಆರ್ಥಿಕ ಸಮೀಕ್ಷೆಯು ಆರ್ಥಿಕತೆ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆಯಾಗಿದೆ.
ಜೈರಾಮ್ ರಮೇಶ್
ಜೈರಾಮ್ ರಮೇಶ್
Updated on

ನವದೆಹಲಿ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ಸಮೀಕ್ಷೆಯು, ಕೇಳಲಷ್ಟೇ ಚೆಂದವಾಗಿದ್ದು, ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಹಲವು ವರ್ಷಗಳಿಂದ ಅಪಾಯಕಾರಿ ಹಾಗೂ ಅನಿಶ್ಚಿತ ಪರಿಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ಅಂಕಿ ಅಂಶಗಳೊಂದಿಗೆ ಆರ್ಥಿಕ ಸಮೀಕ್ಷೆ 2023-24 ಮಂಡಿಸಿದರು. ಆರ್ಥಿಕ ಸಮೀಕ್ಷೆಯು ಆರ್ಥಿಕತೆ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆಯಾಗಿದೆ.

ಜೈರಾಮ್ ರಮೇಶ್
ಆರ್ಥಿಕ ಸಮೀಕ್ಷೆ 2023-24: 2025 ರಲ್ಲಿ ಶೇ. 6.5 ರಿಂದ 7 ರಷ್ಟು ಆರ್ಥಿಕ ಬೆಳವಣಿಗೆ ನಿರೀಕ್ಷೆ

ಗಿಗ್ ಕೆಲಸಗಾರರು, ಅಸಂಘಟಿತ ವಲಯದ ಕಾರ್ಮಿಕರು, ಅವರ ವೇತನವನ್ನು ದಿನಕ್ಕೆ ರೂ. 400ಕ್ಕೆ ಹೆಚ್ಚಳ, ಅಂಗನವಾಡಿ ಕಾರ್ಯಕರ್ತರಿಗೆ ಸಾಮಾಜಿಕ ಯೋಜನೆಗಳ ವಿಸ್ತರಣೆಯಂತಹ ರಕ್ಷಣೆಯ ಅಗತ್ಯವಿದೆ ಎಂದು ಕಾಂಗ್ರೆಸ್ ಸಂವಹನ ಘಟಕದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

ನಾಳಿನ ಬಜೆಟ್‌ಗೆ ಮುಂಚಿತವಾಗಿ ಬಿಡುಗಡೆ ಮಾಡಲಾದ 2023-24 ರ ಆರ್ಥಿಕ ಸಮೀಕ್ಷೆಯು ಆರ್ಥಿಕತೆ 'ಎಲ್ಲವೂ ಚೆನ್ನಾಗಿದೆ'ಎಂದು ಹೇಳಿಕೊಳ್ಳಲು ಅತ್ಯುತ್ತಮವಾಗಿದೆ. ದುರದೃಷ್ಟವಶಾತ್ ಪ್ರಧಾನಿ ಮತ್ತು ಭಾರತದ ಜನರಿಗೆ, ಆರ್ಥಿಕ ಪರಿಸ್ಥಿತಿ ತುಂಬಾ ಹತಾಶವಾಗಿದೆ. ಹೇಗಾದರೂ ಕೆಲವು ಕಟುವಾದ ಸಂಗತಿಗಳು ಹೊರಬರುತ್ತವೆ ಎಂದು ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಹಾರ ಹಣದುಬ್ಬರ ವರ್ಷಕ್ಕೆ ಸುಮಾರು ಶೇ. 10 ರಷ್ಟುಅನಿಯಂತ್ರಿತವಾಗಿದೆ, ನಿರ್ದಿಷ್ಟ ಆಹಾರಗಳ ಬೆಲೆಗಳು ತ್ವರಿತ ಗತಿಯಲ್ಲಿ ಬೆಳೆಯುತ್ತಿವೆ. ಧಾನ್ಯಗಳು ಶೇ. 11, ತರಕಾರಿಗಳು ಶೇ. 15, ಮಸಾಲೆ ಪದಾರ್ಥಗಳು ಶೇ.19 19 ಮತ್ತು ಹಾಲು ಶೇ.7 ರಷ್ಟು ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯಿಂದ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಕೋವಿಡ್-19 ರ ನಂತರದ ಆರ್ಥಿಕ ಚೇತರಿಕೆಯಲ್ಲಿ ಅಸಮಾನತೆ ಹೆಚ್ಚಾಗಿದ್ದು, ಗ್ರಾಮೀಣ ಭಾರತವು ಹಿಂದುಳಿದಿದೆ ಎಂದು ಅವರು ಹೇಳಿದ್ದಾರೆ.

"ಮೋದಿ ಸರ್ಕಾರದ ರೈತ ವಿರೋಧಿ ಮನಸ್ಥಿತಿಯನ್ನು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ. ಯೋಜಿತವಲ್ಲದ ಮತ್ತು ನ್ಯಾಯಸಮ್ಮತವಲ್ಲದ ರಫ್ತು ನಿಷೇಧಗಳೊಂದಿಗೆ ಆಮದು-ರಫ್ತು ನೀತಿಯ ದುರುಪಯೋಗ ಮತ್ತು ಅಗ್ಗದ ಆಮದಿನಿಂದ ರೈತರ ಆದಾಯವನ್ನು ದುರ್ಬಲಗೊಳಿಸಲು ಯೋಜಿಸಲಾಗಿದೆ. ಸರ್ಕಾರದ ನೀತಿ ನಿರೂಪಣೆಯ ಹುಚ್ಚಾಟಿಕೆಯಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ವ್ಯಾಪಾರ ನೀತಿಯ ವೈಫಲ್ಯವು ಭಾರತದ ಉತ್ಪಾದನಾ ಸಾಮರ್ಥ್ಯಗಳ ಅವನತಿಗೆ ಕಾರಣವಾಗಿದೆ ಎಂದು ಅವರು ಟೀಕಿಸಿದ್ದಾರೆ.

2014 ರಿಂದ, ಚೀನಾದಿಂದ ಆಮದುಗಳು ಒಟ್ಟಾರೆ ಆಮದಿನ ಶೇಕಡಾ 11 ರಿಂದ ಶೇಕಡಾ 16 ಕ್ಕೆ ಏರಿದೆ. ಈ ಅನಿಯಂತ್ರಿತ ಆಮದುಗಳು ದೇಶೀಯ MSMEಗಳನ್ನು ಮುಚ್ಚುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ನಿರ್ಣಾಯಕವಾದ ವಸತಿ ವಲಯ ಕೂಡ ಕಳಪೆಯಾಗಿದೆ. 2023 ರಲ್ಲಿ ಭಾರತದಲ್ಲಿ ವಸತಿ ರಿಯಲ್ ಎಸ್ಟೇಟ್ ಮಾರಾಟವು ಈಗ 2013 ರಲ್ಲಿ ಕಂಡ ಮಟ್ಟಕ್ಕೆ ಮರಳುತ್ತಿದೆ. ಖಾಸಗಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಕೇಂದ್ರದ ನೀತಿ ನಿರೂಪಣೆಯ ವೈಫಲ್ಯವನ್ನು ಆರ್ಥಿಕ ಸಮೀಕ್ಷೆಯು ವಾಸ್ತವಿಕವಾಗಿ ಒಪ್ಪಿಕೊಂಡಿದೆ ಎಂದು ರಮೇಶ್ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com