ಬಜೆಟ್ ವಿರೋಧಿಸಿ ಸಂಸತ್ ನಲ್ಲಿ ಇಂದು INDIA ಮೈತ್ರಿಕೂಟ ಪ್ರತಿಭಟನೆ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ‘ಈ ಬಾರಿಯ ಕೇಂದ್ರ ಬಜೆಟ್‌ನಿಂದ ಈಗಾಗಲೇ ಬಜೆಟ್‌ನ ಪರಿಕಲ್ಪನೆ ನಾಶವಾಗಿದೆ. ಬಹುತೇಕ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ತಾರತಮ್ಯ ಎಸಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
opposition leader Rahul Gandhi
ವಿಪಕ್ಷ ನಾಯಕ ರಾಹುಲ್ ಗಾಂಧಿonline desk
Updated on

ನವದೆಹಲಿ: ಕೇಂದ್ರ ಬಜೆಟ್ ವಿರೋಧಿಸಿ ಇಂದು ವಿಪಕ್ಷ INDIA ಮೈತ್ರಿಕೂಟ ಸಂಸತ್ ನಲ್ಲಿ ಪ್ರತಿಭಟನೆ ನಡೆಸಲಿದೆ.

ಕೇಂದ್ರ ಬಜೆಟ್ ನ್ನು ವಿಪಕ್ಷಗಳು ತಾರತಮ್ಯದ ಬಜೆಟ್ ಎಂದು ಹೇಳಿವೆ. ಲೋಕಸಭೆಯಲ್ಲಿ INDIA ಮೈತ್ರಿಕೂಟವನ್ನು ಪ್ರತಿನಿಧಿಸುವ ನಾಯಕರು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಸಿದ್ದು, ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ‘ಈ ಬಾರಿಯ ಕೇಂದ್ರ ಬಜೆಟ್‌ನಿಂದ ಈಗಾಗಲೇ ಬಜೆಟ್‌ನ ಪರಿಕಲ್ಪನೆ ನಾಶವಾಗಿದೆ. ಬಹುತೇಕ ರಾಜ್ಯಗಳಿಗೆ ಸಂಪೂರ್ಣ ತಾರತಮ್ಯ ಎಸಗಿದೆ. ಹೀಗಾಗಿ ಇದನ್ನು ವಿರೋಧಿಸುವುದು ಹೇಗೆ ಎಂಬ ಬಗ್ಗೆ ಭಾರತ ಮೈತ್ರಿಕೂಟ ಸಭೆ ನಡೆಸಲಾಯಿತು ಎಂದು ಹೇಳಿದ್ದಾರೆ.

opposition leader Rahul Gandhi
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ಕಡೆಗಣನೆ: ನೀತಿ ಆಯೋಗದ ಸಭೆ ಬಹಿಷ್ಕಾರ- ಸಿಎಂ ಸಿದ್ದರಾಮಯ್ಯ

ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಸರ್ಕಾರ ಬಿಜೆಪಿ ಬಜೆಟ್ ಮಂಡಿಸಿರುವುದರಿಂದ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

''ಬಜೆಟ್ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಜೆಪಿಯೇತರ ಸರಕಾರ ಇರುವಲ್ಲೆಲ್ಲಾ ಬಜೆಟ್ ಮಂಕಾಗಿದೆ. ಅಭಿವೃದ್ಧಿಯ ಹೆಸರಲ್ಲಿ ಏನೂ ಇಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತೇವೆ. ಸಂಸತ್ ನ ಒಳಗೂ ಧ್ವನಿ ಎತ್ತುತ್ತೇವೆ. ಇದು ಬಿಜೆಪಿಯ ಬಜೆಟ್ ಅಲ್ಲ, ಇದು ಇಡೀ ದೇಶದ ಬಜೆಟ್, ಆದರೆ ಅವರು ಇದನ್ನು ಬಿಜೆಪಿಯ ಬಜೆಟ್ ಎಂಬಂತೆ ಮಂಡಿಸಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com