
ನವದೆಹಲಿ: ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಮತದಾನದ ಹಕ್ಕುಗಳು ಗೊತ್ತು ಇದ್ಯಾವುದು ಮರೆಯುವ ಹಕ್ಕು? ಇದ್ಯಾವಾಗ ಬಂತು? ಎಂದು ಆಶ್ಚರ್ಯ ಚಕಿತರಾಗಿದ್ದರೆ, ಈ ವರದಿಯನ್ನು ಪೂರ್ಣವಾಗಿ ಓದಿ...
ಆರೋಪಿಯ ಹೆಸರುಗಳನ್ನು ಹೊಂದಿರುವ ನ್ಯಾಯಾಲಯದ ಆದೇಶಗಳನ್ನು ಆತ ನಿರ್ದೋಷಿ ಎಂದಾದರೆ ಸಾರ್ವಜನಿಕ ವೇದಿಕೆಗಳಿಂದ ತೆಗೆಯುವ right to be forgotten ವಿಷಯವನ್ನು ಪರಿಶೀಲಿಸುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಮರೆಯುವ ಹಕ್ಕು ತನ್ನದೇ ಆದ ಗಂಭೀರ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ನ ಸಿಜೆಐ ಡಿವೈ ಚಂದ್ರಚೂಡ್ ಅವರಿದ್ದ ಪೀಠ ಹೇಳಿದ್ದು, ಖುಲಾಸೆಗೊಂಡ ಅತ್ಯಾಚಾರದ ಆರೋಪಿಯ ಹೆಸರನ್ನು ಪೋರ್ಟಲ್ ಒಂದರಿಂದ ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.
ತೀರ್ಪುಗಳು ಸಾರ್ವಜನಿಕ ದಾಖಲೆಗಳ ಭಾಗವಾಗಿರುತ್ತದೆ ಮತ್ತು ನ್ಯಾಯಾಲಯಗಳಿಂದ ಅದನ್ನು ತೆಗೆದುಹಾಕುವ ಆದೇಶವು ಗಂಭೀರ ಪರಿಣಾಮಗಳನ್ನು ಹೊಂದಿರುತ್ತದೆ, ”ಎಂದು ಸಿಜೆಐ ಹೇಳಿದ್ದಾರೆ.
ಒಬ್ಬ ವ್ಯಕ್ತಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ಭಾವಿಸಿದ ಪೀಠ, "ತೀರ್ಪನ್ನು ಹಿಂತೆಗೆದುಕೊಳ್ಳುವಂತೆ ಹೈಕೋರ್ಟ್ ಅವರಿಗೆ (ಕಾನೂನು ಪೋರ್ಟಲ್) ಹೇಗೆ ನಿರ್ದೇಶಿಸುತ್ತದೆ? ತೀರ್ಪು ನೀಡಿದ ನಂತರ, ಅದು ಸಾರ್ವಜನಿಕ ದಾಖಲೆಯ ಭಾಗವಾಗುತ್ತದೆ" ಎಂದು ಹೇಳಿದೆ.
ನ್ಯಾಯಾಲಯ ತನ್ನ ವೆಬ್‌ಸೈಟ್‌ನಿಂದ ತೀರ್ಪನ್ನು ತೆಗೆದುಹಾಕುವಂತೆ ಕೇಳಿರುವ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ "ಇಂಡಿಯಾ ಕಾನೂನ್" ಪೋರ್ಟಲ್ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿದೆ. ಕಾರ್ತಿಕ್ ಥಿಯೋಡರ್ ಎಂಬಾತನ ಮನವಿಯ ಮೇರೆಗೆ, ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿದೆ.
Advertisement