
ನವದೆಹಲಿ: ಶುಲ್ಕ ವ್ಯವಸ್ಥೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸ್ಥಿತಿಗತಿಗಳು ಹಾಗೂ ಅವರ ಸುರಕ್ಷತೆಯನ್ನು ನಿಯಂತ್ರಿಸಲು ಕಾನೂನು ಜಾರಿಗೆ ತರುವಂತೆ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅವರು ಸೋಮವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಇಂದು ರಾಜ್ಯಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೆಹಲಿಯ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿಗಳ ಸಾವಿನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸುರ್ಜೇವಾಲಾ, "ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳನ್ನು ಏಕೆ ನಿಯಂತ್ರಿಸಲಾಗುವುದಿಲ್ಲ? ಶಿಕ್ಷಣವನ್ನು ಬಲಪಡಿಸಲು ಸರ್ಕಾರ ಏನು ಮಾಡುತ್ತಿದೆ? " ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ಶುಲ್ಕದ ಬಗ್ಗೆ, ಶಿಕ್ಷಣದ ಸ್ಥಿತಿಗತಿ ಬಗ್ಗೆ, ಶಿಕ್ಷಣ ನೀಡುವ ಜನರ ಸ್ಥಿತಿ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ಪರಿಸ್ಥಿತಿಗಳನ್ನು ನಿಯಂತ್ರಿಸಲು ಕಾನೂನು ಏಕೆ ಜಾರಿಗೆ ತರಬಾರದು? ಎಂದು ಪ್ರಶ್ನಿಸಿದರು.
"ಸರ್ಕಾರವು ಈ ಸಂಬಂಧ ಸಂಬಂಧಪಟ್ಟವರೊಂದಿಗೆ ಗಂಭೀರವಾಗಿ ಚರ್ಚಿಸಬೇಕು ಮತ್ತು ಈ ದೇಶದಲ್ಲಿ ಕೋಚಿಂಗ್ ಸಂಸ್ಥೆಗಳನ್ನು ನಿಯಂತ್ರಿಸಲು ಕಾನೂನು ಜಾರಿಗೆ ತರಬೇಕು ಎಂದು ನಾನು ನಿಮ್ಮ ಮೂಲಕ ಒತ್ತಾಯಿಸುತ್ತೇನೆ" ಎಂದು ಕಾಂಗ್ರೆಸ್ ಸಂಸದ ಹೇಳಿದರು.
ಕಳೆದ 10 ವರ್ಷಗಳಲ್ಲಿ ಶಿಕ್ಷಣ ವ್ಯಾಪಾರೀಕರಣದತ್ತ ಸಾಗುತ್ತಿದೆ ಎಂದ ಸುರ್ಜೆವಾಲಾ, 2014-15ರಲ್ಲಿ 2.88 ಲಕ್ಷ ಖಾಸಗಿ ಶಾಲೆಗಳಿದ್ದವು. 2020-21ರಲ್ಲಿ ಅವುಗಳ ಸಂಖ್ಯೆ 3.85 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ 10 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಸಂಸದೀಯ ಸಮಿತಿ ಹೇಳಿದೆ. ಕ್ರೋನಿ ಕ್ಯಾಪಿಟಲಿಸಂಗೆ ಉತ್ತೇಜನ ನೀಡುವ ಬದಲು ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
Advertisement