ಬಜೆಟ್ ಬಗ್ಗೆ ರಾಹುಲ್ ಗಾಂಧಿ ಭಾಷಣ ಕೇಳಿ ತಲೆ ಚಚ್ಚಿಕೊಂಡ ನಿರ್ಮಲಾ ಸೀತಾರಾಮನ್!

ರಾಹುಲ್ ಗಾಂಧಿಯ ಈ ಮಾತಿಗೆ ನಿರ್ಮಲಾ ಸೀತಾರಾಮನ್ ಹತಾಶರಾಗಿ ತಲೆ ಮೇಲೆ ಕೈ ಇಟ್ಟುಕೊಂಡು ತಲೆ ಚಚ್ಚಿಕೊಂಡ ವಿಡಿಯೋ ಈಗ ವೈರಲ್ ಆಗತೊಡಗಿದೆ.
Rahul Gandhi participating in the debate in the Lok Sabha, Nirmala Sitaraman
ರಾಹುಲ್ ಗಾಂಧಿ, ನಿರ್ಮಲಾ ಸೀತಾರಾಮನ್Photo | PTI
Updated on

ನವದೆಹಲಿ: ಸಂಸತ್ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿರಬೇಕಾದರೆ, ನಿರ್ಮಲಾ ಸೀತಾರಾಮನ್ ತಲೆ ಚಚ್ಚಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ.

ಕೇಂದ್ರ ಬಜೆಟ್ ನ್ನು ಮಧ್ಯಮ ವರ್ಗ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಟೀಕಾ ಪ್ರಹಾರ ನಡೆಸಿದರು.

ಬಜೆಟ್ ತಯಾರಿಕೆಯ ತಂಡದಲ್ಲಿ ವೈವಿಧ್ಯತೆಯ ಕೊರತೆಯ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಜೆಟ್ ಪೂರ್ವದಲ್ಲಿ ನಡೆಯುವ ಸಾಂಪ್ರದಾಯಿಕ ಹಲ್ವಾ ಸಮಾರಂಭದ ಪೋಸ್ಟರ್ ನ್ನು ಪ್ರದರ್ಶಿಸಿದ್ದು, ಬಜೆಟ್ ತಯಾರಿಕೆಯ ತಂಡದಲ್ಲಿದ್ದ 20 ಅಧಿಕಾರಿಗಳ ಪೈಕಿ ದಲಿತರು, ಒಬಿಸಿ, ಆದಿವಾಸಿಗಳ ಅನುಪಸ್ಥಿತಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದರು.

ಈ ಫೋಟೋದಲ್ಲಿ ಬಜೆಟ್ ಹಲ್ವಾ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಒಬ್ಬ ಒಬಿಸಿ, ಬುಡಕಟ್ಟು ಅಥವಾ ದಲಿತ ಅಧಿಕಾರಿಯೂ ಕಾಣುತ್ತಿಲ್ಲ. ದೇಶದ ಹಲ್ವಾ ವನ್ನು ವಿತರಣೆ ಮಾಡಲಾಗುತ್ತಿದೆ ಆದರೆ ಅದರಲ್ಲಿ ಶೇ.73 ರಷ್ಟು ಪ್ರಾತಿನಿಧ್ಯ ಇಲ್ಲವೇ ಇಲ್ಲ. 20 ಅಧಿಕಾರಿಗಳು ದೇಶದ ಬಜೆಟ್ ನ್ನು ತಯಾರಿಸಿದ್ದಾರೆ. ಹಿಂದೂಸ್ಥಾನದ ಹಲ್ವಾ ವಿತರಣೆ 20 ಜನರು ವಿತರಣೆ ಮಾಡುವ ಕೆಲಸವೆ? ಎಂದು ದೇಶದ ಬಹುಸಂಖ್ಯಾತ ಜನಸಂಖ್ಯೆಯನ್ನು ಬಜೆಟ್ ನಿಂದ ಹೊರಗಿಡಲಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳಲು ಯತ್ನಿಸಿದರು.

Rahul Gandhi participating in the debate in the Lok Sabha, Nirmala Sitaraman
ಬಜೆಟ್​ನಲ್ಲಿ ಕರ್ನಾಟಕಕ್ಕೆ ಚೊಂಬು: ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ರಾಹುಲ್ ಗಾಂಧಿಯ ಈ ಮಾತಿಗೆ ನಿರ್ಮಲಾ ಸೀತಾರಾಮನ್ ಹತಾಶರಾಗಿ ತಲೆ ಮೇಲೆ ಕೈ ಇಟ್ಟುಕೊಂಡು ತಲೆ ಚಚ್ಚಿಕೊಂಡ ವಿಡಿಯೋ ಈಗ ವೈರಲ್ ಆಗತೊಡಗಿದೆ.

ದೇಶದ ಪರಿಸ್ಥಿತಿ ಹೇಳಲು ಚಕ್ರವ್ಯೂಹದ ಉದಾಹರಣೆ ನೀಡಿದ ರಾಹುಲ್ ಗಾಂಧಿ!

ದೇಶದ ಈಗಿನ ಪರಿಸ್ಥಿತಿಯನ್ನು ವಿವರಿಸುವುದಕ್ಕೆ ರಾಹುಲ್ ಗಾಂಧಿ ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದರು.

ದೇಶದ ಬಡವರು ಹಾಗೂ ರೈತರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಚಕ್ರವ್ಯೂಹಕ್ಕೆ ಮತ್ತೊಂದು ಹೆಸರು ಪದ್ಮವ್ಯೂಹವಾಗಿದ್ದು, ಪದ್ಮ ಎಂದರೆ ಕಮಲ ಕಮಲ ಬಿಜೆಪಿಯ ಚಿಹ್ನೆಯಾಗಿದೆ ಎಂದು ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದರು.

ನೀವು ಚಕ್ರವ್ಯೂಹ ರಚಿಸಿ ನಾವು ಅದನ್ನು ಬೇಧಿಸುತ್ತೇವೆ ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದು, ಮಹಿಳೆಯರು, ಯುವಕರು, ರೈತರು, ಎಂಎಸ್ಎಂಇಗಳು ಚಕ್ರವ್ಯೂಹವನ್ನು ಎದುರಿಸುತ್ತಿರುವ ಅಭಿಮನ್ಯು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com