ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿ ಜನರು ಮತದಾನ ಮಾಡುವುದರೊಂದಿಗೆ ಭಾರತ ವಿಶ್ವ ದಾಖಲೆ ಸೃಷ್ಟಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಭಾರತದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರೆದಿದ್ದ ಚುನಾವಣೋತ್ತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 31.2 ಕೋಟಿ ಮಹಿಳೆಯರು ಸೇರಿದಂತೆ ಈ ಬಾರಿ 64. 2 ಕೋಟಿ ಮತದಾರರು ಮತದಾನದಲ್ಲಿ ಪಾಲ್ಗೊಂಡಿರುವುದಾಗಿ ಮಾಹಿತಿ ನೀಡಿದರು.
ಚುನಾವಣಾ ಆಯುಕ್ತರು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಮಿಮ್ಸ್ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯುಕ್ತರು ಯಾವಾಗಲೂ ಇಲ್ಲಿಯೇ ಇರುತ್ತಾರೆ. ಎಲ್ಲಯೂ ಹೋಗಲ್ಲ ಎಂದರು.
ವಿಶ್ವದ ಅತಿದೊಡ್ಡ ಚುನಾವಣಾ ಕಾರ್ಯದಲ್ಲಿ 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಚುನಾವಣಾ ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು.
2019 ರಲ್ಲಿ 540 ಮರು ಮತದಾನ ನಡೆದಿದ್ದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 39 ಮರುಮತದಾನಗಳು ನಡೆದಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ದಶಕಗಳಲ್ಲೆ ಈ ಬಾರಿ ಒಟ್ಟಾರೆ ಶೇಕಡಾ 58.58 ಮತ್ತು ಕಣಿವೆಯಲ್ಲಿ ಶೇಕಡಾ 51.05 ರಷ್ಟು ಮತದಾನವಾಗಿದೆ ಎಂದು ಸಿಇಸಿ ಹೇಳಿದೆ.
2019 ರಲ್ಲಿ 3,500 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, 2024 ರ ಚುನಾವಣೆಯಲ್ಲಿ ನಗದು, ಉಚಿತ ಕೊಡುಗೆಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ ರೂ. 10,000 ಕೋಟಿ ಮೌಲ್ಯದಷ್ಟು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಜೀವ್ ಕುಮಾರ್ ನೀಡಿದ ಇನ್ನಷ್ಟು ಪ್ರಮುಖ ಅಂಶಗಳು:
2024 ರ ಲೋಕಸಭೆ ಚುನಾವಣೆಯನ್ನು ನಡೆಸಲು ಸುಮಾರು ನಾಲ್ಕು ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಾಯು ಸೌಲಭ್ಯಗಳನ್ನು ಬಳಸಲಾಗಿದೆ
2024ರ ಸಾರ್ವತ್ರಿಕ ಚುನಾವಣೆ ವೇಳೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ದಾಖಲಾದ 495 ದೂರುಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಬಗೆಹರಿಸಲಾಗಿದೆ.
ಉನ್ನತ ನಾಯಕರಿಗೆ ಇಸಿ ನೋಟಿಸ್ ಜಾರಿ ಮಾಡಿದೆ. ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪಾರದರ್ಶಕ ಚುನಾವಣಾ ಪ್ರಕ್ರಿಯೆಗಾಗಿ ಉನ್ನತ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. 95-98 ಶೇಕಡಾ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿದ 48 ಗಂಟೆಗಳ ಒಳಗೆ EC ಅನುಮತಿ ನೀಡಿತು
ನಕಲಿ ಮತದಾನವನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸಿಂಥೆಟಿಕ್, AI ರಚಿತ ವಿಷಯ ಬಳಸಲಾಗಿದೆ.
ಮತಗಳ ಎಣಿಕೆಯ ಪ್ರಕ್ರಿಯೆಯು ಸಂಪೂರ್ಣವಾಗಿ ದೃಢಿಕೃತವಾಗಿರುತ್ತದೆ.
ಬಹು-ಪಕ್ಷ ನಿಯೋಗಗಳು ಪ್ರಸ್ತಾಪಿಸಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ.
ಚುನಾವಣಾ ನಂತರದ ಪರಿಶೀಲನೆಗೆ ಭಾರತೀಯ ಚುನಾವಣಾ ವ್ಯವಸ್ಥೆ ಅನುವು ಮಾಡಿಕೊಡುತ್ತದೆ
Advertisement