
ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದವರಲ್ಲಿ ಶೇ. 93 ರಷ್ಟು ಸಂಸದರು ಮಿಲಿಯನೇರ್‌ಗಳಾಗಿದ್ದಾರೆ. ಇದು 2019 ರಲ್ಲಿದ್ದ ಶೇ. 88 ರಿಂದ ಹೆಚ್ಚಾಗಿದೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.
ಅಗ್ರ ಮೂವರು ಶ್ರೀಮಂತ ಅಭ್ಯರ್ಥಿಗಳೆಂದರೆ ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದಿಂದ ಗೆದ್ದ ಟಿಡಿಪಿಯ ಚಂದ್ರಶೇಖರ್ ಪೆಮ್ಮಸಾನಿ 5,705 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ತೆಲಂಗಾಣದ ಚೆವೆಲ್ಲಾದಿಂದ ಗೆದ್ದಿರುವ ಬಿಜೆಪಿಯ ಕೊಂಡಾ ವಿಶ್ವೇಶ್ವರ್ ರೆಡ್ಡಿ ಒಟ್ಟು 4,568 ಕೋಟಿ ಆಸ್ತಿ ಹೊಂದಿದ್ದಾರೆ. ಹರಿಯಾಣದ ಕುರುಕ್ಷೇತ್ರದಿಂದ ಗೆದ್ದಿರುವ ಬಿಜೆಪಿಯ ನವೀನ್ ಜಿಂದಾಲ್ ರೂ. 1,241 ಕೋಟಿ ಸಂಪತ್ತು ಹೊಂದಿದ್ದಾರೆ.
543 ವಿಜೇತ ಅಭ್ಯರ್ಥಿಗಳಲ್ಲಿ 504 ಮಿಲಿಯನೇರ್‌ಗಳಾಗಿದ್ದಾರೆ. 2019 ರಲ್ಲಿ ಗೆದ್ದ 475 ಅಭ್ಯರ್ಥಿಗಳು (ಶೇ. 88 ರಷ್ಟು )ಮಿಲಿಯನೇರ್ ಆಗಿದ್ದರು. 2014 ರಲ್ಲಿ 443 ಅಭ್ಯರ್ಥಿಗಳು (ಶೇ. 88 ರಷ್ಟು ಮಂದಿ ಮಿಲಿಯನ್ ಆಗಿದ್ದರು. ಈ ಪ್ರವೃತ್ತಿಯು 2009 ರಿಂದ ಸ್ಥಿರವಾಗಿ ಏರಿಕೆಯಾಗುತ್ತಿದೆ. ಆಗ ಕೇವಲ 315 ( ಶೇ.58 ರಷ್ಟು) ಸಂಸದರು ಮಾತ್ರ ಲಕ್ಷಾಧಿಪತಿಗಳಾಗಿದ್ದರು.
ಎಡಿಆರ್ ವಿಶ್ಲೇಷಣೆಯ ಪ್ರಕಾರ, ಬಿಜೆಪಿಯ 240 ಗೆದ್ದ ಅಭ್ಯರ್ಥಿಗಳಲ್ಲಿ 227 ಸಂಸದರು, ಕಾಂಗ್ರೆಸ್‌ನ 99 ಸದಸ್ಯರಲ್ಲಿ 92 ಮಂದಿ , ಡಿಎಂಕೆಯ 22 ರಲ್ಲಿ 21, ಟಿಎಂಸಿಯ 27, ಸಮಾಜವಾದಿ ಪಕ್ಷದ 34 ಅಭ್ಯರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಎಎಪಿ (3), ಜೆಡಿಯು (12) ಮತ್ತು ಟಿಡಿಪಿ (16) ಎಲ್ಲಾ ವಿಜೇತ ಅಭ್ಯರ್ಥಿಗಳು ಮಿಲಿಯನೇರ್ ಆಗಿದ್ದಾರೆ.
ಪಶ್ಚಿಮ ಬಂಗಾಳದ ಪುರುಲಿಯಾದಿಂದ ಸ್ಪರ್ಧಿಸಿದ್ದ ಬಿಜೆಪಿಯ ಜ್ಯೋತಿರ್ಮಯ್ ಸಿಂಗ್ ಮಹತೋ ಅವರ ಒಟ್ಟು ಆಸ್ತಿ ಕೇವಲ 5 ಲಕ್ಷ ರೂ. ಆಗಿದೆ. ಅದೇ ರೀತಿ ಪಶ್ಚಿಮ ಬಂಗಾಳದ ಆರಂಬಾಗ್‌ನ ಟಿಎಂಸಿಯ ಮಿತಾಲಿ ಬ್ಯಾಗ್ 7 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಉತ್ತರ ಪ್ರದೇಶದ ಮಚ್ಲಿಶಹರ್‌ನ ಎಸ್ಪಿ ಅಭ್ಯರ್ಥಿ ಪ್ರಿಯಾ ಸರೋಜ್ ಅವರ ಆಸ್ತಿ ಮೌಲ್ಯ 11 ಲಕ್ಷ ರೂ. ಆಗಿದೆ.
Advertisement