JDU national general secretary KC Tyagi.
ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ(Photo | PTI)

ಹೊಸ ಕ್ಯಾತೆ ತೆಗೆದ JDU: ಅಗ್ನಿವೀರ್ ಯೋಜನೆ ಮರುಪರಿಶೀಲಿಸುವಂತೆ ಒತ್ತಾಯ

‘ಅಗ್ನಿವೀರ್ ಯೋಜನೆ ಬಗ್ಗೆ ಒಂದು ವರ್ಗದ ಮತದಾರರು ತೀವ್ರ ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕರಿಂದ ಪ್ರಶ್ನಿಸಲ್ಪಟ್ಟಿರುವ ಯೋಜನೆಗಳ ಕುರಿತು ವಿವರವಾಗಿ ಚರ್ಚಿಸಿ ತೆಗೆದುಹಾಕಬೇಕು.
Published on

ನವದೆಹಲಿ: ‘ಅಗ್ನಿವೀರ್ ಯೋಜನೆ ಬಗ್ಗೆ ಒಂದು ವರ್ಗದ ಮತದಾರರು ತೀವ್ರ ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕರಿಂದ ಪ್ರಶ್ನಿಸಲ್ಪಟ್ಟಿರುವ ಯೋಜನೆಗಳ ಕುರಿತು ವಿವರವಾಗಿ ಚರ್ಚಿಸಿ ತೆಗೆದುಹಾಕಬೇಕು ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಅವರು ಗುರುವಾರ ಹೇಳಿದ್ದಾರೆ.

"ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಬಿಹಾರ ಮುಖ್ಯಮಂತ್ರಿಗಳು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ನಾವು ಅದನ್ನು ವಿರೋಧಿಸುವುದಿಲ್ಲ ಆದರೆ ಎಲ್ಲಾ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು" ಎಂದು ತ್ಯಾಗಿ ತಿಳಿಸಿದ್ದಾರೆ.

ಜಾತಿ ಆಧಾರಿತ ಜನಗಣತಿ ಕುರಿತು ಮಾತನಾಡಿದ ಕೆ.ಸಿ.ತ್ಯಾಗಿ, "ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿ ಬೇಡ ಎಂದು ಹೇಳಿಲ್ಲ. ಬಿಹಾರ ಅದಕ್ಕೆ ಮಾರ್ಗ ತೋರಿಸಿದೆ. ಪ್ರಧಾನಿ ಕೂಡ ಸರ್ವಪಕ್ಷ ನಿಯೋಗದಲ್ಲಿ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಆಧಾರಿತ ಜನಗಣತಿಯನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.

JDU national general secretary KC Tyagi.
NDA ಸಂಚಾಲಕ ಹುದ್ದೆಗೆ TDP ಬೇಡಿಕೆ?: ಬಿಜೆಪಿಯಲ್ಲಿ ಟೆನ್ಶನ್, ಇಕ್ಕಟ್ಟಿನ ಪರಿಸ್ಥಿತಿ!

"ಯಾವುದೇ ಪೂರ್ವ ಷರತ್ತಿಲ್ಲದೆ ಬಿಜೆಪಿಗೆ ಬೇಷರತ್ ಬೆಂಬಲ ನೀಡಿದ್ದೇವೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಪಡೆಯುವುದು ನಮ್ಮ ಹೃದಯದಲ್ಲಿದೆ..." ಎಂದು ಅವರು ತಿಳಿಸಿದ್ದಾರೆ.

ನಿನ್ನೆ ದೆಹಲಿಯಲ್ಲಿ ನಡೆದ ಎನ್ ಡಿಎ ನಾಯಕರ ಸಭೆಯಲ್ಲಿ ಜೆಡಿಯು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾಗವಹಿಸಿ, ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡುವುದಾಗಿ ಪತ್ರ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com