ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶ: ಜೂನ್ 12 ರಂದು ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಪದಗ್ರಹಣ

ಆಂಧ್ರ ಪ್ರದೇಶದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಜೂನ್ 12 ರಂದು ಪದಗ್ರಹಣ ಮಾಡಲಿದ್ದಾರೆ. ಅಂದು ಸಂಜೆ 4.55ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟಿಡಿಪಿ ನಾಯಕ ಕೆ.ರಘುರಾಮ ಕೃಷ್ಣ ರಾಜು ಶುಕ್ರವಾರ ಮಾಹಿತಿ ನೀಡಿದ್ದಾರೆ.
Published on

ವಿಜಯವಾಡ: ಆಂಧ್ರಪ್ರದೇಶದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಜೂನ್ 12 ರಂದು ಪದಗ್ರಹಣ ಮಾಡಲಿದ್ದಾರೆ. ಅಂದು ಸಂಜೆ 4.55ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟಿಡಿಪಿ ನಾಯಕ ಕೆ.ರಘುರಾಮ ಕೃಷ್ಣ ರಾಜು ಶುಕ್ರವಾರ ಮಾಹಿತಿ ನೀಡಿದ್ದಾರೆ.

'ಇದು ರಾಜ್ಯದ ಜನತೆಗೆ ಅತ್ಯಂತ ಸುಂದರ ಕ್ಷಣವಾಗಿರಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಅವರನ್ನು ಶ್ಲಾಘಿಸಿದ್ದಾರೆ. ಈ ಇಬ್ಬರು ನಾಯಕರು ಮೋದಿ ಅವರಿಗೆ ಹೆಚ್ಚಿನ ಗೌರವ ನೀಡಿದ್ದಾರೆ. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಂದ ಆಗಿರುವ ಹಾನಿ ಸರಿಪಡಿಸಲು ಕೇಂದ್ರ ಸರ್ಕಾರದ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು
ಸ್ಪೀಕರ್ ಹುದ್ದೆ ಮೇಲೆ ಟಿಡಿಪಿ ಕಣ್ಣು; ಮೂರು ಬಾರಿಯ ಸಂಸದ, ಬಾಲಯೋಗಿ ಪುತ್ರ ಮುಂಚೂಣಿಯಲ್ಲಿ!

ನೂತನ ಮೋದಿ ಸಂಪುಟದಲ್ಲಿ ನಿರ್ದಿಷ್ಟ ಸಚಿವ ಸ್ಥಾನದ ಬಗ್ಗೆ ಟಿಡಿಪಿ ಏನಾದರೂ ಬೇಡಿಕೆ ಇಟ್ಟಿದ್ದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ. ರಘು ರಾಮ ಕೃಷ್ಣ ರಾಜು, "ಇದು ನಾನು ಪ್ರತಿಕ್ರಿಯಿಸುವ ವಿಷಯವಲ್ಲ. ಆದರೆ ನಮ್ಮ ಪಕ್ಷದ ನಾಯಕರು ಬೇಡಿಕೆ ಇಡುವಂತಹ ವ್ಯಕ್ತಿಯಲ್ಲ. ಅವರ ಉತ್ತಮ ಸಂಬಂಧದ ಬಲದಿಂದ ಎಷ್ಟು ಸಾಧ್ಯವೋ ಅಷ್ಟು ಹೊರತರಬಹುದು ಎಂದು ಭಾವಿಸುತ್ತೇನೆ. ಆದರೆ ಅವರು ಎಂದಿಗೂ ಬೇಡಿಕೆ ಇಡುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com