
ಕೋಲ್ಕತ್ತಾ: ಚಿತ್ರದ ಚಿತ್ರೀಕರಣವೊಂದರ ವೇಳೆ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ನಿಂದಿಸಿದ ರೆಸ್ಟೋರೆಂಟ್ ಮಾಲೀಕನ ಮೇಲೆ ನಟ ಕಮ್ ಟಿಎಂಸಿ ಶಾಸಕ ಸೋಹಮ್ ಚಕ್ರವರ್ತಿ ಹಲ್ಲೆ ನಡೆಸಿ ವಿವಾದ ಸೃಷ್ಟಿಸಿದ್ದಾರೆ.
ಈ ಘಟನೆ ಬಗ್ಗೆ ಚಕ್ರವರ್ತಿ ಮತ್ತು ರೆಸ್ಟೋರೆಂಟ್ ಮಾಲೀಕ ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ನ್ಯೂ ಟೌನ್‌ನಲ್ಲಿರುವ ಉಪಾಹಾರ ಗೃಹದ ಮುಂದೆ ಚಕ್ರವರ್ತಿ ಮತ್ತು ಅವರ ಕಡೆಯವರ ಕಾರುಗಳನ್ನು ನಿಲ್ಲಿಸುವ ವಿಚಾರದಲ್ಲಿ ಎರಡು ಕಡೆಯ ನಡುವೆ ವಿವಾದ ಶುರುವಾಗಿದೆ. ನಂತರ ಪರಿಸ್ಥಿತಿ ಬಿಗಡಾಯಿಸಿದ್ದು, ಸೋಹಮ್ ಚಕ್ರವರ್ತಿ, ಆಲಂ ಮೇಲೆ ಹಲ್ಲೆ ನಡೆಸುತ್ತಿರುವುದು ರೆಸ್ಟೋರೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ.
''ನರೇಂದ್ರ ಮೋದಿಯವರ ಸ್ನೇಹಿತರಾಗಲಿ ಅಥವಾ ಅಭಿಷೇಕ್ ಅವರ ಸ್ನೇಹಿತರಾಗಲಿ ನಾನು ಹೆದರುವುದಿಲ್ಲ ಎಂದಾಗ ಇದ್ದಕ್ಕಿದ್ದಂತೆ ಚಕ್ರವರ್ತಿ ಬಂದು ನನ್ನ ಮುಖಕ್ಕೆ ಹೊಡೆದು ನನ್ನ ಹೊಟ್ಟೆಗೆ ಒದ್ದರು" ಎಂದು ಆಲಂ ಆರೋಪಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕರಿಗೆ ಕಪಾಳಮೋಕ್ಷ ಮಾಡಿರುವುದನ್ನು ಚಕ್ರವರ್ತಿ ಒಪ್ಪಿಕೊಂಡಿದ್ದಾರೆ. ಆಲಂ ಅಭಿಷೇಕ್ ಬ್ಯಾನರ್ಜಿಯನ್ನು ನಿಂದಿಸಿದ್ದರಿಂದ ಕೋಪಗೊಂಡು ಹಲ್ಲೆ ಕಪಾಳ ಮೋಕ್ಷ ಮಾಡಿದ್ದೇನೆ. ಆದಾಗ್ಯೂ, ಮಾಲೀಕರಲ್ಲಿ ಕ್ಷಮೆ ಕೋರುವುದಾಗಿ ಹೇಳಿದರು.
ಟಿಎಂಸಿ ಶಾಸಕ ಮತ್ತು ರೆಸ್ಟೋರೆಂಟ್ ಮಾಲೀಕರಿಂದ ಪರಸ್ಪರ ದೂರುಗಳನ್ನು ಸ್ವೀಕರಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement