ಪಂಕಜಾ ಮುಂಡೆ-ಸಚಿನ್ ಕೊಂಡಿಬಾ
ಪಂಕಜಾ ಮುಂಡೆ-ಸಚಿನ್ ಕೊಂಡಿಬಾ

BJPಯ ಪಂಕಜಾ ಮುಂಡೆ ಸೋತರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು!

ಮಹಾರಾಷ್ಟ್ರದ ಲಾತೂರ್‌ನಲ್ಲಿ ಟ್ರಕ್ ಚಾಲಕನೊಬ್ಬ ಬಸ್‌ನಡಿ ಸಿಲುಕಿ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Published on

ಮಹಾರಾಷ್ಟ್ರದ ಲಾತೂರ್‌ನಲ್ಲಿ ಟ್ರಕ್ ಚಾಲಕನೊಬ್ಬ ಬಸ್‌ನಡಿ ಸಿಲುಕಿ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಿಜೆಪಿ ನಾಯಕಿ ಪಂಕಜಾ ಮುಂಡೆ ಲೋಕಸಭೆ ಚುನಾವಣೆಯಲ್ಲಿ ಬೀಡ್ ನಿಂದ ಸೋತರೆ ಪ್ರಾಣ ತ್ಯಾಗ ಮಾಡುವುದಾಗಿ ವಿಡಿಯೋ ಮಾಡಿದ್ದನು.

ಅಧಿಕಾರಿಗಳ ಪ್ರಕಾರ, ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬೋರ್ಗಾಂವ್ ಪಾಟಿ ಬಳಿಯ ಅಹ್ಮದ್‌ಪುರ-ಅಂಧೋರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಲಾತೂರ್‌ನ ಅಹಮದ್‌ಪುರದ ಯೆಸ್ಟಾರ್ ನಿವಾಸಿ ಸಚಿನ್ ಕೊಂಡಿಬಾ ಮುಂಡೆ (38) ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಬಂಧಿಸಲಾಗಿದೆ. ಇದು ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ತನಿಖೆಯ ಭಾಗವಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಿಂಗಾವ್ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಬಹುಸಾಹೇಬ್ ಖಂಡಾರೆ ತಿಳಿಸಿದ್ದಾರೆ. ಸಚಿನ್ ಅವಿವಾಹಿತನಾಗಿದ್ದು, ತಂದೆ-ತಾಯಿ ಹಾಗೂ ಸಹೋದರನೊಂದಿಗೆ ವಾಸವಿದ್ದನು. ಸಚಿನ್ ಪಂಕಜಾ ಮುಂಡೆ ಚುನಾವಣೆಯಲ್ಲಿ ಸೋತರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು ಈ ವಿಡಿಯೋ ವೈರಲ್ ಆಗಿತ್ತು.

ಪಂಕಜಾ ಮುಂಡೆ-ಸಚಿನ್ ಕೊಂಡಿಬಾ
'ನನ್ನ 18 ವರ್ಷಗಳ ಸಾರ್ವಜನಿಕ ಸೇವೆ ಹೀಗೆ ಅಂತ್ಯವಾಗುತ್ತೆ ಅಂತ ಭಾವಿಸಿರಲಿಲ್ಲ: ರಾಜೀವ್ ಚಂದ್ರಶೇಖರ್ ಭಾವನಾತ್ಮಕ ಪೋಸ್ಟ್

ಬೀಡ್ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನ ಬಜರಂಗ್ ಸೋನಾವಾನೆ ವಿರುದ್ಧ ಪಂಕಜಾ ಮುಂಡೆ 6,553 ಮತಗಳಿಂದ ತೀವ್ರ ಪೈಪೋಟಿಯಲ್ಲಿ ಸೋತಿದ್ದರು. ಪ್ರಾಸಂಗಿಕವಾಗಿ, ಚುನಾವಣಾ ಆಯೋಗವು ಜೂನ್ 5 ರಂದು ಬೀಡ್ ಚುನಾವಣೆಯ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿತ್ತು. ಚುನಾವಣಾ ಫಲಿತಾಂಶದ ನಂತರ ಸಚಿನ್ ಬೇಸರಗೊಂಡು ಮೌನವಾಗಿದ್ದನು ಎಂದು ಸಚಿನ್ ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com