Modi 3.0 swearing in Ceremony: ಮೋದಿ ಸಂಪುಟಕ್ಕೆ 72 ಸಚಿವರು ಸೇರ್ಪಡೆ

ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೋದಿ ಸಂಪುಟದ ಪ್ರಮುಖ ಸಚಿವರು
ಮೋದಿ ಸಂಪುಟದ ಪ್ರಮುಖ ಸಚಿವರು
Updated on

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೋದಿ ನಂತರ ಹಿರಿಯ ನಾಯಕರಾದ ರಾಜ್ ನಾಥ್ ಸಿಂಗ್, ಅಮಿತ್ ಶಾ, ಜೆಪಿ ನಡ್ಡಾ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಕೂಡ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯಯರ ಜೊತೆಗೆ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಹಲವಾರು ಹೊಸ ಮುಖಗಳನ್ನು ಮೋದಿ 3.0 ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ.

ಕರ್ನಾಟಕದವರು: ಈ ಬಾರಿ ಮೋದಿ ಸಂಪುಟದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮೋದಿ ಕ್ಯಾಬಿನೆಟ್ 3.0 ರಲ್ಲಿ ಸೇರ್ಪಡೆಗೊಂಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸೇರಿ ರಾಜ್ಯದಲ್ಲಿ 19 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಮಾಜಿ ಸಚಿವ ವಿ ಸೋಮಣ್ಣ, ಧಾರವಾಡ ಸಂಸದ ಈ ಹಿಂದೆಯೂ ಸಚಿವರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಾಜಿ ಸಚಿವ ವಿ ಸೋಮಣ್ಣ, ಧಾರವಾಡ ಸಂಸದ ಈ ಹಿಂದೆಯೂ ಸಚಿವರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎಂಎಲ್ ಖಟ್ಟರ್: ಹರಿಯಾಣದ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ವರ್ಷದ ಮಾರ್ಚ್‌ನಲ್ಲಿ, ವಿಧಾನಸಭೆ ಹೊಸ್ತಿಲಲ್ಲಿ ಖಟ್ಟರ್ ಅವರ ಸಿಎಂ ಸ್ಥಾನಕ್ಕೆ ನಯಾಬ್ ಸಿಂಗ್ ಸೈನಿ ಅವರನ್ನು ಪಕ್ಷ ನೇಮಿಸಿತು. ನಂತರ ಲೋಕಸಭೆ ಚುನಾವಣೆಯಲ್ಲಿ ಕರ್ನಾಲ್ ಕ್ಷೇತ್ರದಿಂದ ಕಣಕ್ಕಿಳಿದ ಖಟ್ಟರ್ ಅವರು 2,32,577 ಮತಗಳೊಂದಿಎ ಭಾರೀ ಅಂತರದ ಗೆಲುವು ಸಾಧಿಸಿದರು.

ಜಯಂತ್ ಚೌಧರಿ (RLD): ಚುನಾವಣೆಯಲ್ಲಿ ಜಯಂತ್ ಚೌಧರಿ ನೇತೃತ್ವದ ಆರ್‌ಎಲ್‌ಡಿ ಉತ್ತರ ಪ್ರದೇಶದಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಈ ಬಾರಿ ಬಿಜೆಪಿಗೆ ಯುಪಿಯಲ್ಲಿ ತೀವ್ರ ಹಿನ್ನಡೆಯಾಗಿದೆ.

ಲಾಲನ್ ಸಿಂಗ್ (ಜೆಡಿಯು): 69 ವರ್ಷದ ಲಾಲನ್ ಸಿಂಗ್ ಹೊಸ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 4 ಅವಧಿಯ ಸಂಸದರು ಜೆಡಿಯುನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದಾರೆ.

ಜಿತನ್ ರಾಮ್ ಮಂಜಿ (HAM): ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಮ್ ಮೋಹನ್ ನಾಯ್ಡು ಕಿಂಜಾರಪು (ಟಿಡಿಪಿ): 36 ವರ್ಷದ ಟಿಡಿಪಿ ನಾಯಕ ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರಪು ಸಂಪುಟದಲ್ಲಿನ ಅತ್ಯಂತ ಕಿರಿಯ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಶ್ರೀಕಾಕುಳಂ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಾರೆ, ಜೊತೆಗೆ ಟಿಡಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.

ಚಿರಾಗ್ ಪಾಸ್ವಾನ್ (LJP): ಲೋಕಜನ ಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಬಿಹಾರದ ಹಾಜಿಪುರದಿಂದ ಗೆದ್ದಿದ್ದಾರೆ. ಚಿರಾಗ್ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ.

ರಾಜೀವ್ ರಂಜನ್ ಸಿಂಗ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಂಪುಟ ಸಚಿವರಾಗಿ ಜೆಡಿಯುನಾಯಕ ರಾಜೀವ್ ರಂಜನ್ (ಲಾಲನ್) ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು:

ರಾಜನಾಥ ಸಿಂಗ್ (ಬಿಜೆಪಿ)

ಅಮಿತ್ ಶಾ (ಬಿಜೆಪಿ)

ನಿತಿನ್ ಗಡ್ಕರಿ (ಬಿಜೆಪಿ)

ಜೆ.ಪಿ. ನಡ್ಡಾ (ಬಿಜೆಪಿ)

ಶಿವರಾಜ ಸಿಂಗ್ ಚೌಹಾಣ (ಬಿಜೆಪಿ)

ನಿರ್ಮಲಾ ಸೀತಾರಾಮನ್ (ಬಿಜೆಪಿ)

ಎಸ್. ಜೈಶಂಕರ (ಬಿಜೆಪಿ)

ಮನೋಹರ ಲಾಲ ಖಟ್ಟರ್ (ಬಿಜೆಪಿ)

ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್‌)

ಪಿಯೂಷ್ ಗೋಯಲ್ (ಬಿಜೆಪಿ)

ಧರ್ಮೇಂದ್ರ ಪ್ರಧಾನ (ಬಿಜೆಪಿ)

ಜಿತನ್ ರಾಮ್ ಮಾಂಝಿ (ಎಚ್‌ಎಎಂ)

ರಾಜೀವ ರಂಜನ ಸಿಂಗ್ ಅಲಿಯಾಸ್ ಲಲ್ಲನ್‌ ಸಿಂಗ್ (ಜೆಡಿಯು)

ಸರ್ಬಾನಂದ ಸೋನೋವಾಲ್ (ಬಿಜೆಪಿ)

ಡಾ ವೀರೇಂದ್ರ ಕುಮಾರ (ಬಿಜೆಪಿ)

ಕಿಂಜರಾಪು ರಾಮ ಮೋಹನ ನಾಯ್ಡು (ಟಿಡಿಪಿ)

ಪ್ರಹ್ಲಾದ ಜೋಶಿ (ಬಿಜೆಪಿ)

ಜುಯಲ್ ಓರಮ್ (ಬಿಜೆಪಿ)

ಗಿರಿರಾಜ ಸಿಂಗ್ (ಬಿಜೆಪಿ)

ಅಶ್ವಿನಿ ವೈಷ್ಣವ (ಬಿಜೆಪಿ)

ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)

ಭೂಪೇಂದರ ಯಾದವ್ (ಬಿಜೆಪಿ)

ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)

ಅನ್ನಪೂರ್ಣ ದೇವಿ (ಬಿಜೆಪಿ)

ಕಿರಣ ರಿಜಿಜು (ಬಿಜೆಪಿ)

ಹರ್ದೀಪ್ ಸಿಂಗ್ ಪುರಿ (ಬಿಜೆಪಿ)

ಮನ್ಸುಖ್ ಮಾಂಡವಿಯಾ (ಬಿಜೆಪಿ)

ಜಿ ಕಿಶನ್ ರೆಡ್ಡಿ (ಬಿಜೆಪಿ)

ಚಿರಾಗ ಪಾಸ್ವಾನ್ (ಎಲ್‌ಜೆಪಿ)

ಸಿ.ಆರ್. ಪಾಟೀಲ (ಬಿಜೆಪಿ)

ರಾವ್ ಇಂದ್ರಜಿತ್ ಸಿಂಗ್ (ಬಿಜೆಪಿ)

ಜಿತೇಂದ್ರ ಸಿಂಗ್ (ಬಿಜೆಪಿ)

ಅರ್ಜುನ್ ರಾಮ ಮೇಘವಾಲ್ (ಬಿಜೆಪಿ)

ಪ್ರತಾಪರಾವ್ ಗಣಪತರಾವ್ ಜಾಧವ್ (ಶಿವಸೇನೆ)

ಜಯಂತ ಚೌಧರಿ (ಆರ್‌ಎಲ್‌ಡಿ)

ಜಿತಿನ್ ಪ್ರಸಾದ (ಬಿಜೆಪಿ)

ಶ್ರೀಪಾದ್ ನಾಯ್ಕ (ಬಿಜೆಪಿ)

ಪಂಕಜ ಚೌಧರಿ (ಬಿಜೆಪಿ)

ಕಿಶನ್ ಪಾಲ ಗುರ್ಜರ್ (ಬಿಜೆಪಿ)

ರಾಮದಾಸ್ ಅಠವಳೆ (ಆರ್‌ಪಿಐ)

ರಾಮನಾಥ ಠಾಕೂರ್ (ಜೆಡಿಯು)

ನಿತ್ಯಾನಂದ ರೈ (ಬಿಜೆಪಿ)

ಅನುಪ್ರಿಯಾ ಪಟೇಲ್ (ಅಪ್ನಾ ದಳ)

ವಿ ಸೋಮಣ್ಣ (ಬಿಜೆಪಿ)

ಡಾ. ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com