
ಭುವನೇಶ್ವರ: ಬಿಜೆಡಿ ಹಿರಿಯ ನಾಯಕ ಹಾಗೂ ಕಂಧಮಾಲ್‌ನ ಮಾಜಿ ಸಂಸದ ಅಚ್ಯುತಾನಂದ ಸಾಮಂತ ಅವರು ಲೋಕಸಭೆ ಚುನಾವಣೆಯ ಸೋಲಿನ ನಂತರ ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಸಾಮಂತಾ ಅವರು ಶನಿವಾರ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಸಕ್ರಿಯೆ ರಾಜಕೀಯಕ್ಕೆ ನಿವೃತ್ತಿ ಘೋಷಿಸುವ ಇಚ್ಛೆ
ವ್ಯಕ್ತಪಡಿಸಿದ್ದರು. ಬಿಜೆಡಿ ಅಭ್ಯರ್ಥಿಯಾಗಿ ರಾಜ್ಯಸಭೆ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ ಪಟ್ನಾಯಕ್ ಅವರಿಗೆ ಸಾಮಂತಾ ಅವರು ಧನ್ಯವಾದ ತಿಳಿಸಿದ್ದಾರೆ.
ಬಿಜೆಡಿ ಮಾಜಿ ಸಂಸದ ಸಾಮಂತಾ ಅವರು, ಪ್ರೀತಿ ಮತ್ತು ಬೆಂಬಲ ನೀಡಿದ ತಮ್ಮ ಕ್ಷೇತ್ರದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಿಸುವ ತಮ್ಮ ನಿರ್ಧಾರ ಪ್ರಕಟಿಸಿದ ಸಾಮಂತಾ ಅವರು, ಕಳೆದ 32 ವರ್ಷಗಳಿಂದ ಮಾಡುತ್ತಿರುವ ಸಮಾಜಸೇವೆಯನ್ನು ಮುಂದುವರಿಸುವುದಾಗಿ ಮತ್ತು ಸಮಾಜ ಸೇವೆಗೆ ನನ್ನ ಬದ್ಧತೆ ಕೊನೆಯ ಉಸಿರು ಇರುವವರೆಗೂ ಮುಂದುವರಿಯುತ್ತದೆ ಎಂದು ಹೇಳಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಕಂಧಮಾಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಕಾಂತ ಪಾಣಿಗ್ರಾಹಿ ವಿರುದ್ಧ ಸಾಮಂತಾ ಅವರು 21,371 ಮತಗಳ ಅಂತರದಿಂದ ಸೋಲು ಅನುಭವಿಸಿದರು.
Advertisement