
ಡೆಹ್ರಾಡೂನ್: ಉತ್ತರಾಖಂಡದ ಇತಿಹಾಸ ಪ್ರಸಿದ್ಧ ನಗರ ಜೋಶಿಮಠಕ್ಕೆ ಅಧಿಕೃತವಾಗಿ ಜ್ಯೋತಿರ್ಮಠ ಎಂದು ಮರುನಾಮಕರಣ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದ ನಂತರ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ. ಒಂದು ವರ್ಷದ ಹಿಂದೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಚಮೋಲಿ ಜಿಲ್ಲೆಯ ಜೋಶಿಮಠ ತಹಸಿಲ್‌ನ ಅಧಿಕೃತ ಹೆಸರನ್ನು ಜ್ಯೋತಿರ್ಮಠ ಎಂದು ಬದಲಾಯಿಸುವುದಾಗಿ ಘೋಷಿಸಿದರು.
ಕಳೆದ ವರ್ಷ ಚಮೋಲಿ ಜಿಲ್ಲೆಯ ಘಾಟ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಹಲವಾರು ಸಂಘಟನೆಗಳು ಆರಂಭದಲ್ಲಿ ಹೆಸರು ಬದಲಾವಣೆಯನ್ನು ಪ್ರಸ್ತಾಪಿಸಿದ್ದರು. ಜ್ಯೋತಿರ್ಮಠದವೆಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಔಪಚಾರಿಕವಾಗಿ ಘೋಷಿಸಲಾಗಿತ್ತು. 2023 ರ ಆರಂಭದಲ್ಲಿ ಪ್ರಕೃತಿ ವಿಕೋಪದಿಂದ ಭೂಮಿ ಮುಳುಗಡೆಯಾದ ನಂತರ ಬೆಳಕಿಗೆ ಬಂದ ಬದರಿನಾಥ ದೇಗುಲದ ಹೆಬ್ಬಾಗಿಲು ಜೋಶಿಮಠಕ್ಕೆ ಜ್ಯೋತಿರ್ಮಠ ಎಂದು ಹೆಸರಿಸಬೇಕೆಂದು ಬಹಳ ದಿನಗಳ ಬೇಡಿಕೆಯಾಗಿತ್ತು.
ಈ ವಿಚಾರವನ್ನು ಆದ್ಯತೆಯಾಗಿ ಪರಿಗಣಿಸಿದ ಮುಖ್ಯಮಂತ್ರಿ ಧಾಮಿ ,ಹೆಸರು ಬದಲಾಯಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇಂದ್ರದ ಅನುಮೋದನೆ ನಂತರ ಜ್ಯೋತಿರ್ಮಠ ತಹಸಿಲ್ ಎಂದು ಮರು ನಾಮಕರಣ ಮಾಡಲಾಗಿದೆ. ಸರ್ಕಾರದ ನಿರ್ಣಯವು ಸ್ಥಳೀಯ ಜನರಿಂದ ಮೆಚ್ಚುಗೆ ಪಡೆದಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಆದಿ ಗುರು ಶಂಕರಾಚಾರ್ಯರು 8ನೇ ಶತಮಾನದಲ್ಲಿ ಈ ಕ್ಷೇತ್ರಕ್ಕೆ ಬಂದಿದ್ದರು ಎಂದು ನಂಬಲಾಗಿದೆ. ಅವರು 'ಕಲ್ಪ-ವೃಕ್ಷ'ದ ಕೆಳಗೆ ಧ್ಯಾನ ಮಾಡಿ, ಜ್ಞಾನದ ದಿವ್ಯ ಬೆಳಕನ್ನು ಪಡೆದರು. ಅದರ ಮೂಲಕ ಮತ್ತು ಜ್ಯೋತಿಶ್ವರ ಮಹಾದೇವರ ಆಶೀರ್ವಾದದಿಂದ ಈ ಸ್ಥಳಕ್ಕೆ ಜ್ಯೋತಿರ್ಮಠ ಎಂದು ಹೆಸರು ಬಂದಿತ್ತು. ಆದರೆ ನಂತರ ಅದು ಜೋಶಿಮಠ ಎಂದು ಜನಪ್ರಿಯವಾಯಿತು. ಇದಾದ ನಂತರ ಹೆಸರು ಬದಲಾಯಿಸುವಂತೆ ನಿರಂತರ ಆಗ್ರಹ ಕೇಳಿಬಂದಿತ್ತು.
ಜೋಶಿಮಠ ವ್ಯಾಪಾರ ಮಂಡಲದ ಮುಖಂಡ ಜೈಪ್ರಕಾಶ ಭಟ್ ಮಾತನಾಡಿ, ‘ಸಾರ್ವಜನಿಕ ಭಾವನೆಗೆ ಸ್ಪಂದಿಸಿ ಜೋಶಿಮಠದ ಮೂಲ ಜ್ಯೋತಿರ್ಮಠ ಎಂದು ಮರುನಾಮಕರಣ ಮಾಡುವ ಸರ್ಕಾರದ ನಿರ್ಧಾರ ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ ಎಂದು ಹೇಳಿದರು.
Advertisement