
ನವದೆಹಲಿ: ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದದ ನಡುವೆಯೇ, ಎನ್‌ಸಿಇಆರ್‌ಟಿ 2014 ರಿಂದ ಆರ್‌ಎಸ್‌ಎಸ್ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಸೋಮವಾರ ಆರೋಪಿಸಿದ್ದಾರೆ.
NEET 2024 ರಲ್ಲಿನ 'ಗ್ರೇಸ್ ಮಾರ್ಕ್ಸ್' ವೈಫಲ್ಯಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ NCERT ಯನ್ನು ದೂಷಿಸಿದ ಕಾಂಗ್ರೆಸ್ ನಾಯಕ, ಅದು NTA ವೈಫಲ್ಯಗಳಿಂದ ಗಮನ ಬೆರೆಡೆ ಸೆಳೆಯುತ್ತಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಆದಾಗ್ಯೂ ಎನ್‌ಸಿಇಆರ್‌ಟಿಯು ಒಂದು ವೃತ್ತಿಪರ ಸಂಸ್ಥೆಯಾಗಿ ಉಳಿದಿಲ್ಲ ಎಂಬುದು ನಿಜ. ಅದರ ಪರಿಷ್ಕೃತ XI ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕವು ಜಾತ್ಯತೀತತೆಯ ಕಲ್ಪನೆಯನ್ನು ಟೀಕಿಸುತ್ತದೆ ಮತ್ತು ಈ ವಿಷಯದಲ್ಲಿ ರಾಜಕೀಯ ಪಕ್ಷಗಳ ನೀತಿಗಳನ್ನು ಪರಿಗಣಿಸುತ್ತಿರುವುದು ಈಗ ಬಹಿರಂಗವಾಗಿದೆ ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದರು.
"NCERT ಯ ಉದ್ದೇಶ ಪಠ್ಯಪುಸ್ತಕಗಳನ್ನು ತಯಾರಿಸುವುದು, ರಾಜಕೀಯ ಕರಪತ್ರಗಳನ್ನು ಸಿದ್ಧಪಡಿಸಿ, ಪ್ರಚಾರ ಮಾಡುವದಲ್ಲ”. ಎನ್‌ಸಿಇಆರ್‌ಟಿಯು ನಮ್ಮ ದೇಶದ ಸಂವಿಧಾನದ ಮೇಲೆ ಆಕ್ರಮಣ ನಡೆಸುತ್ತಿದೆ. ಅದರ ಮುನ್ನುಡಿಯಲ್ಲಿ ಜಾತ್ಯತೀತತೆಯು ಭಾರತೀಯ ಗಣರಾಜ್ಯದ ಅಡಿಪಾಯದ ಆಧಾರ ಸ್ತಂಭವಾಗಿದೆ. ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳು ಜಾತ್ಯತೀತತೆಯನ್ನು ಸಂವಿಧಾನದ ಮೂಲ ರಚನೆಯ ಅತ್ಯಗತ್ಯ ಭಾಗವೆಂದು ಪರಿಗಣಿಸಿವೆ” ಎಂದು ಅವರು ಹೇಳಿದರು.
ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಎಂಬುದನ್ನು ಸ್ವತಃ ನೆನಪಿಸಿಕೊಳ್ಳಬೇಕಾಗಿದೆ. ನಾಗ್ಪುರ ಅಥವಾ ನರೇಂದ್ರ ಕೌನ್ಸಿಲ್ ಅಲ್ಲ. ಅದರ ಎಲ್ಲಾ ಪಠ್ಯಪುಸ್ತಕಗಳು ಈಗ ಸಂಶಯಾಸ್ಪದವಾಗಿವೆ. ಶಾಲೆಯಲ್ಲಿ ನನ್ನನ್ನು ರೂಪಿಸಿದ ಪುಸ್ತಕಗಳಿಗಿಂತ ಹೆಚ್ಚು ಭಿನ್ನವಾಗಿವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.
Advertisement