INDIA ಕೂಟದ ಸಂಸದರಿಗೆ ಸಂಕಷ್ಟ: 136 ಸಂಸದರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ತಡೆಹಿಡಿಯುವಂತೆ ರಾಷ್ಟ್ರಪತಿಗೆ ಪತ್ರ

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರಿಗೆ ಪ್ರತಿ ತಿಂಗಳು 8500 ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಗ್ಯಾರಂಟಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು.
ರಾಹುಲ್ ಗಾಂಧಿ-ಅಖಿಲೇಶ್ ಯಾದವ್
ರಾಹುಲ್ ಗಾಂಧಿ-ಅಖಿಲೇಶ್ ಯಾದವ್
Updated on

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರಿಗೆ ಪ್ರತಿ ತಿಂಗಳು 8500 ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಗ್ಯಾರಂಟಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು.

ರಾಹುಲ್ ಗಾಂಧಿಯ ಖಟಾಖಟ್ ಘೋಷಣೆ ವಿರುದ್ಧ ದೆಹಲಿ ಮೂಲದ ಸುಪ್ರೀಂ ಕೋರ್ಟ್ ವಕೀಲ ವಿಭೋರ್ ಆನಂದ್ ಅವರು ಗಾಂಧಿ ಕುಟುಂಬ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಲಂಚದ ಆರೋಪ ಹೊರಿಸಿದ್ದು, ವಿರೋಧ ಪಕ್ಷದ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರಪತಿಯೂ 2024ರ ಜೂನ್ 24ರಂದು ಹೊಸದಾಗಿ ಚುನಾಯಿತರಾದ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ರಾಷ್ಟ್ರಪತಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್‌ನ 99 ಸಂಸದರು ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) 37 ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ತಡೆಹಿಡಿಯಬೇಕು ಎಂದು ಪತ್ರ ಬರೆದಿದ್ದಾರೆ. ಏಕೆಂದರೆ ಅವರ ಅನರ್ಹತೆಯ ಮನವಿಯು ರಾಷ್ಟ್ರಪತಿ ಬಳಿ ಬಾಕಿ ಉಳಿದಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದ ವಾರದಲ್ಲಿ ಆನಂದ್ ಅವರು ಕಾಂಗ್ರೆಸ್ ಮತ್ತು ಎಸ್‌ಪಿಯ ಎಲ್ಲಾ 136 ಸಂಸದರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು.

ರಾಹುಲ್ ಗಾಂಧಿ-ಅಖಿಲೇಶ್ ಯಾದವ್
ರಾಯ್ ಬರೇಲಿ ಉಳಿಸಿಕೊಂಡ ರಾಹುಲ್ ಗಾಂಧಿ; ವಯನಾಡ್ ನಿಂದ ಪ್ರಿಯಾಂಕಾ ಸ್ಪರ್ಧೆ: ಕಾಂಗ್ರೆಸ್

ಕಾಂಗ್ರೆಸ್ ಪಕ್ಷ ವೋಟ್ ಹಗರಣಕ್ಕೆ ಹಣದ ಭರವಸೆಯಲ್ಲಿ ತೊಡಗಿದೆ ಎಂದು ಆನಂದ್ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕುಖ್ಯಾತ "ಖಟಾಖತ್ ನಗದು ವರ್ಗಾವಣೆ" ಘೋಷಣೆಗಳು ಮತ್ತು ದೇಶದ ಹಲವು ರಾಜ್ಯಗಳಾದ್ಯಂತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಕ್ಷದ ಕಚೇರಿಗಳ ಹೊರಗೆ ಸರತಿ ಸಾಲಿನಲ್ಲಿ ಮಹಿಳೆಯರು ನಿಂತಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ವಕೀಲರ ಪ್ರಕಾರ, ಕಾಂಗ್ರೆಸ್‌ನ ಖಟಾಖತ್ ಯೋಜನೆ ಮತ್ತು ಗ್ಯಾರಂಟಿ ಕಾರ್ಡ್‌ಗಳ ವಿತರಣೆಯು ಮತದಾರರಿಗೆ ಲಂಚದ ಆಮಿಷ ನೀಡಿದಂತೆ. ಇತ್ತೀಚೆಗಷ್ಟೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪ್ರಾತಿನಿಧ್ಯ ಕಾಯಿದೆ, 1951ರ ಸೆಕ್ಷನ್ 123(1)ರ ಅಡಿಯಲ್ಲಿ ಕಾಂಗ್ರೆಸ್ ಅಪರಾಧ ಮಾಡಿದೆ. ಇದು ಮತದಾರರಿಗೆ ಲಂಚ ನೀಡುವ ಏಕೈಕ ಉದ್ದೇಶದಿಂದ ಸಂಪೂರ್ಣ ಭ್ರಷ್ಟ ಆಚರಣೆಗಳಿಗೆ ಸಮಾನವಾಗಿದೆ ಎಂದು ಆನಂದ್ ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿಗಳು ಕಾನೂನು ಅಭಿಪ್ರಾಯಕ್ಕೆ ಪತ್ರ ಕಳುಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com