
ಬಂಗಾಳ: ಗೂಡ್ಸ್ ರೈಲೊಂದು ಎಕ್ಸ್‌ಪ್ರೆಸ್ ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬಂಗಾಳದಲ್ಲಿ ಅಪಘಾತ ಸಂಭವಿಸಿದೆ.
ರೈಲು ಸಂಚರಿಸುತ್ತಿದ್ದ ಮಾರ್ಗದಲ್ಲಿ ರಾಣಿಪತ್ರ ರೈಲ್ವೆ ನಿಲ್ದಾಣ ಹಾಗೂ ಚತ್ತರ್ ಹಾತ್ ಜಂಕ್ಷನ್ ಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಬೆಳಿಗ್ಗೆ 5:50 ದೋಷಪೂರಿತವಾಗಿತ್ತು ಎಂದು ತಿಳಿದುಬಂದಿದೆ.
"ರೈಲು ಸಂಖ್ಯೆ 13174 (ಸೀಲ್ದಾಹ್ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್) ಬೆಳಿಗ್ಗೆ 8:27 ಕ್ಕೆ ರಂಗಪಾಣಿ ನಿಲ್ದಾಣದಿಂದ ಹೊರಟಿತು ಮತ್ತು 5:50 ರಿಂದ ಸ್ವಯಂಚಾಲಿತ ಸಿಗ್ನಲಿಂಗ್ ವೈಫಲ್ಯದಿಂದಾಗಿ ರಾಣಿಪತ್ರ ರೈಲು ನಿಲ್ದಾಣ ಮತ್ತು ಚತ್ತರ್ ಹ್ಯಾಟ್ ನಡುವೆ ನಿಂತಿತು" ಎಂದು ಮೂಲಗಳು ತಿಳಿಸಿವೆ.
ರೈಲ್ವೇ ಅಧಿಕಾರಿಯ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ವಿಫಲವಾದಾಗ, ಸ್ಟೇಷನ್ ಮಾಸ್ಟರ್ TA 912 ಎಂಬ ಲಿಖಿತ ಸಂದೇಶ ನೀಡುತ್ತಾರೆ, ಇದು ದೋಷದ ಕಾರಣ ವಿಭಾಗದಲ್ಲಿ ಎಲ್ಲಾ ಕೆಂಪು ಸಿಗ್ನಲ್ ದಾಟಲು ಚಾಲಕನಿಗೆ ಸೂಚನೆ ನೀಡುತ್ತದೆ. "ರಾಣಿಪತ್ರದ ಸ್ಟೇಷನ್ ಮಾಸ್ಟರ್ TA 912 ನ್ನು ರೈಲು ಸಂಖ್ಯೆ 1374 (ಸೀಲ್ದಾ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್) ಗೆ ನೀಡಿದ್ದರು" ಎಂದು ಮೂಲಗಳು ತಿಳಿಸಿವೆ.
ವೇಗದಲ್ಲಿ ದೋಷಪೂರಿತ ಸಿಗ್ನಲ್‌ಗಳನ್ನು ದಾಟಲು ಗೂಡ್ಸ್ ರೈಲಿಗೂ ಟಿಎ 912 ಅನ್ನು ನೀಡಲಾಗಿದೆಯೇ ಅಥವಾ ಲೊಕೊ ಪೈಲಟ್ ದೋಷಯುಕ್ತ ಸಿಗ್ನಲ್ ಮಾನದಂಡವನ್ನು ಉಲ್ಲಂಘಿಸಿದರೇ ಎಂಬುದನ್ನು ತನಿಖೆಯಿಂದ ಮಾತ್ರ ಕಂಡುಹಿಡಿಯಬಹುದು ಎಂದು ಮೂಲಗಳು ತಿಳಿಸಿವೆ.
Advertisement