
ಮುಂಬೈ: ಮುಂಬೈನ ವಸಾಯಿಯಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ನಡುರಸ್ತೆಯಲ್ಲೇ ಕಬ್ಬಿಣದ ಸ್ಪ್ಯಾನರ್ ನಿಂದ ತಲೆಗೆ 15 ಬಾರಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ವಸಾಯಿ ಪೂರ್ವದ ಚಿಂಚ್ಪಾಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯವನ್ನು ಸಾರ್ವಜನಕರು ನೋಡುತ್ತಾ ನಿಂತಿದ್ದರೆ ಹೊರತು ಯಾರು ಯುವತಿಯ ಸಹಾಯಕ್ಕೆ ಮುಂದಾಗಲಿಲ್ಲ. ಆರೋಪಿ ರೋಹಿತ್ ಯಾದವ್ 20 ವರ್ಷದ ಆರತಿ ಯಾದವ್ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.
ಪೊಲೀಸರ ಪ್ರಕಾರ, ಪ್ರೀತಿ-ಪ್ರೇಮ ಕಾರಣಕ್ಕೆ ಕೊಲೆಯಾಗಿದೆ. ರೋಹಿತ್ ಯಾದವ್ ಜೊತೆ ಆರತಿ ಪ್ರೀತಿ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದಷ್ಟೇ ಆತನಿಂದ ಬ್ರೇಕಪ್ ಮಾಡಿಕೊಂಡಿದ್ದಳು. ಇದಾದ ನಂತರ ಆರತಿ ಬೇರೊಬ್ಬನ ಜೊತೆ ತಿರುಗುತ್ತಿದ್ದಾಳೆ ಎಂದು ಶಂಕಿಸಿ ರೋಹಿತ್ ಆಕ್ರೋಶಗೊಂಡು ಆಕೆಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ವಲೀವ್ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement