
ನವದೆಹಲಿ: NEET ಮತ್ತು UGC-NET ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ನಂತರ "ಮಾನಸಿಕವಾಗಿ ಕುಸಿದಿದ್ದಾರೆ". ಹೀಗಾಗಿ ಸರ್ಕಾರವನ್ನು ನಡೆಸಲು ಹೆಣಗಾಡುತ್ತಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಶಿಕ್ಷಣ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಶಪಡಿಸಿಕೊಳ್ಳುತ್ತಿದ್ದು, ಅದನ್ನು ಬದಲಾಯಿಸದ ಹೊರತು ಪೇಪರ್ ಸೋರಿಕೆ ನಿಲ್ಲುವುದಿಲ್ಲ ಎಂದರು.
"ಪ್ರಧಾನಿ ಮೋದಿ ಉಕ್ರೇನ್-ರಷ್ಯಾ ಯುದ್ಧ ಮತ್ತು ಇಸ್ರೇಲ್-ಗಾಜಾ ಯುದ್ಧವನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತಿದೆ. ಆದರೆ ಅವರಿಂದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ ಅಥವಾ ತಡೆಯಲು ಬಯಸುವುದಿಲ್ಲ" ಎಂದು ಟೀಕಿಸಿದರು.
ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಮಂದಿ ಪೇಪರ್ ಸೋರಿಕೆ ಬಗ್ಗೆ ದೂರು ನೀಡಿದ್ದಾರೆ ಎಂದು ಅವರು ರಾಹುಲ್ ಗಾಂಧಿ ತಿಳಿಸಿದರು.
ಮಧ್ಯಪ್ರದೇಶದಲ್ಲಿ ವ್ಯಾಪಮ್ ಪರೀಕ್ಷೆ ಮತ್ತು ನೇಮಕಾತಿ ಹಗರಣವನ್ನು ಉಲ್ಲೇಖಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ, "ದೇಶದ ಇತರ ಭಾಗಗಳಿಗೂ ವ್ಯಾಪಂ ಹಗರಣದ ಕಲ್ಪನೆಯನ್ನು ವಿಸ್ತರಿಸಲಾಗಿದೆ" ಎಂದು ಆರೋಪಿಸಿದರು.
ನಿರಂಕುಶವಾಗಿ ಏನನ್ನೂ ಮಾಡಬಾರದು. ಒಂದು ಪತ್ರಿಕೆಗೆ ಅನ್ವಯಿಸುವ ನಿಯಮಗಳನ್ನು ಇನ್ನೊಂದಕ್ಕೂ ಅನ್ವಯಿಸಬೇಕು. ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಪ್ರಸ್ತಾಪಿಸಲಿವೆ ಎಂದು ರಾಹುಲ್ ಗಾಂಧಿ ಹೇಳಿದರು.
Advertisement