NEET-UG ಪ್ರಶ್ನೆಪತ್ರಿಕೆ ಸೋರಿಕೆ: ತೇಜಸ್ವಿ ಯಾದವ್ ಆಪ್ತ ಸಹಾಯಕನ ಮೇಲೆ ಆರೋಪ, ಪ್ರಭಾವಿಗಳನ್ನು ಬಚಾವ್ ಮಾಡುವ ಯತ್ನ ಎಂದ RJD

ಪರೀಕ್ಷೆಗೆ ಮುಂಚಿತವಾಗಿ ಅಭ್ಯರ್ಥಿಗಳು ಮತ್ತು ಇತರರಿಗೆ ಅನುಕೂಲವಾಗುವಂತೆ ಬಿಹಾರದಲ್ಲಿ ಅತಿಥಿ ಗೃಹವನ್ನು ಯಾರು ಕಾಯ್ದಿರಿಸಿದ್ದರು ಎಂಬುದು ಪ್ರಶ್ನೆಯಾಗಿದೆ ಎಂದು ಮನೋಜ್ ಝಾ ಮಾಧ್ಯಮಗಳಿಗೆ ತಿಳಿಸಿದರು.
ಆರ್‌ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ ಮತ್ತು ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ(ಸಂಗ್ರಹ ಚಿತ್ರ)
ಆರ್‌ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ ಮತ್ತು ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ(ಸಂಗ್ರಹ ಚಿತ್ರ)
Updated on

ಪಾಟ್ನಾ: ನೀಟ್-ಯುಜಿ 2024 ರ ಪತ್ರಿಕೆ ಸೋರಿಕೆಗೆ ತೇಜಸ್ವಿ ಪ್ರಸಾದ್ ಯಾದವ್ ಅವರ ಆಪ್ತ ಸಹಾಯಕರು ಕಾರಣ ಎಂಬ ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಆರೋಪಕ್ಕೆ ಆರ್‌ಜೆಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಆರ್‌ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ ಇದು ಪ್ರಕರಣದಲ್ಲಿ ಪ್ರಭಾವಿಗಳನ್ನು ರಕ್ಷಿಸಲು ಸರ್ಕಾರ ಮಾಡುತ್ತಿರುವ ಸುಳ್ಳು ಆರೋಪ ಎಂದು ಹೇಳಿದ್ದಾರೆ.

ಪರೀಕ್ಷೆಗೆ ಮುಂಚಿತವಾಗಿ ಅಭ್ಯರ್ಥಿಗಳು ಮತ್ತು ಇತರರಿಗೆ ಅನುಕೂಲವಾಗುವಂತೆ ಬಿಹಾರದಲ್ಲಿ ಅತಿಥಿ ಗೃಹವನ್ನು ಯಾರು ಕಾಯ್ದಿರಿಸಿದ್ದರು ಎಂಬುದು ಪ್ರಶ್ನೆಯಾಗಿದೆ ಎಂದು ಮನೋಜ್ ಝಾ ಮಾಧ್ಯಮಗಳಿಗೆ ತಿಳಿಸಿದರು.

ಆರ್‌ಜೆಡಿ ನಾಯಕನ ವಿರುದ್ಧ ಸಿನ್ಹಾ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಝಾ, ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತೆಯಿಲ್ಲ, ಆದರೆ ಪ್ರಮುಖ ಆರೋಪಿಗಳನ್ನು ರಕ್ಷಿಸಲು ಸುಳ್ಳು ಆರೋಪಗಳನ್ನು ಮಾಡುವವರ ಬಗ್ಗೆ ಅವರು ಕಾಳಜಿ ವಹಿಸಿದ್ದಾರೆ ಎಂದರು.

ಆರೋಪಿಗಳನ್ನು ರಕ್ಷಿಸಲು ಸುಳ್ಳು ಕಥೆ ಹೆಣೆಯುತ್ತಿದ್ದೀರಿ. ಇದು ಸರ್ಕಾರಿ ನೌಕರನ ಮಾನಹಾನಿ ಮಾಡುವ ಸಂಚಿನ ಒಂದು ಭಾಗವಾಗಿದೆ. ಏಕೆಂದರೆ NEET ಹಗರಣದಲ್ಲಿ ದೊಡ್ಡ ದೊಡ್ಡವರನ್ನು ಬಚಾವ್ ಮಾಡಬೇಕಾಗಿದೆ ಎಂದರು.

ಇದು ಸುಮಾರು 25 ಲಕ್ಷ ಮಕ್ಕಳ ಭವಿಷ್ಯದ ವಿಷಯವಾಗಿದೆ. ಸತ್ಯಕ್ಕೆ ಜಯ ಸಿಗಬೇಕು ಎಂದರು.

ಆರ್‌ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ ಮತ್ತು ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ(ಸಂಗ್ರಹ ಚಿತ್ರ)
NEET, ಯುಜಿಸಿ-ನೆಟ್ ಪರೀಕ್ಷೆಗಳಲ್ಲಿ ಅಕ್ರಮ, ತನಿಖೆಗೆ ಸಮಿತಿ ರಚನೆ; ಜವಾಬ್ದಾರಿ ತೆಗೆದುಕೊಳ್ಳುತ್ತೇವೆ: ಧರ್ಮೇಂದ್ರ ಪ್ರಧಾನ್

ನೀಟ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಮತ್ತು ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನ್ನು ಸಹ ರದ್ದುಗೊಳಿಸಬೇಕು ಎಂದು ಝಾ ಒತ್ತಾಯಿಸಿದರು.

ಮತ್ತೊಂದೆಡೆ, ತೇಜಸ್ವಿ ಯಾದವ್ ಮಾಧ್ಯಮ ಪ್ರತಿನಿಧಿಗಳ ಪ್ರತಿಕ್ರಿಯೆ ಲಭ್ಯರಾಗಿಲ್ಲ. NEET-UG ಪೇಪರ್ ಸೋರಿಕೆಯಲ್ಲಿ ತೇಜಸ್ವಿ ಅವರ ಸ್ಥಾನವನ್ನು ಸ್ಪಷ್ಟಪಡಿಸುವಂತೆ ಸಿನ್ಹಾ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.

ಉಪಮುಖ್ಯಮಂತ್ರಿಯಾಗಿದ್ದಾಗ ತೇಜಸ್ವಿ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪ್ರೀತಮ್ ಕುಮಾರ್ ಅವರು ಮೇ 1 ಮತ್ತು 4 ರಂದು ಕಿರಿಯ ಎಂಜಿನಿಯರ್ ಯಾದವೆಂದು ಅವರಿಗೆ ಕೊಠಡಿಯನ್ನು ಕಾಯ್ದಿರಿಸಲು ಬಿಹಾರ ರಸ್ತೆ ನಿರ್ಮಾಣ ವಿಭಾಗದ (RCD) ಉದ್ಯೋಗಿ ಪ್ರದೀಪ್ ಕುಮಾರ್ ಅವರನ್ನು ಸಂಪರ್ಕಿಸಿದ್ದರು ಎಂದು ಸಿನ್ಹಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com