
ನವದೆಹಲಿ: NEET ಮತ್ತು UGC-NET ವಿವಾದದ ನಡುವೆ ಪಾರದರ್ಶಕ, ಸುಗಮ ಮತ್ತು ನ್ಯಾಯಯುತವಾಗಿ ಪರೀಕ್ಷೆ ನಡೆಸುವುದರ ಖಾತ್ರಿಗಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಚಿವಾಲಯ ಶನಿವಾರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.
ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನ, ಮಾಹಿತಿ ಭದ್ರತೆ ಶಿಷ್ಟಾಚಾರದಲ್ಲಿ ಸುಧಾರಣೆ ಮತ್ತು ಎನ್‌ಟಿಎ ರಚನೆ ಮತ್ತು ಕಾರ್ಯನಿರ್ವಹಣೆಯ ಕುರಿತು ಶಿಫಾರಸು ಮಾಡಲು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು 2 ತಿಂಗಳೊಳಗೆ ಸಚಿವಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಈ ಕೆಳಗಿನಂತಿದ್ದಾರೆ:
ಅಧ್ಯಕ್ಷರು: ಡಾ. ಕೆ. ರಾಧಾಕೃಷ್ಣನ್, ಇಸ್ರೋ ಮಾಜಿ ಅಧ್ಯಕ್ಷ ಮತ್ತು BoG, ಐಐಟಿ ಕಾನ್ಪುರ ಅಧ್ಯಕ್ಷರು
ಸದಸ್ಯರು: ಡಾ. ರಂದೀಪ್ ಗುಲೇರಿಯಾ, ಮಾಜಿ ನಿರ್ದೇಶಕ, ಏಮ್ಸ್ ದೆಹಲಿ
ಸದಸ್ಯರು: ಪ್ರೊ. ಬಿ ಜೆ ರಾವ್, ಉಪಕುಲಪತಿ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ
ಸದಸ್ಯರು: ಪ್ರೊ. ರಾಮಮೂರ್ತಿ ಕೆ, ಪ್ರೊಫೆಸರ್ ಎಮೆರಿಟಸ್, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಐಐಟಿ ಮದ್ರಾಸ್
ಸದಸ್ಯರು: ಪಂಕಜ್ ಬನ್ಸಾಲ್, ಸಹ-ಸಂಸ್ಥಾಪಕ, ಪೀಪಲ್ ಸ್ಟ್ರಾಂಗ್ ಮತ್ತು ಕರ್ಮಯೋಗಿ ಭಾರತ್ ಮಂಡಳಿ ಸದಸ್ಯರು
ಸದಸ್ಯರು: ಪ್ರೊ. ಆದಿತ್ಯ ಮಿತ್ತಲ್, ವಿದ್ಯಾರ್ಥಿ ವ್ಯವಹಾರಗಳ ಡೀನ್, IIT ದೆಹಲಿ
ಸದಸ್ಯರು: ಶ್ರೀ ಗೋವಿಂದ್ ಜೈಸ್ವಾಲ್, ಜಂಟಿ ಕಾರ್ಯದರ್ಶಿ ಕೇಂದ್ರ ಶಿಕ್ಷಣ ಸಚಿವಾಲಯ
Advertisement