ಗ್ಯಾಂಗ್ ಸ್ಟರ್ ಛೋಟಾ ಶಕೀಲ್‌ ಸಂಬಂಧಿ ಆರಿಫ್ ಅಬೂಬಕರ್ ಶೇಖ್ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನ

ದಾವೂದ್ ಇಬ್ರಾಹಿಂ ಮತ್ತು ಶಕೀಲ್ ಸೇರಿದಂತೆ ದಾವೂದ್ ಗ್ಯಾಂಗ್‌ನ ಹಲವು ಸದಸ್ಯರನ್ನು ಒಳಗೊಂಡಿರುವ ಪ್ರಕರಣದಲ್ಲಿ ಉದ್ಯಮಿಯಾಗಿದ್ದ ಶೇಖ್ (61ವ)ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ದೇಶ ಬಿಟ್ಟು ಪರಾರಿಯಾಗಿರುವ ದರೋಡೆಕೋರ ಛೋಟಾ ಶಕೀಲ್‌ನ ಸೋದರ ಬಾವ ಮತ್ತು ಭಯೋತ್ಪಾದನೆ ನಿಧಿ ಪ್ರಕರಣದ ಅಪರಾಧಿ ಆರಿಫ್ ಅಬೂಬಕರ್ ಶೇಖ್ ಅಲಿಯಾಸ್ ಭಾಯಿಜಾನ್ ಕಳೆದ ರಾತ್ರಿ ಮುಂಬೈಯ ಸರ್ಕಾರಿ ಜೆಜೆ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾನೆ.

ದಾವೂದ್ ಇಬ್ರಾಹಿಂ ಮತ್ತು ಶಕೀಲ್ ಸೇರಿದಂತೆ ದಾವೂದ್ ಗ್ಯಾಂಗ್‌ನ ಹಲವು ಸದಸ್ಯರನ್ನು ಒಳಗೊಂಡಿರುವ ಪ್ರಕರಣದಲ್ಲಿ ಉದ್ಯಮಿಯಾಗಿದ್ದ ಶೇಖ್ (61ವ)ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.

ಶೇಖ್ ಬಂಧನದ ನಂತರ ಇಲ್ಲಿನ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿತ್ತು. ಅನಾರೋಗ್ಯ ಹಿನ್ನೆಲೆಯಲ್ಲಿ ಜೆಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದನು. ಕಳೆದ ವರ್ಷ ಜುಲೈಯಲ್ಲಿ ನೆರೆಯ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ಅಬೂಬಕರ್ ಶೇಖ್ ಆಸ್ತಿಯನ್ನು ಎನ್ಐಎ ಭಯೋತ್ಪಾದನೆ ಕೃತ್ಯದಿಂದ ಸಂಪಾದಿಸಿದ ಆದಾಯವೆಂದು ಜಪ್ತಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com