
ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿ ಅಪಸ್ವರವೆದ್ದಿರುವ ಲಕ್ಷಣಗಳು ಗೋಚರಿಸುತ್ತಿವೆ.
ಮಹಾರಾಷ್ಟ್ರದ ಪುಣೆಯ ಶಿರೂರ್ ನ ಬಿಜೆಪಿ ಪದಾಧಿಕಾರಿಯೊಬ್ಬರು ಡಿಸಿಎಂ ಅಜಿತ್ ಪವಾರ್ ಹಾಗೂ ಅವರ ನೇತೃತ್ವದ ಎನ್ ಸಿಪಿಯನ್ನು ಆಡಳಿತಾರೂಢ ಮೈತ್ರಿಯಿಂದ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಶಿರೂರ್ ತಹಶೀಲ್ ನ ಉಪಾಧ್ಯಕ್ಶ್ಜಸುದರ್ಶನ್ ಚೌಧರಿ ಪಕ್ಷದ ಸಭೆಯಲ್ಲಿ ಈ ಮನವಿ ಮಾಡಿದ್ದು, ಇದರ ವಿಡಿಯೋ ವೈರಲ್ ಆಗತೊಡಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎನ್ ಸಿಪಿ ತೀವ್ರ ಆಕ್ರೋಶ ಹೊರಹಾಕಿದ್ದು, ಎನ್ ಸಿಪಿ ಕಾರ್ಯಕರ್ತರು ಬಿಜೆಪಿ ಪದಾಧಿಕಾರಿಯನ್ನು ಸುತ್ತುವರೆದು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
"ಇದು ನಿಮಗೆ ಸಲಹೆಯಾಗಿದೆ. ಪಕ್ಷದ ಕಾರ್ಯಕರ್ತರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಆಲಿಸಿ. ನೀವು ನಿಜವಾಗಿಯೂ ನಿರ್ಧಾರ ತೆಗೆದುಕೊಳ್ಳಲು ಬಯಸಿದರೆ, ಅಜಿತ್ ಪವಾರ್ ಅವರನ್ನು ಮಹಾಯುತಿ (ಆಡಳಿತದ ಮೈತ್ರಿ) ನಿಂದ ತೆಗೆದುಹಾಕಿ," ಎಂದು ಚೌಧರಿ ವೀಡಿಯೊದಲ್ಲಿ ಬಿಜೆಪಿ ನಾಯಕತ್ವಕ್ಕೆ ಹೇಳಿದ್ದರು.
Advertisement