ಸಂಸತ್ತಿನಲ್ಲಿಂದು NEET ಕುರಿತ ಚರ್ಚೆಗೆ I.N.D.I.A. ಬಣ ಬೇಡಿಕೆ

ಸಂಸತ್ತಿನ ಉಭಯ ಸದನಗಳಲ್ಲಿ ಶುಕ್ರವಾರ ಕಲಾಪ ಬದಿಗೊತ್ತಿ, NEET ವೈಫಲ್ಯದ ಬಗ್ಗೆ ಚರ್ಚೆ ನಡೆಸುವಂತೆ I.N.D.I.A ಬಣ ಒತ್ತಾಯಿಸಿದ್ದು, ಆಡಳಿತಾರೂಢ ಬಿಜೆಪಿ ತಪ್ಪಿಸಿಕೊಳ್ಳಲು ಅವಕಾಶ ನೀಡುವ ಮನಸ್ಥಿತಿಯಲ್ಲಿ ಪ್ರತಿಪಕ್ಷಗಳು ಇಲ್ಲ ಎಂಬುದನ್ನು ಸೂಚಿಸಿವೆ.
ರಾಹುಲ್ ಗಾಂಧಿ- ಅಖಿಲೇಶ್ ಯಾದವ್
ರಾಹುಲ್ ಗಾಂಧಿ- ಅಖಿಲೇಶ್ ಯಾದವ್
Updated on

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಶುಕ್ರವಾರ ಕಲಾಪ ಬದಿಗೊತ್ತಿ, NEET ವೈಫಲ್ಯದ ಬಗ್ಗೆ ಚರ್ಚೆ ನಡೆಸುವಂತೆ I.N.D.I.A ಬಣ ಒತ್ತಾಯಿಸಿದ್ದು, ಆಡಳಿತಾರೂಢ ಬಿಜೆಪಿ ತಪ್ಪಿಸಿಕೊಳ್ಳಲು ಅವಕಾಶ ನೀಡುವ ಮನಸ್ಥಿತಿಯಲ್ಲಿ ಪ್ರತಿಪಕ್ಷಗಳು ಇಲ್ಲ ಎಂಬುದನ್ನು ಸೂಚಿಸಿವೆ.

ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸುವ ಬದಲು ತಕ್ಷಣದ ಚರ್ಚೆಗಾಗಿ ಎರಡೂ ಸದನಗಳಲ್ಲಿ ನೋಟಿಸ್ ನೀಡಲು ವಿಪಕ್ಷಗಳು ಸಜ್ಜಾಗಿವೆ. ಸಭಾಧ್ಯಕ್ಷರು ಬೇಡಿಕೆ ಸ್ವೀಕರಿಸುವ ಸಾಧ್ಯತೆಯಿಲ್ಲ. ಇದರಿಂದಾಗಿ ಸದನಗಳಲ್ಲಿ ಕಲಾಪಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

ಕೇಂದ್ರೀಯ ಸಂಸ್ಥೆಗಳನ್ನು ರಾಜಕೀಯ ಸೇಡಿಗಾಗಿ ಬಳಸಿಕೊಳ್ಳುವುದರ ವಿರುದ್ಧ ಪ್ರತಿಪಕ್ಷಗಳು ಸೋಮವಾರ ಪ್ರತಿಭಟನೆ ನಡೆಸಲಿವೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಪಕ್ಷಗಳ ಸದನ ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಇಂತಹ ಸಭೆಗೆ ಮೊದಲ ಬಾರಿಗೆ ಹಾಜರಾದರು.

ರಾಹುಲ್ ಗಾಂಧಿ- ಅಖಿಲೇಶ್ ಯಾದವ್
ತುರ್ತು ಪರಿಸ್ಥಿತಿ ಸಂವಿಧಾನ ಮೇಲೆ ನಡೆದ ನೇರ ದಾಳಿಯ ಕರಾಳ ಅಧ್ಯಾಯ: ರಾಷ್ಟ್ರಪತಿ ಮುರ್ಮು; ನೀಟ್ ಹಗರಣ ಕುರಿತು ವಿಪಕ್ಷಗಳ ಗದ್ದಲ

ಸಂಸತ್ತಿನಲ್ಲಿ NEET ವಿಷಯಕ್ಕೆ ಸಂಪೂರ್ಣ ದಿನವನ್ನು ಮೀಸಲಿಡಬೇಕು ಮತ್ತು ಚರ್ಚೆಯ ಸಮಯದಲ್ಲಿ ಕಪ್ಪು ಪಟ್ಟಿಯನ್ನು ಧರಿಸಬೇಕು ಎಂದು ರಾಹುಲ್ ಅವರು ಮೊದಲು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. NEET ನಲ್ಲಿ ಸ್ವತಂತ್ರ ಚರ್ಚೆಯನ್ನು ಬಯಸುವುದರ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಷಯದ ಬಗ್ಗೆ ಮಾತನಾಡುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ಸೂಚಿಸಿದರೆ, ವಿರೋಧ ಪಕ್ಷದ ನಾಯಕರು ಬರೀ ಸರ್ಕಾರದ ಹೇಳಿಕೆ ಸ್ವೀಕರಿಸಲು ಸಿದ್ಧರಿಲ್ಲ. ಸಂಸತ್ತಿನಲ್ಲಿ ಮಾತನಾಡಲು ಬಯಸಿದ್ದಾರೆ. ನಾವು ಅದನ್ನು ಮೊದಲ ದಿನವೇ ಹೆಚ್ಚಿಸದಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com