ಸಂಸತ್ತಿನ ಇತಿಹಾಸದಲ್ಲಿ ಇಂದು ಕಳಂಕಿತ ದಿನ: ಖರ್ಗೆ ಪ್ರತಿಭಟನೆಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಕಿಡಿ

ಸದನವನ್ನು ಮುಂದೂಡಿದ ಬಳಿಕ ಹೊರಬಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 267ನೇ ನಿಯಮದ ಅಡಿಯಲ್ಲಿ ಸದನದಲ್ಲಿ ನೀಟ್ ಹಗರಣದ ಕುರಿತು ಚರ್ಚಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಧ್ವನಿ ಎತ್ತಲು ಬಯಸಿದ್ದೇವೆ ಎಂದು ಹೇಳಿದರು.
ಜಗದೀಪ್ ಧಂಖರ್-ಮಲ್ಲಿಕಾರ್ಜುನ್ ಖರ್ಗೆ
ಜಗದೀಪ್ ಧಂಖರ್-ಮಲ್ಲಿಕಾರ್ಜುನ್ ಖರ್ಗೆPTI
Updated on

ನವದೆಹಲಿ: ಪ್ರತಿಪಕ್ಷಗಳ ಗದ್ದಲದ ನಡುವೆಯೇ ರಾಜ್ಯಸಭೆ ಕಲಾಪ ಮುಂದುವರಿದಿತ್ತು. ರಾಜ್ಯಸಭೆಯ ಸಭಾಪತಿ ಜಗದೀಪ್ ಧಂಖರ್ ಅವರು ಸದನವನ್ನು ಮುಂದೂಡುವುದಕ್ಕೂ ಮೊದಲು ಇಂದು ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಕಳಂಕಿತ ದಿನವಾಗಿದೆ. ವಿರೋಧ ಪಕ್ಷದ ನಾಯಕರೇ ಬಾವಿಗಿಳಿದಿದ್ದು ಹಿಂದೆಂದೂ ಸಂಭವಿಸಿಲ್ಲ.

ವಿರೋಧ ಪಕ್ಷದ ನಾಯಕರು ಬಾವಿಗೆ ಇಳಿಯುವಷ್ಟು ಭಾರತೀಯ ಸಂಸದೀಯ ಸಂಪ್ರದಾಯ ಹದಗೆಟ್ಟಿತ ಎಂದು ನನಗೆ ಬೇಸರವಿದೆ. ಸದನದ ಕಲಾಪವನ್ನು ಮುಂದೂಡಿದ ನಂತರ, ಸದನದ ಹೊರಗೆ ಮಾತನಾಡಿದ್ದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪೀಕರ್ ತಪ್ಪಿತಸ್ಥರೆಂದು ಆರೋಪಿಸಿದ್ದರು. ಇನ್ನು ಸದನದ ಕಲಾಪ ಆರಂಭವಾದ ನಂತರ ಸಭಾಪತಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷ ಜಗದೀಪ್ ಧನಖರ್ ಮಾತನಾಡಿ, ಈ ರೀತಿಯ ನಡವಳಿಕೆ ಪ್ರತಿಯೊಬ್ಬ ಭಾರತೀಯನಿಗೂ ನೋವುಂಟು ಮಾಡುತ್ತದೆ. ಐದು ದಶಕಕ್ಕೂ ಹೆಚ್ಚು ಸಂಸದೀಯ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಬಾವಿಗಿಳಿದು ಅಸಭ್ಯವಾಗಿ ವರ್ತಿಸಿ ಅಪಪ್ರಚಾರ ಮಾಡುತ್ತಿರುವುದು ನನಗೆ ತುಂಬಾ ಬೇಸರ ತಂದಿದೆ ಎಂದರು. ಉಪನಾಯಕ ಪ್ರಮೋದ್ ತಿವಾರಿ, ಮುಕುಲ್ ವಾಸ್ನಿಕ್ ಮುಂತಾದ ಹಿರಿಯ ನಾಯಕರು ಬಾವಿಗೆ ಬಂದರು. ಟ್ವಿಟರ್‌ನಲ್ಲಿ ಲಭ್ಯವಿರುವ ಸದನದ ಹೊರಗೆ ನೀಡಿರುವ ಹೇಳಿಕೆ ನನಗೆ ಅತ್ಯಂತ ನೋವಿನ ಸಂಗತಿ ಎಂದು ರಾಜ್ಯಸಭಾ ಅಧ್ಯಕ್ಷರು ಹೇಳಿದ್ದಾರೆ.

ಜಗದೀಪ್ ಧಂಖರ್-ಮಲ್ಲಿಕಾರ್ಜುನ್ ಖರ್ಗೆ
NEET ಅಕ್ರಮ ಕುರಿತ ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು, ಗದ್ದಲ: ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ನಾಯಕರು ಆದರ್ಶಪ್ರಾಯವಾಗಿ ನಡೆದುಕೊಳ್ಳಬೇಕು. ವ್ಯವಸ್ಥೆಯ ರಕ್ಷಕರ ಈ ರೀತಿಯ ನಡವಳಿಕೆಯು ನನಗೆ ಅತ್ಯಂತ ಗಂಭೀರವಾಗಿದೆ ಮತ್ತು ಹೆಚ್ಚು ದುಃಖಕರವಾಗಿದೆ. ಜತೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ನಮ್ಮ ಕಚೇರಿಯು ಕಾರ್ಯನಿರ್ವಹಿಸುತ್ತಿದೆ. ಪ್ರತಿಪಕ್ಷದ ನಾಯಕನಿಗೆ ಸಂಬಂಧಿಸಿದ ವಿಚಾರದಲ್ಲಿ ಸಭಾಪತಿ ಈ ಮಾತನ್ನು ಹೇಳಿದಾಗ ವಿಪಕ್ಷ ಸಂಸದರು ರಾಜ್ಯಸಭೆಯ ಕಲಾಪದಿಂದ ಹೊರನಡೆದರು.

ಸದನವನ್ನು ಮುಂದೂಡಿದ ಬಳಿಕ ಹೊರಬಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 267ನೇ ನಿಯಮದ ಅಡಿಯಲ್ಲಿ ಸದನದಲ್ಲಿ ನೀಟ್ ಹಗರಣದ ಕುರಿತು ಚರ್ಚಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಧ್ವನಿ ಎತ್ತಲು ಬಯಸಿದ್ದೇವೆ ಎಂದು ಹೇಳಿದರು. ಅದಕ್ಕಾಗಿಯೇ ನಾವು ವಿಶೇಷ ಚರ್ಚೆಗೆ ಮನವಿ ಮಾಡಿದ್ದೇವೆ. ನಾವು ಯಾರಿಗೂ ತೊಂದರೆ ಕೊಡಲು ಬಯಸಲಿಲ್ಲ. ನಾವು ಕೇವಲ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪ್ರಸ್ತಾಪಿಸಲು ಬಯಸಿದ್ದೇವೆ. ಆದರೆ ಅವರು ಅದಕ್ಕೆ ಅವಕಾಶವನ್ನು ನೀಡಲಿಲ್ಲ. ಅದರ ಬಗ್ಗೆ ಗಮನ ಹರಿಸಲಿಲ್ಲ. ಇಂದು ಪ್ರತಿಪಕ್ಷಗಳ ಬಗ್ಗೆ ಅವರ ಮಲತಾಯಿ ಧೋರಣೆಯು ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಕಳಂಕಿತವಾಗಿದೆ ಎಂದು ನಾನು ರಾಜ್ಯಸಭಾ ಅಧ್ಯಕ್ಷರಿಗೆ ಹೇಳುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com