ಲೋಕಸಭೆ ಚುನಾವಣೆ: ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ರಾಜಕೀಯಕ್ಕೆ ಮಾಜಿ ಸಚಿವ ಡಾ. ಹರ್ಷವರ್ಧನ್ ಗುಡ್ ಬೈ!

ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಹಲವು ದೊಡ್ಡ ನಾಯಕರು ರಾಜಕೀಯದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮೊದಲು ಗೌತಮ್ ಗಂಭೀರ್ ನಂತರ ಜಯಂತ್ ಸಿನ್ಹಾ ನಂತರ ಈಗ ಚಾಂದಿನಿ ಚೌಕ್ ಸಂಸದ ಡಾ. ಹರ್ಷ್ ವರ್ಧನ್ ಕೂಡ ರಾಜಕೀಯಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಡಾ ಹರ್ಷ್ ವರ್ಧನ್
ಡಾ ಹರ್ಷ್ ವರ್ಧನ್
Updated on

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಹಲವು ದೊಡ್ಡ ನಾಯಕರು ರಾಜಕೀಯದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮೊದಲು ಗೌತಮ್ ಗಂಭೀರ್ ನಂತರ ಜಯಂತ್ ಸಿನ್ಹಾ ನಂತರ ಈಗ ಚಾಂದಿನಿ ಚೌಕ್ ಸಂಸದ ಡಾ. ಹರ್ಷ್ ವರ್ಧನ್ ಕೂಡ ರಾಜಕೀಯಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಭಾನುವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ, ಅವರು ಸಕ್ರಿಯ ರಾಜಕೀಯದಿಂದ ಬೇರ್ಪಡುವುದಾಗಿ ಘೋಷಿಸಿದರು.

30 ವರ್ಷಗಳ ಅದ್ಭುತ ರಾಜಕೀಯ ವೃತ್ತಿಜೀವನದ ನಂತರ, ಈಗ ತಮ್ಮ ಮೂಲ ವೃತ್ತಿಗೆ ಮರಳಲು ಬಯಸುತ್ತಿರುವುದಾಗಿ ಪೋಸ್ಟ್‌ನಲ್ಲಿ ಮಾಡಿದ್ದು ಕೃಷ್ಣನಗರದಲ್ಲಿ ತಮ್ಮ ಇಎನ್ ಟಿ ಕ್ಲಿನಿಕ್ ಕಾಯುತ್ತಿದೆ ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ

ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿತ್ತು. ಇದರಲ್ಲಿ ದೆಹಲಿಯ 7 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ 4 ಸ್ಥಾನಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಲಾಗಿದೆ. ಚಾಂದಿನಿ ಚೌಕ್‌ನಿಂದ ಡಾ.ಹರ್ಷವರ್ಧನ್ ಬದಲಿಗೆ ಪ್ರವೀಣ್ ಖಂಡೇಲ್‌ವಾಲ್‌ಗೆ ಅವಕಾಶ ನೀಡಲಾಗಿದೆ.

ಡಾ ಹರ್ಷ್ ವರ್ಧನ್
ಲೋಕಸಭೆ ಚುನಾವಣೆ: ಬಿಜೆಪಿಯ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ, ವಾರಣಾಸಿಯಿಂದ ಮೋದಿ ಕಣಕ್ಕೆ!

ಇದರೊಂದಿಗೆ ಮೂರು ದಶಕಗಳ ತಮ್ಮ ರಾಜಕೀಯ ಪಯಣದಲ್ಲಿ ಗಣನೀಯ ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಅವರು, ಅವರು ವೀರೋಚಿತವಾಗಿ ಅಧಿಕಾರಕ್ಕೆ ಬರಲಿ ಎಂದು ದೇಶ ಹಾರೈಸುತ್ತದೆ. ನಾನು ಈಗ ಇನ್ನೂ ಮುಂದೆ ಹೋಗಬೇಕು. ನಾನು ಕಾಯಲು ಸಾಧ್ಯವಿಲ್ಲ. ಕೃಷ್ಣನಗರದಲ್ಲಿರುವ ನನ್ನ ಇಎನ್‌ಟಿ ಕ್ಲಿನಿಕ್ ಕೂಡ ನನ್ನ ವಾಪಸಾತಿಗಾಗಿ ಕಾಯುತ್ತಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com