ಅಭಿವೃದ್ಧಿ ಕಾರ್ಯಗಳು ಅನೇಕರ ಬದುಕನ್ನು ಬದಲಾಯಿಸುತ್ತದೆ: ಪಂಚ ರಾಜ್ಯಗಳಿಗೆ ಪ್ರಧಾನಿ ಮೋದಿ ಭೇಟಿ, ವಿವಿಧ ಯೋಜನೆಗಳಿಗೆ ಚಾಲನೆ

ವಿವಿಧ ಅಭಿವೃದ್ಧಿ ಕಾರ್ಯಗಳು ಹಲವು ವಲಯಗಳನ್ನು ತಲುಪಲಿದ್ದು, ಅನೇಕರ ಬದುಕನ್ನು ಬದಲಾಯಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: 18ನೇ ಲೋಕಸಭೆಯ ಚುನಾವಣೆಗೆ ದಿನಾಂಕ ಸದ್ಯದಲ್ಲಿಯೇ ಘೋಷಣೆಯಾಗಲಿದ್ದು, ಪ್ರಧಾನ ಮಂತ್ರಿ ಇಂದು ಸೋಮವಾರದಿಂದ ಮುಂದಿನ 10 ದಿನಗಳಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ 29 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

2047 ರ ವೇಳೆಗೆ ಭಾರತವನ್ನು "ಅಭಿವೃದ್ಧಿ ಹೊಂದಿದ ರಾಷ್ಟ್ರ" ಮಾಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಭಾಗವಾಗಿ, ಮೋದಿ ಅವರು ಇಂದಿನಿಂದ 5 ದಿನಗಳ ಕಾಲ ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಮತ್ತೆ ಇತರ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.

ತಮ್ಮ ಮೊದಲ ಹಂತದ ಭೇಟಿಯಲ್ಲಿ, ಪ್ರಧಾನಮಂತ್ರಿಯವರು ಇಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, 56,000 ಕೋಟಿ ರೂಪಾಯಿಗಿಂತ ಹೆಚ್ಚಿನ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
'2047ರ ಹೊತ್ತಿಗೆ ವಿಕಸಿತ ಭಾರತ' ಗುರಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವರ ಮಹತ್ವದ ಸಭೆ

ಪ್ರಧಾನಮಂತ್ರಿ ಕಾರ್ಯಾಲಯವು ನಿನ್ನೆ ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ತೆಲಂಗಾಣ ನಂತರ, ಮೋದಿಯವರು ತಮಿಳುನಾಡಿನ ಕಲ್ಪಾಕ್ಕಂಗೆ ಭೇಟಿ ನೀಡಲಿದ್ದಾರೆ. ನಾಳೆ ಮತ್ತೆ ತೆಲಂಗಾಣದಲ್ಲಿ 6,800 ಕೋಟಿ ರೂಪಾಯಿಗಳ ಬಹು ಯೋಜನೆಗಳಿಗೆ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದು, ಅದೇ ದಿನ ಒಡಿಶಾಗೆ 19,600 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಿದ್ದಾರೆ.

ನಾಡಿದ್ದು ಮಾರ್ಚ್ 6 ರಂದು ಕೋಲ್ಕತ್ತಾದಲ್ಲಿ 15,400 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ನದಿಯೊಳಗಿನ ಮೆಟ್ರೋ ಸುರಂಗವನ್ನು ಸಹ ಉದ್ಘಾಟಿಸಲಿದ್ದಾರೆ.

ಕೋಲ್ಕತ್ತಾದ ನಂತರ, ಮೋದಿ ಅವರು ಬಿಹಾರದ ಬೆಟ್ಟಿಯಾಗೆ ಭೇಟಿ ನೀಡಲಿದ್ದಾರೆ, ಅಲ್ಲಿ 12,800 ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಬಿಹಾರಕ್ಕೆ ಒಂದು ವಾರದೊಳಗೆ ಪ್ರಧಾನಿಯವರ ಎರಡನೇ ಭೇಟಿಯಾಗಿದೆ.

ಬಿಹಾರದ ಬೆಟ್ಟಿಯಾದಲ್ಲಿ, ನೇಪಾಳದ ನೆರೆಯ ಪ್ರದೇಶಗಳಲ್ಲಿ ಶುದ್ಧವಾದ ಅಡುಗೆ ಇಂಧನವನ್ನು ಒದಗಿಸುವ ಗುರಿಯನ್ನು ಹೊಂದಿರುವ ಇಂಡಿಯನ್ ಆಯಿಲ್‌ನ 109-ಕಿಮೀ ಮುಜಾಫರ್‌ಪುರ-ಮೋತಿಹಾರಿ ಎಲ್‌ಪಿಜಿ ಪೈಪ್‌ಲೈನ್ ನ್ನು ಮೋದಿ ಉದ್ಘಾಟಿಸಲಿದ್ದಾರೆ.

ಹೊಸ ಪೈಪ್‌ಲೈನ್ ಬಿಹಾರದ ಎಂಟು ಜಿಲ್ಲೆಗಳಾದ ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಸಿವಾನ್, ಶಿಯೋಹರ್, ಸೀತಾಮರ್ಹಿ, ಮಧುಬನಿ, ಗೋಪಾಲ್‌ಗಂಜ್ ಮತ್ತು ಮುಜಾಫರ್‌ಪುರವನ್ನು ಒಳಗೊಂಡಂತೆ ನೇಪಾಳದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕಾರ್ಯತಂತ್ರದ ಪೂರೈಕೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ತಮ್ಮ ಭೇಟಿಗಳ ಭಾಗವಾಗಿ ಮೋದಿ ಅವರು ತೆಲಂಗಾಣದ ಆದಿಲಾಬಾದ್ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ. ಅವರು ಪಶ್ಚಿಮ ಬಂಗಾಳಕ್ಕೆ ಪ್ರಯಾಣಿಸುವ ಮೊದಲು ಒಡಿಶಾದ ಚಂಡಿಖೋಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಾರ್ಚ್ 7 ರಂದು, ಪ್ರಧಾನಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ನಂತರ ದೆಹಲಿಯಲ್ಲಿ ಮಾಧ್ಯಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 8 ರಂದು ದೆಹಲಿಯಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸೃಷ್ಟಿಕರ್ತರ ಪ್ರಶಸ್ತಿಯಲ್ಲಿ ಭಾಗವಹಿಸಿ ನಂತರ ಅಸ್ಸಾಂಗೆ ತೆರಳುತ್ತಾರೆ.

ಮಾರ್ಚ್ 10 ರಂದು, ಅವರು ಅಜಂಗಢದಲ್ಲಿ ವಿವಿಧ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ದೆಹಲಿಯಲ್ಲಿ ‘ನಮೋ ಡ್ರೋನ್ ದೀದಿ’ ಮತ್ತು ‘ಲಖಪತಿ ದೀದಿ’ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.

ಬಿಹಾರಕ್ಕೆ ಎರಡನೇ ಭೇಟಿ

ಕೋಲ್ಕತ್ತಾದ ನಂತರ, ಮೋದಿ ಅವರು ಬಿಹಾರದ ಬೆಟ್ಟಿಯಾಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು 12,800 ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಬಿಹಾರಕ್ಕೆ ಒಂದು ವಾರದೊಳಗೆ ಪ್ರಧಾನಿಯವರ ಎರಡನೇ ಭೇಟಿಯಾಗಿದೆ. ಬಿಹಾರದ ಬೆಟ್ಟಿಯಾದಲ್ಲಿ, ನೇಪಾಳದ ನೆರೆಯ ಪ್ರದೇಶಗಳಲ್ಲಿ ಶುದ್ಧವಾದ ಅಡುಗೆ ಇಂಧನವನ್ನು ಒದಗಿಸುವ ಗುರಿಯನ್ನು ಹೊಂದಿರುವ ಇಂಡಿಯನ್ ಆಯಿಲ್‌ನ 109-ಕಿಮೀ ಮುಜಾಫರ್‌ಪುರ-ಮೋತಿಹಾರಿ ಎಲ್‌ಪಿಜಿ ಪೈಪ್‌ಲೈನ್ ನ್ನು ಮೋದಿ ಉದ್ಘಾಟಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com