ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ

ಕಾಶ್ಮೀರ ಕಣಿವೆಯ ಎಲ್ಲಾ 3 ಸ್ಥಾನಗಳಲ್ಲಿ ಎನ್‌ಸಿ ಸ್ಪರ್ಧೆ, ಉಳಿದ ಕ್ಷೇತ್ರಗಳ ಕುರಿತು ಕಾಂಗ್ರೆಸ್‌ ಜತೆ ಮಾತುಕತೆ

ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರ ಕಣಿವೆಯ ಎಲ್ಲಾ ಮೂರು ಲೋಕಸಭಾ ಸ್ಥಾನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸ್ಪರ್ಧಿಸಲಿದೆ.
Published on

ಶ್ರೀನಗರ: ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರ ಕಣಿವೆಯ ಎಲ್ಲಾ ಮೂರು ಲೋಕಸಭಾ ಸ್ಥಾನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸ್ಪರ್ಧಿಸಲಿದ್ದು, ಜಮ್ಮು ಮತ್ತು ಲಡಾಖ್ ಪ್ರದೇಶದ ಮೂರು ಸ್ಥಾನಗಳ ಬಗ್ಗೆ ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮಂಗಳವಾರ ಹೇಳಿದೆ.

ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿದ್ದಾರೆ.

ಲೋಕಸಭೆ ಚುನಾವಣೆಯ ಸೀಟ್ ಹಂಚಿಕೆ ಕುರಿತು ಇಂದು ಶ್ರೀನಗರದಲ್ಲಿರುವ ಪಕ್ಷದ ಪ್ರಧಾನ ಕಛೇರಿಯಲ್ಲಿ ತನ್ನ ಸಂಸದೀಯ ಮಂಡಳಿಯ ಮ್ಯಾರಥಾನ್ ಸಭೆಯ ನಂತರ NC ಯ ಘೋಷಣೆ ಮಾಡಿದೆ.

ಫಾರೂಕ್ ಅಬ್ದುಲ್ಲಾ
ಜಮ್ಮು-ಕಾಶ್ಮೀರ ಗಡಿಯಾದ್ಯಂತ ಪಾಕಿಸ್ತಾನಿ ಪಡೆಗಳ ಭಯೋತ್ಪಾದಕ ಚಟುವಟಿಕೆ ಕ್ಷೀಣ

"ನ್ಯಾಷನಲ್ ಕಾನ್ಫರೆನ್ಸ್ ಕಾಶ್ಮೀರ ಕಣಿವೆಯ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ" ಎಂದು ಎನ್‌ಸಿ ಪ್ರಾಂತೀಯ ಅಧ್ಯಕ್ಷ, ನಾಸಿರ್ ಅಸ್ಲಾಮ್ ವಾನಿ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದಾಗ್ಯೂ, ಫಾರೂಕ್ ಅಬ್ದುಲ್ಲಾ ನೇತೃತ್ವದ ಪಕ್ಷವು ಜಮ್ಮುವಿನ ಎರಡು ಮತ್ತು ಲಡಾಖ್‌ನಲ್ಲಿ ಒಂದು ಸೀಟು ಹಂಚಿಕೆಗೆ ಕಾಂಗ್ರೆಸ್‌ನೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com