ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಲೋಕಸಭೆ ಚುನಾವಣೆ: ಪ್ರಧಾನಿ ಮೋದಿಯವರ ಭಾಷಣ 8 ಪ್ರಾದೇಶಿಕ ಭಾಷೆಗಳಲ್ಲಿ AI ಮೂಲಕ ನೇರ ಪ್ರಸಾರ

ಪ್ರಧಾನಿಯವರ ಭಾಷಣಗಳನ್ನು ಈಗ ಬಂಗಾಳಿ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಮರಾಠಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ

ನವದೆಹಲಿ: ಹಿಂದಿಯೇತರ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜನರ ನಡುವಿನ ಭಾಷಾ ಅಂತರವನ್ನು ದೂರ ಮಾಡಲು ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಭಾರತೀಯ ಜನತಾ ಪಾರ್ಟಿ ಕೃತಕ ಬುದ್ದಿಮತ್ತೆ(artificial intelligence)ಯ ಮೊರೆ ಹೋಗಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಎಲ್ಲಾ ರಾಜ್ಯಗಳಿಗೆ ಹೋಗಿ ಭಾಷಣ ಮಾಡುತ್ತಾರೆ, ಹಿಂದಿಯೇತರ ರಾಜ್ಯಗಳಲ್ಲಿನ ಜನರಿಗೆ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಇದಕ್ಕಾಗಿ ಬಿಜೆಪಿ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಪ್ರಧಾನಮಂತ್ರಿಗಳ ಭಾಷಣಗಳ ನೇರ ಪ್ರಸಾರ ಒದಗಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ್ನು ಬಳಸಿ ಅನುವಾದ ಮಾಡಿಕೊಡಲು ಮುಂದಾಗಿದೆ.

ಹಿಂದಿ ಮಾತನಾಡದ ರಾಜ್ಯಗಳಿಗೆ ಪ್ರಧಾನಿ ಭೇಟಿ ನೀಡಿದ ಸಂದರ್ಭದ ಅವರ ಭಾಷಣಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗುತ್ತದೆ. ಈ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯು ಬೇಡಿಕೆಗೆ ಅನುಗುಣವಾಗಿ ಪ್ರಧಾನ ಮಂತ್ರಿಯ ಹಿಂದಿ ಭಾಷಣವನ್ನು ಪ್ರಾದೇಶಿಕ ಭಾಷೆಗೆ ಡಬ್ ಮಾಡುತ್ತದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ
ದೇಶದ ಮೊದಲ ನೀರೊಳಗಿನ ಮೆಟ್ರೋ ಸೇವೆಗೆ ಪ್ರಧಾನಿ ಮೋದಿ ನಾಳೆ ಚಾಲನೆ

“ಮಾಧ್ಯಮ ಗ್ಯಾಲರಿಯಲ್ಲಿ ಸಂಸತ್ತು ಅಧಿವೇಶನಗಳ ಸಮಯದಲ್ಲಿ ಭಾಷಣಗಳು ಅಥವಾ ಕಲಾಪಗಳನ್ನು ನೈಜ ಸಮಯದಲ್ಲಿ ಹೇಗೆ ವೀಕ್ಷಿಸುತ್ತಾರೆ ಎಂಬುದನ್ನು ಜನರು ನೋಡಿರುತ್ತಾರೆ. ಕೃತಕ ಬುದ್ಧಿಮತ್ತೆಯ ಬಳಕೆಯಿಂದಲೂ ಇದನ್ನು ಮಾಡಲಾಗುತ್ತಿದೆ ಎಂದು ಬಿಜೆಪಿಯ ಹಿರಿಯ ಕಾರ್ಯನಿರ್ವಾಹಕರೊಬ್ಬರು ಹೇಳುತ್ತಾರೆ. ಇಂತಹ ವ್ಯವಸ್ಥೆಯಿಂದ ಪ್ರಧಾನಿಯವರ ಭಾಷಣಗಳಿಗೆ ವ್ಯಾಪಕ ಮತ್ತು ಆಳವಾದ ವ್ಯಾಪ್ತಿ ಪ್ರಚಾರವನ್ನು ನೀಡಬಹುದೆಂಬುದು ಬಿಜೆಪಿಯ ಉದ್ದೇಶವಾಗಿದೆ.

ಪ್ರಧಾನಿಯವರ ಭಾಷಣಗಳನ್ನು ಈಗ ಬಂಗಾಳಿ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಮರಾಠಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 2023 ರಲ್ಲಿ ಪ್ರಧಾನಿ ಮೊದಲು AI ತಂತ್ರಜ್ಞಾನವನ್ನು ಬಳಸಿದರು. ವಾರಣಾಸಿಯ ಕಾಶಿ ತಮಿಳು ಸಂಗಮಂನಲ್ಲಿ ಅವರ ಭಾಷಣವನ್ನು ನೇರವಾಗಿ ಪ್ರೇಕ್ಷಕರಿಗೆ ಎಐ ಬಳಕೆ ಮೂಲಕ ಅನುವಾದ ಮಾಡಿ ಕೊಡಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com