ಬ್ಯಾಂಕ್ ಖಾತೆ ಜಪ್ತಿ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಆದಾಯ ತೆರಿಗೆ ನ್ಯಾಯಾಧಿಕರಣ

ಐ-ಟಿ ರಿಟರ್ನ್ ಸಲ್ಲಿಸದ ಕಾರಣಕ್ಕೆ ವಿಧಿಸಲಾಗಿದ್ದ 210 ಕೋಟಿ ರೂ.ಗಳ ದಂಡವನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಶುಕ್ರವಾರ ವಜಾಗೊಳಿಸಿದೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಐ-ಟಿ ರಿಟರ್ನ್ ಸಲ್ಲಿಸದ ಕಾರಣಕ್ಕೆ ವಿಧಿಸಲಾಗಿದ್ದ 210 ಕೋಟಿ ರೂ.ಗಳ ದಂಡವನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಶುಕ್ರವಾರ ವಜಾಗೊಳಿಸಿದೆ. ಅಲ್ಲದೆ ಪಕ್ಷದ ಜಪ್ತಿ ಮಾಡಿದ ಬ್ಯಾಂಕ್ ಖಾತೆಗಳನ್ನು ಬಿಡುಗಡೆ ಮಾಡಲು ನ್ಯಾಯಾಧಿಕರಣ ನಿರಾಕರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್, ಲೋಕಸಭೆ ಚುನಾವಣೆಗೂ ಮುನ್ನ ಪಕ್ಷದ ಹಣವನ್ನು ಜಪ್ತಿ ಮಾಡಿದ ಆದೇಶ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಕಿಡಿ ಕಾರಿದ್ದಾರೆ.

"ಕಾಂಗ್ರೆಸ್ ಪಕ್ಷದ ಖಾತೆಯಲ್ಲಿನ 270 ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದು, ಇಂತಹ ಪರಿಸ್ಥಿತಿಯಲ್ಲಿ ನ್ಯಾಯಯುತ ಚುನಾವಣೆಯನ್ನು ಹೇಗೆ ನಿರೀಕ್ಷಿಸಬಹುದು?" ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
ನಮ್ಮ ಬ್ಯಾಂಕ್ ಖಾತೆಗಳಿಂದ ಐಟಿ ಇಲಾಖೆ 65 ಕೋಟಿ ರೂ. ವಿತ್ ಡ್ರಾ ಮಾಡಿದೆ: ಕಾಂಗ್ರೆಸ್ ಆರೋಪ

ಈ ಸಂಬಂಧ ಪಕ್ಷ ಕಾನೂನಿನ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಮತ್ತು "ಶೀಘ್ರದಲ್ಲೇ" ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಮಾಕೆನ್ ತಿಳಿಸಿದ್ದಾರೆ.

ನ್ಯಾಯಾಧಿಕರಣದ ಆದೇಶವನ್ನು ದೃಢಪಡಿಸಿದ ಕಾಂಗ್ರೆಸ್‌ ಕಾನೂನು ಘಟಕದ ಮುಖ್ಯಸ್ಥ ವಿವೇಕ್ ಟಂಖಾ ಅವರು, ಈ ವಿಷಯದಲ್ಲಿ ನ್ಯಾಯಾಧಿಕರಣ ತನ್ನ ಹಿಂದಿನ ಪೂರ್ವನಿದರ್ಶನಗಳನ್ನು ಸಹ ಅನುಸರಿಸಿಲ್ಲ ಮತ್ತು ಪಕ್ಷ ಶೀಘ್ರದಲ್ಲೇ ಹೈಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಹೇಳಿದ್ದಾರೆ.

"ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆದೇಶದಿಂದ ನಾವು ನಿರಾಶೆಗೊಂಡಿದ್ದೇವೆ. ನಾವು ಶೀಘ್ರದಲ್ಲೇ ಹೈಕೋರ್ಟ್‌ಗೆ ಹೋಗುತ್ತೇವೆ" ಎಂದು ಟಂಖಾ ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com