ಕೇದಾರನಾಥ ದೇವಾಲಯ ಮೇ 10ರಿಂದ ಭಕ್ತರ ದರ್ಶನಕ್ಕೆ ಮುಕ್ತ

ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ಇಂದು ಕೇದಾರನಾಥ ಧಾಮ ತೆರೆಯುವ ಘೋಷಣೆ ಮಾಡಿದರು.
ಕೇದಾರನಾಥ ದೇವಾಲಯ (ಸಂಗ್ರಹ ಚಿತ್ರ)
ಕೇದಾರನಾಥ ದೇವಾಲಯ (ಸಂಗ್ರಹ ಚಿತ್ರ)

ಕೇದಾರನಾಥ: ಮೇ 10 ರಂದು ಬೆಳಗ್ಗೆ 7 ಗಂಟೆಗೆ ಭಕ್ತರಿಗಾಗಿ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಿದೆ ಎಂದು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ(BKTC) ಶುಕ್ರವಾರ ಮಹಾಶಿವರಾತ್ರಿಯ ಸಂದರ್ಭದಲ್ಲಿ ಪ್ರಕಟಿಸಿದೆ.

ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ಇಂದು ಕೇದಾರನಾಥ ಧಾಮ ತೆರೆಯುವ ಘೋಷಣೆ ಮಾಡಿದರು.

ಪ್ರತಿ ವರ್ಷ ಲಕ್ಷಗಟ್ಟಲೆ ಜನ ಭೇಟಿ ನೀಡುವ ಹಿಮಾಲಯದ ಈ ದೇವಾಲಯದ ದ್ವಾರಗಳನ್ನು ಚಳಿಗಾಲದಲ್ಲಿ ಹಿಮದ ಕಾರಣದಿಂದಾಗಿ ಮುಚ್ಚಲಾಗುತ್ತದೆ.

ಕೇದಾರನಾಥ ದೇವಾಲಯ (ಸಂಗ್ರಹ ಚಿತ್ರ)
ಬದರಿನಾಥ್-ಕೇದಾರನಾಥ ದೇವಸ್ಥಾನಕ್ಕೆ 5 ಕೋಟಿ ರೂ. ದೇಣಿಗೆ ನೀಡಿದ ಮುಖೇಶ್ ಅಂಬಾನಿ

ಮಹಾಶಿವರಾತ್ರಿಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ ಅಜಯ್ ಅವರು, ಕಳೆದ ಯಾತ್ರೆಯ ಋತುವಿನಲ್ಲಿ ಕೇದಾರನಾಥ ಧಾಮಕ್ಕೆ ದಾಖಲೆಯ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದು, ಈ ವರ್ಷ ಯಾತ್ರಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ರುದ್ರಪ್ರಯಾಗದಲ್ಲಿರುವ ಕೇದಾರನಾಥ ಧಾಮದ ಬಾಗಿಲುಗಳನ್ನು ವರ್ಷದಲ್ಲಿ 6 ತಿಂಗಳು ಮುಚ್ಚಲಾಗುತ್ತದೆ. ಇನ್ನು, 6 ತಿಂಗಳ ಕಾಲ ಉಖಿಮಠ, ಪ್ರತಿ ವರ್ಷ ಮಹಾಶಿವರಾತ್ರಿಯ ದಿನದಂದು ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com