ಈಶಾನ್ಯ ರಾಜ್ಯದಲ್ಲಿ ನಮ್ಮ 5 ವರ್ಷಗಳ ಸಾಧನೆಯನ್ನು ಮಾಡಲು ಕಾಂಗ್ರೆಸ್ ಗೆ 20 ವರ್ಷ ತೆಗೆದುಕೊಳ್ಳುತ್ತಿತ್ತು: ಮೋದಿ
ಅಸ್ಸಾಂ: ಈಶಾನ್ಯ ರಾಜ್ಯಗಳಲ್ಲಿ ತಮ್ಮ ಸರ್ಕಾರ 5 ವರ್ಷಗಳಲ್ಲಿ ಸಾಧಿಸಿದ್ದನ್ನು ಸಾಧಿಸುವುದಕ್ಕೆ ಕಾಂಗ್ರೆಸ್ ಗೆ 20 ವರ್ಷ ಬೇಕಾಗುತ್ತಿತ್ತು ಎಂದು ಮೋದಿ ಹೇಳಿದ್ದಾರೆ. ಅರುಣಾಚಲ ಪ್ರದೇಶದ ಇಟಾನಗರದಲ್ಲಿ 55,600 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
ಭಾರತದ ವ್ಯಾಪಾರ-ವಹಿವಾಟು, ಪ್ರವಾಸೋದ್ಯಮ ಹಾಗೂ ದಕ್ಷಿಣ ಏಷ್ಯಾ, ಪೂರ್ವ ಏಷ್ಯಾದೊಂದಿಗಿನ ಇತರ ಸಂಬಂಧಗಳಿಗೆ ಈಶಾನ್ಯ ಬಲಿಷ್ಠ ಕೊಂಡಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಇಂದು 55,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಅನಾವರಣಗೊಳಿಸಲಾಗಿದೆ.
ನಾವು ಈಶಾನ್ಯ ರಾಜ್ಯದಲ್ಲಿ 5 ವರ್ಷಗಳಲ್ಲಿ ಮಾಡಿದ್ದನ್ನು ಮಾಡುವುದಕ್ಕೆ ಕಾಂಗ್ರೆಸ್ ಗೆ 20 ವರ್ಷಗಳ ಅವಧಿ ಬೇಕಾಗುತ್ತಿತ್ತು ಎಂದು ಮೋದಿ ಕಾಂಗ್ರೆಸ್ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದರು. ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರೆ ‘ಮೋದಿ ಗ್ಯಾರಂಟಿ’ ಏನೆಂಬುದನ್ನು ಸ್ಪಷ್ಟವಾಗಿ ನೋಡಬಹುದು ಮೋದಿ ಗ್ಯಾರಂಟಿ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಇಡೀ ಈಶಾನ್ಯ ರಾಜ್ಯವೇ ಗಮನಿಸುತ್ತಿದೆ ಎಂದರು.
ತಾವು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದರಿಂದ ವಿರೋಧ ಪಕ್ಷದ ಭಾರತದ ನಾಯಕರು ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ತಾವು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದರಿಂದ ವಿರೋಧ ಪಕ್ಷದ ಭಾರತದ ನಾಯಕರು ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ