ಸಾಲ ಮರುಪಾವತಿ ಮಾಡದ ಮಹಿಳೆಯ ಮಗನನ್ನು ಅಡ ಇಟ್ಟುಕೊಂಡ ಹಣಕಾಸು ಸಂಸ್ಥೆ!

ಮೈಕ್ರೋಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬರು ಸಾಲ ಮರುಪಾವತಿ ಮಾಡದೇ ಇರುವ ಪರಿಣಾಮ ಸಂಸ್ಥೆ ಆಕೆಯ ಕಿರಿಯ ಮಗನನ್ನು ಅಡ ಇಟ್ಟುಕೊಂಡಿರುವ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ.
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಜಾರ್ಖಂಡ್: ಮೈಕ್ರೋಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬರು ಸಾಲ ಮರುಪಾವತಿ ಮಾಡದೇ ಇರುವ ಪರಿಣಾಮ ಸಂಸ್ಥೆ ಆಕೆಯ ಕಿರಿಯ ಮಗನನ್ನು ಅಡ ಇಟ್ಟುಕೊಂಡಿರುವ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ. ತನಗೆ ಎದುರಾಗಿರುವ ಪರಿಸ್ಥಿತಿಯನ್ನು ಮಹಿಳೆ ಸ್ಥಳೀಯ ಪೊಲೀಸರ ಬಳಿ ಹೇಳಿಕೊಂಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿಗಳು, 14 ದಿನಗಳ ಕಾಲ ಮೈಕ್ರೋಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳ ವಶದಲ್ಲಿದ್ದ ಆಕೆಯ ಮಗನನ್ನು ಬಂಧನದಿಂದ ಬಿಡಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಇಬ್ಬರು ಸಿಬ್ಬಂದಿಗಳ ವಿರುದ್ಧ ಹಾಗೂ ಇನ್ನಿತರ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದ ಸಂಬಂಧ ಮೈಕ್ರೋಫೈನಾನ್ಸ್ ನ ಶಾಖಾ ವ್ಯವಸ್ಥಾಪಕ ನಿಗಮ್ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಉಮಾಶಂಕರ್ ತಿವಾರಿ ಮತ್ತು ಮತ್ತೋರ್ವನಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

(ಸಾಂಕೇತಿಕ ಚಿತ್ರ)
ಗದಗ: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಸಂತೋಷ್ ರಾಮ್ ಎಂಬುವವರ ಪತ್ನಿ ಭಾವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗರ್ವಾ ಎಸ್ಪಿ ದೀಪಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಅಪ್ರಾಪ್ತ ವಯಸ್ಕನ ಹೇಳಿಕೆಯನ್ನು ಐಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ, ಈ ಸಂದರ್ಭದಲ್ಲಿ ವಿಷಯ ನಿಜವೆಂದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಅಪ್ರಾಪ್ತ ವಯಸ್ಕನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು, ಇದು ಈ ವಿಷಯದ ಬಗ್ಗೆ ಪ್ರತ್ಯೇಕ ತನಿಖೆಯನ್ನು ಪ್ರಾರಂಭಿಸಿದೆ. ಆದರೆ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ ಎಸ್ಪಿ, ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.

(ಸಾಂಕೇತಿಕ ಚಿತ್ರ)
ಸಾಲ ಪಡೆದು 439.7 ಕೋಟಿ ರೂಪಾಯಿ ವಂಚನೆ ಆರೋಪ: ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲು

ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ 40,000 ರೂಪಾಯಿ ಸಾಲ ಪಡೆದು 18,000 ರೂಪಾಯಿ ಬಾಕಿ ಇರುವಾಗ (ಬಡ್ಡಿ ಮೊತ್ತ ಸೇರಿದಂತೆ) 32,000 ರೂಪಾಯಿ ಮರುಪಾವತಿ ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಂಪನಿಯ ಮ್ಯಾನೇಜರ್ ನಿಗಮ್ ಯಾದವ್ ಉಳಿದ ಮೊತ್ತವನ್ನು ಮರುಪಾವತಿಸುವಂತೆ ಮಹಿಳೆಯ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಅವರು ಹೇಳಿದರು. ಮಹಿಳೆಯ ಮಗನಿಗೆ ಆತನ ಕಿಡ್ನಿಯನ್ನು ಮಾರುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com