ಲೋಕಸಭಾ ಚುನಾವಣೆ: 40 ಕೈ ಅಭ್ಯರ್ಥಿಗಳ ಹೆಸರು ಅಂತಿಮ, ಚಿಂದ್ವಾರದಿಂದ ಕಮಲ್ ನಾಥ್ ಪುತ್ರನಿಗೆ ಟಿಕೆಟ್

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐದು ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಅಸ್ಸಾಂನಲ್ಲಿನ 60 ಕ್ಕೂ ಹೆಚ್ಚು ಸ್ಥಾನಗಳ ಕುರಿತು ಕಾಂಗ್ರೆಸ್ ಉನ್ನತ ನಾಯಕತ್ವ ಸೋಮವಾರ ಚರ್ಚಿಸಿದ್ದು, ಸುಮಾರು 40 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಸೋನಿಯಾ,ಖರ್ಗೆ, ರಾಹುಲ್
ಸೋನಿಯಾ,ಖರ್ಗೆ, ರಾಹುಲ್

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐದು ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಅಸ್ಸಾಂನಲ್ಲಿನ 60 ಕ್ಕೂ ಹೆಚ್ಚು ಸ್ಥಾನಗಳ ಕುರಿತು ಕಾಂಗ್ರೆಸ್ ಉನ್ನತ ನಾಯಕತ್ವ ಸೋಮವಾರ ಚರ್ಚಿಸಿದ್ದು, ಸುಮಾರು 40 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರನ್ನು ಮಧ್ಯಪ್ರದೇಶದ ಚಿಂದ್ವಾರದಿಂದ ಮತ್ತು ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಅವರನ್ನು ರಾಜಸ್ಥಾನದ ಜಲೋರ್ ನಿಂದ ಮತ್ತೊಮ್ಮೆ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆಗೆ ಮುನ್ನ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ಇಬ್ಬರೂ ಬಿಜೆಪಿಗೆ ಬದಲಾಗುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಸ್ಪರ್ಧಿಸುವ ಸಾಧ್ಯತೆಯಿಲ್ಲ.

ಸೋನಿಯಾ,ಖರ್ಗೆ, ರಾಹುಲ್
22 ಬಿಜೆಪಿ ಅಭ್ಯರ್ಥಿಗಳು ಫೈನಲ್: ಶೋಭಾ -ಶೆಟ್ಟರ್ ಗೆ ಟಿಕೆಟ್; ಮೈಸೂರಿಗೆ ರಾಯಲ್ ಸರ್ಪ್ರೈಸ್; ಬೆಂಗಳೂರು ಗ್ರಾಮಾಂತರಕ್ಕೆ ಸಿ.ಎನ್ ಮಂಜುನಾಥ್!

ಪಕ್ಷವು ಚುನಾವಣೆಗೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿತು.

ಸಭೆಯಲ್ಲಿ ರಾಜಸ್ಥಾನ, ಅಸ್ಸಾಂ ಮತ್ತು ಗುಜರಾತ್‌ನಿಂದ ತಲಾ 14, ಮಧ್ಯಪ್ರದೇಶದಿಂದ 16 ಮತ್ತು ಉತ್ತರಾಖಂಡದಿಂದ ಐದು, ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯುದಿಂದ ಒಂದು ಸ್ಥಾನದ ಕುರಿತು ಚರ್ಚಿಸಲಾಯಿತು. ಸೋಮವಾರ ಕಾಂಗ್ರೆಸ್‌ಗೆ ಸೇರಲು ಬಿಜೆಪಿ ತೊರೆದ ರಾಹುಲ್ ಕಸ್ವಾನ್ ಸೇರಿದಂತೆ ರಾಜಸ್ಥಾನದಿಂದ ಸುಮಾರು 10 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com