ಮಿಷನ್ ದಿವ್ಯಾಸ್ತ್ರ: ಸ್ವದೇಶಿ ನಿರ್ಮಿತ ಅಗ್ನಿ 5 ಕ್ಷಿಪಣಿ ಪರೀಕ್ಷೆ ಯಶಸ್ವಿ; ಪ್ರಧಾನಿ ಮೋದಿ ಶ್ಲಾಘನೆ

ಮಿಷನ್ ದಿವ್ಯಾಸ್ತ್ರವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು (ಡಿಆರ್‌ಡಿಒ) ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಅಗ್ನಿ 5 ಕ್ಷಿಪಣಿ ಪರೀಕ್ಷೆ
ಅಗ್ನಿ 5 ಕ್ಷಿಪಣಿ ಪರೀಕ್ಷೆ

ನವದೆಹಲಿ: ಮಿಷನ್ ದಿವ್ಯಾಸ್ತ್ರವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು (ಡಿಆರ್‌ಡಿಒ) ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ಸ್ವಂತವಾಗಿ ಹಲವು ಟಾರ್ಗೆಟ್ ಗಳನ್ನು ಗುರಿಯಾಗಿಸುವ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಮೋದಿ ಶ್ಲಾಘಿಸಿದ್ದು, ವಿಜ್ಞಾನಿಗಳ ಸಾಧನೆಗಳು. ಭಾರತದ ಸ್ವದೇಶಿ ಕ್ಷಿಪಣಿ ಸಾಮರ್ಥ್ಯಗಳನ್ನು ಮುನ್ನಡೆಸುವಲ್ಲಿ ಮಿಷನ್ ದಿವ್ಯಾಸ್ತ್ರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಾ ಡಿಆರ್‌ಡಿಒ ವಿಜ್ಞಾನಿಗಳು ಪ್ರದರ್ಶಿಸಿದ ತಾಂತ್ರಿಕ ಸಾಮರ್ಥ್ಯದ ಬಗ್ಗೆ ಪ್ರಧಾನಿ ಮೋದಿ ಹೆಮ್ಮೆ ವ್ಯಕ್ತಪಡಿಸಿದರು. MIRV ತಂತ್ರಜ್ಞಾನದೊಂದಿಗೆ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಹಾರಾಟವು ದೇಶದ ರಕ್ಷಣಾ ಸನ್ನದ್ಧತೆ ಮತ್ತು ಕಾರ್ಯತಂತ್ರದ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲು ಎಂದು ಟ್ವೀಟ್ ಮಾಡಿದ್ದಾರೆ.

ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯು ಅನೇಕ ಸಿಡಿತಲೆಗಳನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಯೋಜನಾ ನಿರ್ದೇಶಕರು ಮಹಿಳೆಯಾಗಿದ್ದು, ಈ ಕಾರ್ಯಾಚರಣೆಯಲ್ಲಿ ಮಹಿಳೆಯರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದಲ್ಲದೆ, ಮಿಷನ್ ದಿವ್ಯಾಸ್ತ್ರದ ಪರೀಕ್ಷೆಯೊಂದಿಗೆ, ಭಾರತವು MIRV ಸಾಮರ್ಥ್ಯವನ್ನು ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಸೇರಿದೆ. ಈ ಸಾಮರ್ಥ್ಯವು ಭಾರತದ ಬೆಳೆಯುತ್ತಿರುವ ತಾಂತ್ರಿಕ ಶಕ್ತಿಯ ಸಂಕೇತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com