ಪಂಜಾಬ್‌: ಜೈಲು ಸಿಬ್ಬಂದಿ ಮೇಲೆ ಕೈದಿಗಳ ದಾಳಿ; ಅಶ್ರುವಾಯು ಪ್ರಯೋಗ

ಜೈಲು ಸಿಬ್ಬಂದಿಯ ವರ್ತನೆಯಿಂದ ಅಸಮಾಧಾನಗೊಂಡ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕೇಂದ್ರ ಕಾರಾಗೃಹದ ಕೈದಿಗಳು ಗುರುವಾರ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದು, ವಿಧ್ವಂಸಕ ಕೃತ್ಯ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುರುದಾಸ್ ಪುರ: ಜೈಲು ಸಿಬ್ಬಂದಿಯ ವರ್ತನೆಯಿಂದ ಅಸಮಾಧಾನಗೊಂಡ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕೇಂದ್ರ ಕಾರಾಗೃಹದ ಕೈದಿಗಳು ಗುರುವಾರ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದು, ವಿಧ್ವಂಸಕ ಕೃತ್ಯ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಧರಿವಾಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮನದೀಪ್ ಸಿಂಗ್ ಸಲ್ಗೋತ್ರಾ ಸೇರಿದಂತೆ ಐವರು ಪೊಲೀಸರು ಮತ್ತು ಕೆಲವು ಕೈದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಜೈಲಿನಲ್ಲಿ ಎರಡು ಗುಂಪುಗಳ ಕೈದಿಗಳ ನಡುವೆ ಘರ್ಷಣೆ ನಡೆದಿತ್ತು ಎಂದು ಹೇಳಲಾಗಿದೆ. ಘಟನೆಯ ಕುರಿತು ತನಿಖೆ ನಡೆಸುವಂತೆ ಗುರುದಾಸ್‌ಪುರ ಜಿಲ್ಲಾಧಿಕಾರಿ ಹಿಮಾಂಶು ಅಗರ್ವಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಸೂಚಿಸಿದ್ದಾರೆ. ಜೈಲಿನ ಅಧೀನ ಸಿಬ್ಬಂದಿಯ ನಡವಳಿಕೆ ಸರಿಯಿಲ್ಲ, ಕೆಲವು ಬ್ಯಾರಕ್‌ಗಳಲ್ಲಿ ಜನದಟ್ಟಣೆಯಿಂದ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ, ಅಲ್ಲದೇ ಕಠಿಣ ನಿರ್ಬಂಧಗಳಿವೆ ಎಂದು ಕೈದಿಗಳು ಅಸಮಾಧಾನಗೊಂಡಿರುವುದಾಗಿ ವರದಿಯಾಗಿದೆ.

ಕೈದಿಗಳು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ ನಂತರ, ಗುರುದಾಸ್‌ಪುರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನೆರೆಯ ಪ್ರದೇಶಗಳಾದ ಪಠಾಣ್‌ಕೋಟ್ ಮತ್ತು ಬಟಾಲಾದಿಂದ ಪೊಲೀಸ್ ಸಿಬ್ಬಂದಿಯ ಸೇವೆ ಕೋರಿದ್ದು, ಪೊಲೀಸ್ ಸಿಬ್ಬಂದಿ ಮೇಲೂ ಕಲ್ಲು ತೂರಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com