ಚುನಾವಣಾ ಬಾಂಡ್‌ಗಳ ಸಂಖ್ಯೆ ಪ್ರಕಟಿಸಿ: SBI ಗೆ ಸುಪ್ರೀಂ ಕೋರ್ಟ್ ನೊಟೀಸ್!

ನಾಳೆ ಮಾರ್ಚ್ 16 ರೊಳಗೆ ಎಲ್ಲಾ ಚುನಾವಣಾ ಬಾಂಡ್‌ಗಳಲ್ಲಿನ ಸಂಖ್ಯೆಗಳನ್ನು ಪ್ರಕಟಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೊಟೀಸ್ ನೀಡಿದೆ
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ನಾಳೆ ಮಾರ್ಚ್ 16 ರೊಳಗೆ ಎಲ್ಲಾ ಚುನಾವಣಾ ಬಾಂಡ್‌ಗಳಲ್ಲಿನ ಸಂಖ್ಯೆಗಳನ್ನು ಪ್ರಕಟಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೊಟೀಸ್ ನೀಡಿದೆ. ಈ ಸಂಖ್ಯೆಗಳು ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಪರ್ಕವನ್ನು ಬಹಿರಂಗಪಡಿಸುತ್ತವೆ, ಅಂದರೆ ಯಾರು ದೇಣಿಗೆ ನೀಡಿದರು ನಿರ್ದಿಷ್ಟವಾಗಿ ಯಾವ ಪಕ್ಷಕ್ಕೆ ನೀಡಿದರು ಎಂಬ ಮಾಹಿತಿ ಗೊತ್ತಾಗಲಿದೆ. ಮಾರ್ಚ್ 12 ರಂದು, ಎಸ್‌ಬಿಐ ಬಾಂಡ್‌ಗಳ ದಾಖಲೆಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸಲ್ಲಿಸಿತ್ತು.

ಎಸ್‌ಬಿಐ ಬಾಂಡ್ ನಂಬರ್‌ಗಳನ್ನು ಬಹಿರಂಗಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇಂದು ಬ್ಯಾಂಕ್‌ಗೆ ನೋಟಿಸ್ ನೀಡಿದೆ. ದತ್ತಾಂಶವನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಿದ ನಂತರ ಚುನಾವಣಾ ಆಯೋಗ ಮುಚ್ಚಿದ ಕವರ್‌ನಲ್ಲಿ ಸಲ್ಲಿಸಿದ ಚುನಾವಣಾ ಬಾಂಡ್‌ಗಳ ಡೇಟಾವನ್ನು ಹಿಂತಿರುಗಿಸುವಂತೆ ಅದು ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್
1,368 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ ‘ಲಾಟರಿ ಕಿಂಗ್’ ಅಗ್ರಸ್ಥಾನದಲ್ಲಿ!

ಚುನಾವಣಾ ಆಯೋಗದ ಅಂಕಿಅಂಶವನ್ನು ನಾಳೆ ಸಂಜೆಯೊಳಗೆ ಹಿಂತಿರುಗಿಸಬೇಕು ಮತ್ತು ಭಾನುವಾರ ಸಂಜೆಯೊಳಗೆ ಅದನ್ನು ವೆಬ್ ಸೈಟ್ ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಇಂದು ನಿರ್ದೇಶಿಸಿದೆ. ಭಾರತೀಯ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸಲ್ಲಿಸಿದ ಸೀಲ್ಡ್ ಕವರ್ ದಾಖಲೆಗಳ (ಚುನಾವಣಾ ಬಾಂಡ್‌ಗಳು) ನಕಲುಗಳನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ನಿನ್ನೆ ಇಸಿಐ, ತನ್ನ ಪೋರ್ಟಲ್‌ನಲ್ಲಿ ರಾಜಕೀಯ ದೇಣಿಗೆ ನೀಡಲು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಘಟಕಗಳ ಸಂಪೂರ್ಣ ಪಟ್ಟಿಯನ್ನು ಹಾಕಿತು. ಹೆಸರುಗಳಲ್ಲಿ ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್, ಸುನಿಲ್ ಭಾರತಿ ಮಿತ್ತಲ್ ಅವರ ಏರ್‌ಟೆಲ್, ಅನಿಲ್ ಅಗರ್ವಾಲ್ ಅವರ ವೇದಾಂತ, ITC, ಮಹೀಂದ್ರ ಮತ್ತು ಮಹೀಂದ್ರಾ, ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸೇವೆಗಳು ಮತ್ತು ಮೇಘಾ ಇಂಜಿನಿಯರಿಂಗ್ ಸೇರಿವೆ.

ಸುಪ್ರೀಂ ಕೋರ್ಟ್
ಎಸ್‌ಬಿಐ ಚುನಾವಣಾ ಬಾಂಡ್‌ಗಳ ಡೇಟಾ; ಇಸಿಐ ವೆಬ್ ಸೈಟ್ ನಲ್ಲಿ ಬಹಿರಂಗ

ಆಡಳಿತಾರೂಢ ಬಿಜೆಪಿಯು 6,000 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ದೇಣಿಗೆಯನ್ನು ಸ್ವೀಕರಿಸಿದೆ ಎಂದು ಈಗಾಗಲೇ ತಿಳಿದಿದ್ದರೂ, ಡೇಟಾ ಡಂಪ್ ಪ್ರತಿ ಘಟಕ ಅಥವಾ ವ್ಯಕ್ತಿಯಿಂದ ದೇಣಿಗೆ ನೀಡಿದ ಮೊತ್ತವನ್ನು ಮಾತ್ರ ಬಹಿರಂಗಪಡಿಸಿದೆ. ಯಾರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎನ್ನುವುದನ್ನು ಹೇಳುವುದಿಲ್ಲ. ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷದ ಪೈಕಿ ಬಿಜೆಪಿ ನಂತರ ಕಾಂಗ್ರೆಸ್ ಇದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com