JKLF ಯಾಸಿನ್ ಮಲಿಕ್ ಬಣ, ಜೆಕೆ ಪೀಪಲ್ಸ್ ಫ್ರೀಡಂ ಲೀಗ್ ಗೆ ಕೇಂದ್ರ ಸರ್ಕಾರ ನಿಷೇಧ

ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫ್ರೀಡಂ ಲೀಗ್ ಮತ್ತು ನಾಲ್ಕು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಲೀಗ್ ಬಣಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಜೆಕೆಎಲ್ ಎಫ್ ಅಧ್ಯಕ್ಷ ಮೊಹಮ್ಮದ್ ಯಾಸಿನ್ ಮಲಿಕ್(ಸಂಗ್ರಹ ಚಿತ್ರ)
ಜೆಕೆಎಲ್ ಎಫ್ ಅಧ್ಯಕ್ಷ ಮೊಹಮ್ಮದ್ ಯಾಸಿನ್ ಮಲಿಕ್(ಸಂಗ್ರಹ ಚಿತ್ರ)

ನವದೆಹಲಿ: ಕೈದಿಯಾಗಿರುವ ಭಯೋತ್ಪಾದಕ ಆರೋಪಿ ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫ್ರೀಡಂ ಲೀಗ್ ಮತ್ತು ನಾಲ್ಕು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಲೀಗ್ ಬಣಗಳನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಉತ್ತೇಜಿಸುವಲ್ಲಿ ತೊಡಗಿದ್ದಕ್ಕಾಗಿ ಕೇಂದ್ರದ ಮೋದಿ ಸರ್ಕಾರವು ನಿಷೇಧಿಸಿದೆ.

ಈ ಬಗ್ಗೆ ನಿರ್ಧಾರ ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಯಾರಾದರೂ ಸವಾಲು ಹಾಕಿದರೆ ಕಠಿಣ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಜೆಕೆಎಲ್ ಎಫ್ ಅಧ್ಯಕ್ಷ ಮೊಹಮ್ಮದ್ ಯಾಸಿನ್ ಮಲಿಕ್(ಸಂಗ್ರಹ ಚಿತ್ರ)
UAPA Act: ಜಮ್ಮು-ಕಾಶ್ಮೀರ ನ್ಯಾಷನಲ್ ಫ್ರಂಟ್ ಸಂಘಟನೆಗೆ ಕೇಂದ್ರ ಸರ್ಕಾರ 5 ವರ್ಷ ನಿಷೇಧ!

ಪ್ರತ್ಯೇಕ ಅಧಿಸೂಚನೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಜೆ-ಕೆ ಪೀಪಲ್ಸ್ ಲೀಗ್ ಜೆಕೆಪಿಎಲ್ (ಮುಖ್ತಾರ್ ಅಹ್ಮದ್ ವಾಜಾ), ಜೆಕೆಪಿಎಲ್ (ಬಶೀರ್ ಅಹ್ಮದ್ ತೋಟ), ಜೆಕೆಪಿಎಲ್ (ಗುಲಾಮ್ ಮೊಹಮ್ಮದ್ ಖಾನ್) ಮತ್ತು ಯಾಕೂಬ್ ಶೇಖ್ ನೇತೃತ್ವದ ಜೆಕೆಪಿಎಲ್ (ಅಜೀಜ್ ಶೇಖ್) ನ ನಾಲ್ಕು ಬಣಗಳನ್ನು ನಿಷೇಧಿಸಿದೆ.

"ಮೋದಿ ಸರ್ಕಾರವು 'ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಯಾಸಿನ್ ಮಲಿಕ್ ಬಣ)' ನ್ನು ಇನ್ನೂ ಐದು ವರ್ಷಗಳ ಅವಧಿಗೆ 'ಕಾನೂನುಬಾಹಿರ ಸಂಘ' ಎಂದು ಘೋಷಿಸಿದೆ" ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫ್ರೀಡಂ ಲೀಗ್ ನ್ನು ಐದು ವರ್ಷಗಳ ಕಾಲ ನಿಷೇಧಿತ ಗುಂಪು ಎಂದು ಘೋಷಿಸಲಾಗಿದೆ. ಭಯೋತ್ಪಾದನೆಯ ಮೂಲಕ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತೆಯನ್ನು ಉತ್ತೇಜಿಸುವ, ಸಹಾಯ ಮಾಡುವ ಮತ್ತು ಉತ್ತೇಜಿಸುವ ಮೂಲಕ ಭಾರತದ ಸಮಗ್ರತೆಗೆ ಈ ಸಂಘಟನೆಗಳು ಬೆದರಿಕೆ ಹಾಕಿದೆ ಎಂದು ಸಚಿವರು ತಿಳಿಸಿದ್ದಾರೆ.

"ಮೋದಿ ಸರ್ಕಾರವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಮತ್ತು ಸಂಘಟನೆಗಳನ್ನು ರಕ್ಷಿಸುವುದಿಲ್ಲ" ಎಂದು ಅಮಿತ್ ಶಾ ಪುನರುಚ್ಛರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com