ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬದರಿನಾಥ್ ಶಾಸಕ ರಾಜೇಂದ್ರ ಭಂಡಾರಿ

ಉತ್ತರಾಖಂಡ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಪ್ರಕ್ರಿಯೆ ತೀವ್ರಗೊಂಡಿದೆ.
ಬಿಜೆಪಿ ಸೇರಿದ
ಬಿಜೆಪಿ ಸೇರಿದ TNIE

ಉತ್ತರಾಖಂಡ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಪ್ರಕ್ರಿಯೆ ತೀವ್ರಗೊಂಡಿದೆ.

ಬದರಿನಾಥ ಕ್ಷೇತ್ರದ ಶಾಸಕ ರಾಜೇಂದ್ರ ಭಂಡಾರಿ ಭಾನುವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ರಾಜೇಂದ್ರ ಭಂಡಾರಿ ಅವರ ರಾಜೀನಾಮೆಯನ್ನು ವಿಧಾನಸಭೆಯ ಸ್ಪೀಕರ್ ಸಹ ಅಂಗೀಕರಿಸಿದ್ದಾರೆ. ಇದೀಗ ಬದರಿನಾಥ್ ವಿಧಾನಸಭಾ ಸ್ಥಾನವು ಮಾರ್ಚ್ 17ರಿಂದ ತೆರವಾಗಿದೆ.

ಉತ್ತರಾಖಂಡದ ಬದರಿನಾಥ್ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಂದ್ರ ಸಿಂಗ್ ಭಂಡಾರಿ ಅವರು ಭಾನುವಾರ ಮಧ್ಯಾಹ್ನ (ಮಾರ್ಚ್ 17) ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಅನಿಲ್ ಬಲುನಿ ಅವರ ಸಮ್ಮುಖದಲ್ಲಿ ರಾಜೇಂದ್ರ ಭಂಡಾರಿ ಬಿಜೆಪಿ ಸೇರಿದರು. ರಾಜೇಂದ್ರ ಭಂಡಾರಿ ಪ್ರಸ್ತುತ ಕಾಂಗ್ರೆಸ್‌ನಿಂದ ಬದರಿನಾಥ್‌ನ ಶಾಸಕರಾಗಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಸ್ತುತ ರಾಜ್ಯಾಧ್ಯಕ್ಷರನ್ನು ಸೋಲಿಸಿದ್ದರು.

ಬಿಜೆಪಿ ಸೇರಿದ
ರಾಜ್ಯ ಸರ್ಕಾರ ಲೂಟಿಯಲ್ಲಿ ತೊಡಗಿದೆ, ಕಾಂಗ್ರೆಸ್ ಗೆ ಭ್ರಷ್ಟಾಚಾರವೇ ಆಕ್ಸಿಜನ್: ಪ್ರಧಾನಿ ಮೋದಿ

ಬಿಜೆಪಿ ಸೇರಿದ ನಂತರ ರಾಜೇಂದ್ರ ಭಂಡಾರಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಕಳೆದ 15 ದಿನಗಳಿಂದ ರಾಜೇಂದ್ರ ಭಂಡಾರಿ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿದ್ದರೂ ರಾಜೇಂದ್ರ ಭಂಡಾರಿ ಸೇರಿದಂತೆ ಅವರ ಬೆಂಬಲಿಗರು ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಕೇವಲ 24 ಗಂಟೆಗಳ ಹಿಂದೆ, ಕಾಂಗ್ರೆಸ್‌ನ ಪೌರಿ ಅಭ್ಯರ್ಥಿ ಗಣೇಶ್ ಗೋಡಿಯಾಲ್ ಅವರ ಸಾರ್ವಜನಿಕ ಸಭೆಯಲ್ಲಿ, ರಾಜೇಂದ್ರ ಭಂಡಾರಿ ಅವರು ಬಿಜೆಪಿ ಸೇರುವ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದರು. ಆದರೆ ಕೇವಲ 24 ಗಂಟೆಗಳ ನಂತರ ರಾಜೇಂದ್ರ ಭಂಡಾರಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com