ಈರೋಡ್ ನಲ್ಲಿ 3 ಲಕ್ಷ ರೂಪಾಯಿ ವಶಕ್ಕೆ ಪಡೆದ ತಮಿಳುನಾಡು ಪೊಲೀಸರು

ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದ್ದು, ನೀತಿ ಸಂಹಿತೆ ಜಾರಿಗೊಂಡಿದೆ. ಈ ಹಂತದಲ್ಲಿ ತಮಿಳುನಾಡು ಪೊಲೀಸರು ಈರೋಡ್ ನಲ್ಲಿ 3 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ.
ಹಣ ವಶಕ್ಕೆ (ಸಂಗ್ರಹ ಚಿತ್ರ)
ಹಣ ವಶಕ್ಕೆ (ಸಂಗ್ರಹ ಚಿತ್ರ)Online desk
Updated on

ಈರೋಡ್: ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದ್ದು, ನೀತಿ ಸಂಹಿತೆ ಜಾರಿಗೊಂಡಿದೆ. ಈ ಹಂತದಲ್ಲಿ ತಮಿಳುನಾಡು ಪೊಲೀಸರು ಈರೋಡ್ ನಲ್ಲಿ 3 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ. ರಿಟರ್ನಿಂಗ್ ಆಫೀಸರ್, ಈರೋಡ್ ಜಿಲ್ಲಾಧಿಕಾರಿ, ರಾಜ್ ಗೋಪಾಲ್ ಸುನ್ಕರ ನೇತೃತ್ವದಲ್ಲಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಬೆಳಿಗ್ಗೆ ವೆಟ್ಟು ಕಟ್ಟು ವಲಸು ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಅಧಿಕಾರಿಗಳು ದ್ವಿಚಕ್ರವಾಹನ ಸವಾರನೋರ್ವನನ್ನು ತಡೆದು ಆತನ ಬಳಿ ಇದ್ದ 3 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಮೊತ್ತಕ್ಕೆ ಸೂಕ್ತ ದಾಖಲೆಗಳಿಲ್ಲದ ಕಾರಣ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡು ಈರೋಡ್ ಜಿಲ್ಲೆಯ ವಡಿವೇಲು ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅದೇ ರೀತಿ ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಇಬ್ಬರು ವ್ಯಾಪಾರಿಗಳು ಬಟ್ಟೆಗಳನ್ನು ಹೊಂದಿರುವ ಬಂಡಲ್ ಮತ್ತು ಖರೀದಿಗೆ ಸರಿಯಾದ ದಾಖಲೆಗಳನ್ನು ಹೊಂದಿರದಿರುವುದನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ ಪತ್ತೆ ಮಾಡಿದೆ. ಬಟ್ಟೆಗಳನ್ನು ತಂಡ ವಶಪಡಿಸಿಕೊಂಡಿದೆ. ನಂತರ ವ್ಯಾಪಾರಿಗಳು ಬಿಲ್‌ಗಳನ್ನು ಸಲ್ಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com