ಮುಂಬೈ: ಅಟಲ್ ಸೇತುವಿಂದ ಜಿಗಿದು ವೈದ್ಯೆ ಆತ್ಮಹತ್ಯೆ!

ದಕ್ಷಿಣ ಮುಂಬೈ ನ್ನು ನವಿ ಮುಂಬೈ ಜೊತೆಗೆ ಸಂಪರ್ಕಿಸುವ ಅತಿ ಉದ್ದದ ಸೇತುವೆ ಅಟಲ್ ಸೇತುವಿನಿಂದ ಜಿಗಿದು ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಟಲ್ ಸೇತು
ಅಟಲ್ ಸೇತುOnline Desk

ಮುಂಬೈ: ದಕ್ಷಿಣ ಮುಂಬೈ ನ್ನು ನವಿ ಮುಂಬೈ ಜೊತೆಗೆ ಸಂಪರ್ಕಿಸುವ ಅತಿ ಉದ್ದದ ಸೇತುವೆ ಅಟಲ್ ಸೇತುವಿನಿಂದ ಜಿಗಿದು ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಟಲ್ ಸೇತುವಿನಿಂದ ಸಮುದ್ರಕ್ಕೆ ವೈದ್ಯೆ ಕಳೆದ ಕೆಲವು ವರ್ಷಗಳಿಂದ ಖಿನ್ನತೆ ಎದುರಿಸುತ್ತಿದ್ದರು ಎಂದು ತಿಳಿದುಬಂದಿದೆ.

ಥಾಣೆ ಜಿಲ್ಲೆಯ ಭಿವಂಡಿ ಮೂಲದವರಾದ ಈ ವೈದ್ಯೆ ಟ್ಯಾಕ್ಸಿಯಲ್ಲಿ ಸಂಚರಿಸುತ್ತಿದ್ದರು. ಅಟಲ್ ಸೇತು ಬಳಿ ಬಂದಾಗ ಚಾಲಕನಿಗೆ ಕಾರು ನಿಲ್ಲಿಸಲು ಸೂಚನೆ ನೀಡಿದ್ದು, ಕೆಳಗಿಳಿಯುತ್ತಿದ್ದಂತೆಯೇ ಆಕೆ ಸಮುದ್ರಕ್ಕೆ ಜಿಗಿದಿದ್ದಾರೆ.

ಅಟಲ್ ಸೇತು
ಬೆಂಗಳೂರು: ಖಾಸಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ; ಬೆಂಕಿ ಹಚ್ಚಿಕೊಂಡು ತಾಯಿ ಮಕ್ಕಳು ಆತ್ಮಹತ್ಯೆ!

ಅಟಲ್ ಸೇತುವನ್ನು ಈ ವರ್ಷದ ಜನವರಿ ತಿಂಗಳಲ್ಲಿ ಉದ್ಘಾಟಿಸಲಾಗಿತ್ತು. ಘಟನೆ ನಡೆಯುತ್ತಿದ್ದಂತೆಯೇ ಟ್ಯಾಕ್ಸಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಯನ್ನು ಪತ್ತೆ ಮಾಡಲು ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ಮಾಡಿದರಾದರೂ ಆಕೆಯ ಸುಳಿವು ಈ ವರೆಗೂ ಲಭ್ಯವಾಗಿಲ್ಲ.

ಅಟಲ್ ಸೇತು
ಮಗು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ: ಪೊಲೀಸರು

ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ದಿನವೇ ಭಿವಂಡಿ ವಿಭಾಗದ ಪೊಲೀಸ್ ಠಾಣೆಯಲ್ಲಿ ಆಕೆಯ ತಂದೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವೈದ್ಯೆಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಕುರಿತ ಪತ್ರ ಲಭ್ಯವಾಗಿದ್ದು, ಅದರಲ್ಲಿ ಆಕೆ 8 ವರ್ಷಗಳಿಂದ ಖಿನ್ನತೆ ಎದುರಿಸುತ್ತಿದ್ದರು ಅಟಲ್ ಸೇತುವಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಆಕೆಯ ಸಾವಿಗೆ ಯಾರೂ ಜವಾಬ್ದಾರರಾಗಬಾರದು, ಆಕೆಯನ್ನು ಸ್ಥಳಕ್ಕೆ ಕರೆದೊಯ್ದ ಟ್ಯಾಕ್ಸಿ ಡ್ರೈವರ್ ಕೂಡ ಹೊಣೆಗಾರರಾಗಬಾರದು ಎಂದು ಆತ್ಮಹತ್ಯೆ ಪತ್ರದಲ್ಲಿ ಆಕೆ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ನವಿ ಮುಂಬೈನ ನ್ಹವಾ ಶೇವಾ ಪೊಲೀಸರು ಭಿವಾಂಡಿ ಮತ್ತು ಇತರ ಏಜೆನ್ಸಿಗಳ ಸಹವರ್ತಿಗಳೊಂದಿಗೆ ಮಹಿಳೆಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com